ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ (Aparna) ಜು.11ರಂದು ನಿಧನರಾಗಿದ್ದಾರೆ. ಇದೀಗ ನಟಿಯ ಅಂತಿಮ ದರ್ಶನ ಪಡೆಯಲು ಅವರ ಸ್ವಗೃಹಕ್ಕೆ ಸ್ಯಾಂಡಲ್‌ವುಡ್ ಕಲಾವಿದರು ಆಗಮಿಸುತ್ತಿದ್ದಾರೆ. ಮಜಾ ಟಾಕೀಸ್ ಶೋನ ಸಹನಟಿ ರೂಪಿಕಾ (Actress Roopika) ಕೂಡ ಅಪರ್ಣಾ ಅಂತಿಮ ದರ್ಶನ ಪಡೆದಿದ್ದು, ಅವರ ನಿಧನಕ್ಕೆ ಭಾವುಕರಾಗಿದ್ದಾರೆ. ಇದನ್ನೂ ಓದಿ:ನಿರೂಪಣೆ ನೀವಿಲ್ಲದೇ ಅಪೂರ್ಣ ಅಪರ್ಣಾ ಅಕ್ಕ: ಅನುಶ್ರೀ ಭಾವುಕ
Advertisement
ಅಪರ್ಣಾ ಅಕ್ಕ ಜೊತೆ ಸುಮಾರು 170 ರಿಂದ 200 ಎಪಿಸೋಡ್ ಮಜಾ ಟಾಕೀಸ್‌ನಲ್ಲಿ ನಟಿಸಿದ್ದೀನಿ. ಅಪರ್ಣಾ ಅಂದರೆ ನನಗೆ ಅಕ್ಕ ಇದ್ದ ಹಾಗೆ ಇದ್ದರು. ಮಜಾ ಟಾಕೀಸ್ ವರ ಒನ್ ಅಂಡ್ ಓನ್ಲಿ ವರಲಕ್ಷ್ಮಿ ಆಗಿದ್ದರು. ಅವರು ಬಿಟ್ಟರೇ ಆ ಪಾತ್ರನ ಬೇರೆ ಯಾರು ಮಾಡೋಕೆ ಆಗುತ್ತಿರಲಿಲ್ಲ ಎಂದು ನಟಿ ರೂಪಿಕಾ ಮಾತನಾಡಿದ್ದಾರೆ.
Advertisement
Advertisement
ಅವರನ್ನು ಮಿಸ್ ಮಾಡಿಕೊಳ್ತೀನಿ ಅಂತಾ ಹೇಳೋಕೆ ಆಗೋಲ್ಲ. ಅವರ ನಟನೆ, ವಾಯ್ಸ್ ನಮ್ಮ ಜೊತೆ ಟ್ರಾವೆಲ್ ಮಾಡುತ್ತಾ ಇರುತ್ತೆ. ಕಲಾವಿದರು ಹೋದ ಮೇಲೂ ಜೀವಂತವಾಗಿ ಇರುತ್ತಾರೆ. ಅದು ನಮಗೆ ವರದಾನ ಎಂದು ನಟಿಯ ಕುರಿತು ರೂಪಿಕಾ ಮಾತನಾಡಿದ್ದಾರೆ. ಅವರ ನಿಧನದ ಸುದ್ದಿ ಕೇಳಿದಾಗ ಶಾಕ್ ಆಯ್ತು. 8 ತಿಂಗಳ ಹಿಂದೆ ಶೋವೊಂದರಲ್ಲಿ ಅವರನ್ನು ಭೇಟಿ ಮಾಡಿದ್ದೆ ಆಗ ನಗುತ್ತಲೇ ಖುಷಿಯಿಂದ ಮಾತನಾಡಿದರು. ಚೆನ್ನಾಗಿ ಡ್ಯಾನ್ಸ್ ಮಾಡಿದೆ ಎಂದು ನನಗೆ ಹೇಳಿದ್ದರು. ಅವರ ಮುಖದಲ್ಲಿ ಎಂದಿಗೂ ನಗು ಮಾಸುತ್ತಿರಲಿಲ್ಲ ಎಂದು ನಟಿ ಸ್ಮರಿಸಿದ್ದಾರೆ.
Advertisement
ಅಂದಹಾಗೆ, ಬಹಳ ದಿನಗಳಿಂದಲೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಪರ್ಣಾ ಅವರು ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರು ದೂರದರ್ಶನದಲ್ಲಿ ಸೀನಿಯರ್ ಗ್ರೇಡ್ ನಿರೂಪಕಿಯಾಗಿದ್ದ ಅಪರ್ಣಾ, ಆಕಾಶವಾಣಿ ನಿರೂಪಕಿಯಾಗಿ ಕೆಲಸ ನಿರ್ವಹಿಸಿದ್ದರು. ಅಲ್ಲದೇ ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ಅಭಿನಯಿಸಿದ್ದರು. ಕನ್ನಡದ ಯಶಸ್ವಿ ನಿರೂಪಕಿಯಾಗಿ 3 ದಶಕಗಳನ್ನು ಪೂರೈಸಿದ್ದಾರೆ.
ಕಿರುತೆರೆಯಲ್ಲಿ ‘ಮೂಡಲಮನೆ’, `ಮುಕ್ತ’ ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಅಪರ್ಣಾ, 2013 ರಲ್ಲಿ ಬಿಗ್‌ಬಾಸ್ ಕನ್ನಡದ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ್ದರು. 2015 ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ `ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿ ಕನ್ನಡ ಕಲಾಪ್ರಿಯರ ಮನಗೆದ್ದಿದ್ದರು. 2014 ರಲ್ಲಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಘೋಷಣೆಯಾಗುವ ಪ್ರಯಾಣಿಕರು ಹತ್ತುವ ಮತ್ತು ಇಳಿಯುವ ಸೂಚನೆಗೆ ಧ್ವನಿ ಗೂಡಿಸಿದ್ದರು.