– ಅಪರ್ಣಾ ಜಾಗ ಖಾಲಿಯಾಗಿಯೇ ಉಳಿಯಲಿದೆ
ಉಡುಪಿ: ಅಪರ್ಣಾ (Aparna) ಕೊನೆಯುಸಿರೆಳೆಯುವ ಮೂಲಕ ಸ್ವಚ್ಛ ನಿರೂಪಣೆ, ಸ್ವರಭಾರ, ಕನ್ನಡದ ಧ್ವನಿ ಎಲ್ಲವೂ ಅಡಗಿಹೋಯಿತು ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಕಂಬನಿ ಮಿಡಿದರು.
- Advertisement -
ಉಡುಪಿಯಲ್ಲಿ (Udupi) ಮಾತನಾಡಿದ ಅವರು, ಮಸಣದ ಹೂ ಚಿತ್ರದ ಮೂಲಕ ಅಪರ್ಣಾ ಚಿತ್ರಲೋಕಕ್ಕೆ ಪದಾರ್ಪಣೆ ಮಾಡಿದರು. ನಮ್ಮ ಸರ್ಕಾರ ಇದ್ದಾಗ ಮುಖ್ಯಮಂತ್ರಿಗಳು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳ ನಿರೂಪಣೆಗೆ ಅವರೇ ಬರುತ್ತಿದ್ದರು. ಕರಾವಳಿಯ ಕಂಬಳದ ಬಗ್ಗೆ ನಿರೂಪಣೆ ಮಾಡುವಾಗ, ಕಂಬಳದ ಗುರಿಕಾರ ಪ್ರಶಸ್ತಿ ಸ್ವೀಕರಿಸಲು ಬರಬೇಕು ಎಂದು ಹೇಳಿದ್ದರು. ಕಂಬಳದ ಬಗ್ಗೆ ಅಪರ್ಣಾಗೆ ಕಲ್ಪನೆ ಇರಲಿಲ್ಲ. ಆದರೆ ವಿಚಾರವನ್ನು ತಿಳಿದುಕೊಂಡು ನಿರೂಪಣೆ ಮಾಡುತ್ತಿದ್ದರು ಎಂದು ಹಿಂದಿನ ಅನುಭವವನ್ನು ಬಿಚ್ಚಿಟ್ಟರು. ಇದನ್ನೂ ಓದಿ: Dengue Alert: ರಾಜ್ಯದಲ್ಲಿ ಒಂದೇ ದಿನ 400ಕ್ಕೂ ಹೆಚ್ಚು ಕೇಸ್ ಪತ್ತೆ!
- Advertisement -
- Advertisement -
ಕನ್ನಡದ ಕಾರ್ಯಕ್ರಮಕ್ಕೆ ಬಂದು ಯಜಮಾನರು ಕಂಬಳ ಕೋಣ ಓಡಿಸುವವರು ಸ್ಥಳದಲ್ಲಿದ್ದ ಎಲ್ಲರನ್ನು ಮಾತನಾಡಿಸಿ, ವಿಚಾರಗಳನ್ನು ಸಂಗ್ರಹಿಸಿ, ವೇದಿಕೆಯಲ್ಲಿ ನಿಂತು ಆಳ ಅಧ್ಯಯನ ಮಾಡಿ ಅರಿತವರಂತೆ ಮಾತನಾಡುವ ಚಾಕಚಕ್ಯತೆ ಅಪರ್ಣಾಗೆ ಇತ್ತು ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಒಬ್ಬ ಭಯಂಕರ ಸರ್ವಾಧಿಕಾರಿ, ಭ್ರಷ್ಟಾಚಾರಿ - ಸಿಎಂ ಸ್ಥಾನದಿಂದ ಕೆಳಗಿಳಿಸಲು ಹೈಕಮಾಂಡ್‍ಗೆ ಸಾಧ್ಯವೇ?: ಜೋಶಿ
- Advertisement -
ಅಪರ್ಣಾ ಯಾವುದೇ ಕಾರ್ಯಕ್ರಮಗಳಿಗೆ ತಮ್ಮ ನಿರೂಪಣೆಯ ಮೂಲಕ ಮೆರುಗು ನೀಡುತ್ತಿದ್ದರು. ಕನ್ನಡದ ಧ್ವನಿಯೊಂದು ಹುದುಗಿ ಹೋಗಿದೆ. ಅಪರ್ಣಾ ನಿಧನದಿಂದ ಕರ್ನಾಟಕವೇ ದುಃಖದಲ್ಲಿ ಮುಳುಗಿದೆ. ಅವರ ಧ್ವನಿ ಭಾರ ಜನಸಾಮಾನ್ಯರ ಮೇಲೂ ಪರಿಣಾಮ ಬೀರಿದೆ. ಅಪರ್ಣಾ ಕನ್ನಡದ ಮನೆಮಗಳು. ಅರ್ಪಣಾ ಅವರ ಜಾಗ ಖಾಲಿಯಾಗಿಯೇ ಉಳಿಯಲಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ – ಸಿಎಂ ಖಡಕ್ ಮಾತು