ಬೆಂಗಳೂರು: ಪಾಕಿಸ್ತಾನ ಪರ ಯಾರೇ ಘೋಷಣೆ ಕೂಗಿದ್ರೂ ತಪ್ಪು. ಅದು ದೇಶದ್ರೋಹ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯಿಸಿದರು.
ಮಂಗಳೂರಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂದಿದ್ದಕ್ಕೆ ಹತ್ಯೆಯಾಗಿದೆ ಎಂಬ ಆರೋಪ ವಿಚಾರವಾಗಿ ಮಾತನಾಡಿದ ಸಿಎಂ, ಯಾರು ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿದ್ರು? ಯಾರೇ ಪಾಕಿಸ್ತಾನ ಪರ ಘೋಷಣೆ ಕೂಗಿದ್ರೆ ಅದು ತಪ್ಪು. ಈ ಬಗ್ಗೆ ತನಿಖೆ ಮಾಡಿ ಕ್ರಮ ತೆಗೆದುಕೊಳ್ತೀ ಎಂದು ತಿಳಿಸಿದರು. ಇದನ್ನೂ ಓದಿ: ಅಯೋಧ್ಯೆಯ ಹೊಸ ಬಾಬ್ರಿ ಮಸೀದಿಗೆ ಪಾಕ್ ಸೈನಿಕರು ಮೊದಲ ಇಟ್ಟಿಗೆ ಇಡುವ ಕಾಲ ದೂರವಿಲ್ಲ: ನಾಲಿಗೆ ಹರಿಬಿಟ್ಟ ಪಾಕ್ ಶಾಸಕಿ
ಯಾರೇ ಪಾಕಿಸ್ತಾನ ಪರ ಘೋಷಣೆ ಕೂಗಿದ್ರು ತಪ್ಪೇ, ಅದು ದೇಶದ್ರೋಹ. ತನಿಖೆ ನಡೆಯುತ್ತಿದೆ, 15 ಜನರ ಅರೆಸ್ಟ್ ಆಗಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ, ಬಸವ ಜಯಂತಿ ಹಿನ್ನೆಲೆ ವಿಧಾನಸೌಧದ ಮುಂಭಾಗದಲ್ಲಿರುವ ಬಸವೇಶ್ವರ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಪುಷ್ಪನಮನ ಸಲ್ಲಿಸಿದರು. ಸಚಿವ ಎಂಬಿ ಪಾಟೀಲ್, ಸಿಎಸ್ ಶಾಲಿನಿ ರಜನೀಶ್ ಸೇರಿ ಹಲವರು ಭಾಗಿಯಾಗಿದ್ದರು. ಇದನ್ನೂ ಓದಿ: ಪಾಕಿಸ್ತಾನಕ್ಕೆ ಜೈಕಾರ ಹಾಕೋರಿಗೆ ಚಪ್ಪಲಿಯಿಂದ ಹೊಡೆಯಿರಿ – ಯತ್ನಾಳ್