ಕೋಲಾರ: ನಿಯತ್ತಾಗಿ ಇರುವವರು ಯಾರು ಬೇಕಾದರೂ ಕಾಂಗ್ರೆಸ್‌ಗೆ (Congress) ಬರಬಹುದು. ನಿಯತ್ತಿಲ್ಲದವರು ಕಾಂಗ್ರೆಸ್‌ಗೆ ಬರುವುದು ಬೇಡ ಎಂದು ಶಾಸಕ ಕೊತ್ತೂರು ಮಂಜುನಾಥ್ (Kothur G. Manjunath) ಹೇಳಿದ್ದಾರೆ.
ಉಪಚುನಾವಣೆಗಳ ಕುರಿತು ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುವ ಮೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಚನ್ನಪಟ್ಟಣದಲ್ಲಿ (Channapatna) ಕಡಿಮೆ ಅಂತರದಲ್ಲಿ ಗೆಲ್ಲುತ್ತೇವೆ. ಶಿಗ್ಗಾಂವಿ ಮತ್ತು ಸಂಡೂರು ಗೆಲುತ್ತೇವೆ. ಸಂಡೂರಿನಲ್ಲಿ ಜೆಡಿಎಸ್ ಎರಡು ಬಾರಿ ಗೆದಿದ್ದೆ ಅಷ್ಟೇ. ಉಳಿದಂತೆ ಎಲ್ಲಾ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಚನ್ನಪಟ್ಟಣಕ್ಕೆ ಅಚ್ಚರಿ ಅಭ್ಯರ್ಥಿಯಾಗಲಿದ್ದಾರೆ. ನಮಗೆ ಗೊತ್ತು ಯಾರು ಅಭ್ಯರ್ಥಿ ಅಂತಾ. ಆದರೆ ಈಗ ಬಹಿರಂಗಪಡಿಸುವುದಿಲ್ಲ. ನಾಳೆ ನಾಡಿದ್ದು ಎಲ್ಲರಿಗೂ ಗೊತ್ತಾಗಲಿದೆ ಎಂದರು. ಇದನ್ನೂ ಓದಿ: ನಾನು ಅವರ ಹಾಸಿಗೆಯ ಮೇಲೆ ಕುಳಿತಿದ್ದೆ – ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮತ್ತೆ ಸಾಕ್ಷಿ ಮಲಿಕ್ ಆರೋಪ
ಯೋಗೇಶ್ವರ್ (CP Yogeshwar) ಕಾಂಗ್ರೆಸ್ ಬರುವ ಕುರಿತು ಪ್ರತಿಕ್ರಿಯಿಸಿ, ಯೋಗೇಶ್ವರ್ ಬಂದರೆ ಸ್ವಾಗತ. ಅವರು ಒಳ್ಳೆಯ ಮನುಷ್ಯ. ಸ್ವಲ್ಪ ಕೋಪಿಷ್ಟ ಅಷ್ಟೇ. ಯೋಗೇಶ್ವರ್ ಅವರಿಗೆ ಅವರದೇ ಮತಬ್ಯಾಂಕ್ ಇದೆ. ಮುಸ್ಲಿಂ ಬಂಧುಗಳು ಸಹ ಮತ ಹಾಕುತ್ತಾರೆ. ಅವರಿಗೆ ಒಳ್ಳೆಯ ಹೆಸರು ಇದೆ. ಜೆಡಿಎಸ್ ತೀರ್ಮಾನ ನೋಡಿಕೊಂಡು ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರು ಮಳೆಯ ಸಮಸ್ಯೆಗೆ ಪರಿಹಾರ ಕೊಡದ ಈ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ: ಸುರೇಶ್ ಬಾಬು
ಡಿ.ಕೆ.ಶಿವಕುಮಾರ್‌ಗೆ ಸಿಬಿಐ ನೋಟಿಸ್ ಕುರಿತು ಮಾತನಾಡಿ, ಅದು ದೊಡ್ಡವರ ವಿಷಯ. ಪ್ರತಿ ಚುನಾವಣೆ ಬಂದಾಗ ಡಿಕೆಶಿಗೆ ನೋಟಿಸ್ ಬರುತ್ತದೆ. ಡಿಕೆಶಿ ಅವರು ಮಾವಿನ ಮರದ ರೀತಿ. ರಸ್ತೆಯಲ್ಲಿ ಹೋಗುವವರೆಲ್ಲರೂ ಒಂದು ಕಲ್ಲು ಹಾಕುತ್ತಾರೆ. ದೇಶದಲ್ಲಿ ತಪ್ಪು ಮಾಡದ ವ್ಯಕ್ತಿ ಯಾರೂ ಇಲ್ಲ. ಗೊತ್ತೋ ಗೊತ್ತಿಲ್ಲದೋ ತಪ್ಪು ಮಾಡುತ್ತೇವೆ. ಅದಕ್ಕೆ ಪದೇ ಪದೇ ಗಾಯದ ಮೇಲೆ ಬರೆ ಎಳೆಯಬಾರದು. ಇದನ್ನು ವಿರೋಧ ಪಕ್ಷದವರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆಯಾರ್ಭಟ: ದಿ. ಅಬ್ದುಲ್ ಕಲಾಂ ಸಂಬಂಧಿಕರಿಗೆ ತಟ್ಟಿದ ಜಲ ಕಂಟಕ