ಬೆಂಗಳೂರು: ಪದೇ ಪದೇ ನನ್ನ ದಲಿತ ನಾಯಕ ಅಂತ ಏಕೆ ಕರೆಯುತ್ತಿದ್ದೀರಿ. ದಲಿತ ಸಿಎಂಗೆ ಏನು ಮೀಸಲಾತಿ ಇದೆಯೇ ಎಂದು ಪ್ರಶ್ನಿಸಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಗರಂ ಆಗಿದ್ದಾರೆ.
ಇಂದು ಮಲ್ಲಿಕಾರ್ಜುನ ಖರ್ಗೆ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಡಿಸೆಂಬರ್ 9ರ ನಂತರ ಮಲ್ಲಿಕಾರ್ಜುನ ಖರ್ಗೆ ಸಿಹಿ ಹಂಚುತ್ತಾರೆ. ದಲಿತರು ಸಿಎಂ ಆಗುತ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವನ್ನು ಪ್ರಸ್ತಾಪ ಮಾಡಿ ಪ್ರಶ್ನೆ ಕೇಳಿದ್ದಕ್ಕೆ ದಲಿತ ಸಿಎಂಗೆ ಮೀಸಲಾತಿ ಇದೆಯೇ ಎಂದು ಪ್ರಶ್ನಿಸಿದರು.
Advertisement
ನಾನು 55 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಪಕ್ಷದಲ್ಲಿ ಇಷ್ಟು ವರ್ಷದಿಂದ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಹೀಗಿದ್ದೂ ನಾನು ಯಾಕೆ ದಲಿತ ಸಿಎಂ ಆಗಬೇಕು? ನನ್ನನ್ನು ಆ ರೀತಿಯಾಗಿ ಕರೆಯಬೇಡಿ ಎಂದರು.
Advertisement
Advertisement
ನನ್ನನ್ನು ಉಲ್ಲೇಖಿಸಿ ಇನ್ನೂ ದಲಿತ ಸಿಎಂ ಆಗಬೇಕು ಎನ್ನುವುದಾದರೆ ಐ ಫೀಲ್ ವೆರೀ ಬ್ಯಾಡ್. ಡೋಂಟ್ ಕಾಲ್ ದಲಿತ. ನನ್ನನ್ನು ಒಂದು ಜಾತಿಗೆ ಮೀಸಲು ಮಾಡಬೇಡಿ. ಕುಮಾರಸ್ವಾಮಿ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಗರಂ ಆಗಿ ಪ್ರತಿಕ್ರಿಯಿಸಿದರು.
Advertisement
ರಾಜ್ಯದ ಜನರ ವಾತಾವರಣ ಗಮನಿಸಿದ್ರೆ ಕಾಂಗ್ರೆಸ್ಸಿಗೆ ಹೆಚ್ಚಿನ ಸೀಟ್ ಸಿಗಲಿದೆ. ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುವುದಿಲ್ಲ. ಬಳಿಕ ಏನ್ ಮಾಡಬೇಕು ಅಂತ ಹೈಕಮಾಂಡ್ ತೀರ್ಮಾನ ಮಾಡಲಿದೆ. 15 ಕ್ಷೇತ್ರಗಳಲ್ಲಿ ಬಹುತೇಕ ನಾವು ಗೆಲ್ಲುತ್ತೇವೆ. ಜನರು ಕಾಂಗ್ರೆಸ್ ಪರವಾಗಿ ಇದ್ದಾರೆ ಎಂದು ಈ ವೇಳೆ ಭವಿಷ್ಯ ನುಡಿದರು.