ನವದೆಹಲಿ: ಪಾಕಿಸ್ತಾನ ಸೇನೆ ಯಾವುದೇ ರೀತಿಯ ದುಷ್ಕೃತ್ಯ ನಡೆಸಿದಲ್ಲಿ ತಕ್ಕ ಶಿಕ್ಷೆ ನೀಡುವ ಮೂಲಕವೇ ಪ್ರತ್ಯುತ್ತರ ನೀಡಲಾಗುವುದು. ಭಯೋತ್ಪಾದನೆಯ ವಿರುದ್ಧದ ಹೋರಾಟದಿಂದ ಯಾವುದೇ ರೀತಿಯ ನಷ್ಟವಾಗುವುದಿಲ್ಲ ಎಂದು ಭಾರತೀಯ ಸೇನೆ ಮುಖ್ಯಸ್ಥ ಬಿಪಿನ್ ರಾವತ್ ಎಚ್ಚರಿಸಿದ್ದಾರೆ.
ಕಾರ್ಗಿಲ್ ಯುದ್ಧದ 20ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಸೇನೆ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದು, ಒಳ ನುಸುಳುವಿಕೆಗೆ ಅವಕಾಶ ನೀಡುವ ಕುರಿತು ಆಲೋಚಿಸುತಿದ್ದು, ಇದಕ್ಕೆ ಭಾರತ ತಕ್ಕ ಉತ್ತರ ನೀಡಲಿದೆ. ಭಯೋತ್ಪಾದಕರಿಗೆ ಶಿಕ್ಷೆ ನೀಡಿದರೆ, ಯಾವುದೇ ನಷ್ಟವಿಲ್ಲ ಹಾಗೂ ಯಾವುದೇ ದೇಶ ವಿರೋಧಿಸುವುದಿಲ್ಲ ಎಂದು ತಿಳಿಸಿದ್ದಾರೆ.
Army Chief General Bipin Rawat at seminar on '20 years after Kargil conflict': Despite several odds including several operations conducted on arduous terrain and diplomatic necessities,, the valiant forces and nation was proud in achieving a resounding victory. pic.twitter.com/roPB7jbvlr
— ANI (@ANI) July 13, 2019
ನಮ್ಮ ಸೇನೆ ಶಸ್ತ್ರ ಸಜ್ಜಿತವಾಗಿ ನಮ್ಮ ಗಡಿ ರಕ್ಷಿಸಲು ಸನ್ನದ್ಧವಾಗಿದೆ. ಎದುರೇಟು ಹಾಗೂ ಶಿಕ್ಷೆಯ ಮೂಲಕ ಪ್ರತಿಕ್ರಿಯೆ ನೀಡಿ ದುಷ್ಕೃತ್ಯಗಳನ್ನು ಹತ್ತಿಕ್ಕುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ವಿದೇಶಿಗರ ಆಕ್ರಮಣ ಹಾಗೂ ಭಯೋತ್ಪಾದನೆ ವಿರುದ್ಧ ಹೋರಾಡುವ ವಿಧಾನಗಳು ಬದಲಾಗಿವೆ. ಹೊಸ ವಿಧಾನಗಳನ್ನು ಅನುಸರಿಸಬೇಕಿದೆ. ಅಲ್ಲದೆ, ಸೈಬರ್ ಹಾಗೂ ಬಾಹ್ಯಾಕಾಶ ಕ್ಷೇತ್ರಗಳು ಇದೀಗ ಯುದ್ಧದ ಹೊಸ ರಣಾಂಗಣಗಳಾಗಿ ಮಾರ್ಪಟ್ಟಿದ್ದು, ಈ ಬಗ್ಗೆಯು ಅಧುನಿಕ ತಂತ್ರಜ್ಞಾನಗಳ ಮೂಲಕ ನಿಗಾ ವಹಿಸಬೇಕಿದೆ ಎಂದು ಬಿಪಿನ್ ರಾವತ್ ಅಭಿಪ್ರಾಯಪಟ್ಟಿದ್ದಾರೆ.
ಯಾವುದೇ ಭಯೋತ್ಪಾದಕ ಕೃತ್ಯದ ವಿರುದ್ಧದ ಹೋರಾಟಕ್ಕೆ ಶಿಕ್ಷೆಯಾಗುವುದಿಲ್ಲ. ಉರಿ ಮತ್ತು ಬಾಲಾಕೋಟ್‍ನಂತಹ ಸರ್ಜಿಕಲ್ ಸ್ಟ್ರೈಕ್‍ಗಳ ಮೂಲಕ ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟದ ಜಯವೇ ರಾಜಕೀಯ ಮತ್ತು ಸೈನ್ಯದ ಸಂಕಲ್ಪಕ್ಕೆ ಸಾಕ್ಷಿ ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ.