ಚಿಕ್ಕಬಳ್ಳಾಪುರ: ನಿನ್ನೆಯಷ್ಟೇ ಎಲ್ಲೆಡೆ ಗೌರಿ-ಗಣೇಶ ಹಬ್ಬವನ್ನು (Ganesha festival) ಸಂಭ್ರಮದಿಂದ ಆಚರಿಸಲಾಗಿದೆ. ಕೆಲವೆಡೆ ಮಂಗಳವಾರ (ಇಂದು) ಹಬ್ಬ ಆಚರಿಸಿದ್ರೆ, ಇನ್ನೂ ಕೆಲವೆಡೆ ಸೋಮವಾರವೇ ಹಬ್ಬ ಆಚರಿಸಿ ಮುಕ್ತಾಯಗೊಳಿಸಿದ್ದಾರೆ. ಗೌರಿ-ಗಣೇಶನ ಹಬ್ಬ ಮುಗಿದಿದ್ದೇ ತಡ ಇಂದು ಮಾಂಸಹಾರ (Meat) ಪ್ರಿಯರ ಕಣ್ಣು ಚಿಕನ್, ಮಟನ್, ಮೀನು ಆಹಾರ ಪದಾರ್ಥಗಳತ್ತ ಬಿದ್ದಿದೆ.
Advertisement
ಚಿಕ್ಕಬಳ್ಳಾಪುರದಲ್ಲಿ (Chikkaballapura) ಮೀನು ಮಾರಾಟಗಾರನೊರ್ವ ಯಾವುದೇ ಮೀನು ತಗೊಂಡ್ರೂ 99 ರೂ. ಮಾತ್ರ ಅಂತ ಆಫರ್ ಕೊಟ್ಟಿದ್ದು ಮೀನು (Fish) ಖರೀದಿಗಾಗಿ ಜನ ಮುಗಿಬೀಳುತ್ತಿದ್ದಾರೆ. ಈ ಆಫರ್ ಇರುವುದು ಮಂಗಳವಾರ (ಇಂದು) ಮಾತ್ರ. ಇದನ್ನೂ ಓದಿ: ಹಿಂದೆ ಏನಾಯ್ತು ಅನ್ನೋದು ಮುಖ್ಯವಲ್ಲ, ಇಂದು ಏನಾಯ್ತು ಎಂಬುದು ಮುಖ್ಯ: ದಿನೇಶ್ ಗುಂಡೂರಾವ್
Advertisement
Advertisement
ಹೌದು. ಶ್ರಾವಣ ಮಾಸ ಅದ್ರಲ್ಲೂ ಈ ಬಾರಿ ಆಧಿಕ ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಎರಡು ತಿಂಗಳಿಂದ ಮಾಂಸಹಾರ ಸೇವನೆಗೆ ಬ್ರೇಕ್ ಬಿದ್ದಿತ್ತು. ಈಗ ಗೌರಿ-ಗಣೇಶ ಹಬ್ಬ ಮುಗಿದಿದ್ದೇ ತಡ ನಾನ್‌ವೆಜ್ ಪ್ರಿಯರು ಮಾಂಸ ಪದಾರ್ಥಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಇದನ್ನೂ ಓದಿ: ಭೂಮಿ ಕಕ್ಷೆ ತೊರೆದ ಆದಿತ್ಯ ಎಲ್1 ನೌಕೆ – 110 ದಿನಗಳ ಸೂರ್ಯ ಯಾತ್ರೆ ಆರಂಭ
Advertisement
ಚಿಕ್ಕಬಳ್ಳಾಪುರದ ಗುಡಿಬಂಡೆ ಅಮಾನಿ ಬೈರಸಾಗರ ಕೆರೆಯಲ್ಲಿ ಮೀನು ಸಾಕಾಣಿಕೆ ಗುತ್ತಿಗೆ ಪಡೆದಿರೋ ಬಿಲಾಲ್ ಕಡಿಮೆ ದರಕ್ಕೆ ಮೀನು ಮಾರಾಟ ಮಾಡುತ್ತಿದ್ದಾರೆ. ಪ್ರತಿ ದಿನ ಯಾವುದೇ ಮೀನಿಗೂ ಕೆಜಿಗೆ 150 ರೂ. ಮಾರಾಟ ಮಾಡ್ತಿದ್ದ ಬಿಲಾಲ್ ಇಂದು 99 ರೂ.ಗೆ ಆಫರ್ ಮಾಡಿದ್ದಾರೆ. ಬೈರಸಾಗರ ಕೆರೆಯ ಮೀನು ಅಂದ್ರೆ ಜನರಿಗೂ ಬಹಳ ಫೇವರೆಟ್ ಆಗಿರುವುದರಿಂದ ಮುಗಿಬಿದ್ದು ಖರೀದಿಸುತ್ತಿದ್ದಾರೆ.
Web Stories