ಬಾಳಸಂಗಾತಿ ಬಗ್ಗೆ ಆ್ಯಂಕರ್ ಅನುಶ್ರೀ ಹೇಳಿದ್ದು ಹೀಗೆ

Public TV
2 Min Read
ANU 5

ಬೆಂಗಳೂರು: ಮದುವೆಯೇ ಎಲ್ಲದಕ್ಕೂ ಉತ್ತರ ಅಲ್ಲ. ಮದುವೆಗಿಂತಲೂ ಮೀರಿ ಜೀವನದಲ್ಲಿ ಬದುಕಬೇಕಾದಂತಹ ಎಷ್ಟೋ ವಿಷಯಗಳಿವೆ ಅಂತ ಆ್ಯಂಕರ್ ಅನುಶ್ರೀ ಹೇಳಿದ್ದಾರೆ.

ಗೌರಿ ಗಣೇಶ ಹಬ್ಬದ ಪ್ರಯುಕ್ತ ಪಬ್ಲಿಕ್ ಟಿವಿಯ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ರು. ಇದೇ ವೇಳೆ ಮದುವೆಯ ಬಗ್ಗೆ ಪ್ರಸ್ತಾಪಿಸಿದಾಗ, ಮದುವೆ-ಮಕ್ಕಳು ಇದನ್ನು ನಾನು ವಿರೋಧಿಸಲ್ಲ. ಅದೂ ಒಂದು ಪಾರ್ಟ್ ಆಫ್ ಲೈಫ್ ವಿನಃ ಅದೇ ಜೀವನವಲ್ಲ. ನಾನು ಇನ್ನೂ ಸಾಧಿಸಬೇಕಾದುದು ಸಾಕಷ್ಟಿವೆ. ಎಷ್ಟೊಂದು ಜಾಗಗಳನ್ನು ನೋಡಲು ಇದೆ. ತುಂಬಾ ಊರುಗಳನ್ನು ಸುತ್ತಬೇಕು ಅನ್ನೋ ಆಸೆ ಇದೆ. ಹಾಗಂತ ಇನ್ನೂ 10 ವರ್ಷದವರೆಗೆ ಹಿಂಗೆ ಇರ್ತಿನಾ ಅನ್ನೋದನ್ನು ಹೇಳಕ್ಕಾಗಲ್ಲ. ಯಾವ ಯಾವ ಸಮಯದಲ್ಲಿ ಏನೇನು ಆಗಬೇಕು ಅದು ಆಗಿಯೇ ಆಗತ್ತೆ ಅಂತ ಹೇಳಿದ್ರು.

ಈ ಕಂಕಣ ಭಾಗ್ಯ ಹಾಗೂ ಮನೆ ಕಟ್ಟುವ ಭಾಗ್ಯ ಇವೆಲ್ಲವೂ ತಾನಾಗಿಯೇ ಒಲಿದು ಬರಬೇಕು ಅಂದ್ರು. ಇನ್ನು ತನ್ನ ಮದುವೆಯಾಗೋ ಹುಡುಗ ಹೇಗಿರ್ಬೇಕು ಅಂತಾನೂ ಅನುಶ್ರೀ ಹೇಳಿದ್ರು. ನನ್ನ ಮದುವೆ ಆಗೋ ಹುಡುಗ ಬೆಳ್ಳಗಿರಬಾರದು. ತುಂಬಾ ನೀಟ್ ಆಗಿ ಡ್ರೆಸ್ ಮಾಡ್ಬಾರದು. ಡ್ಯಾನ್ಸ್ ಹಾಗೂ ಸ್ವಲ್ಪ ಹಾಡು ಹೇಳಲು ಬರಬೇಕು. ಇನ್ನೊಂದು ಮುಖ್ಯವಾದುದೆಂದರೆ ಆತ ನಾನು ಹೇಳಿದ್ದಕ್ಕೆಲ್ಲ ಸೈ ಹೇಳಬಾರದು. ನನ್ನ ಮಾತನ್ನು ವಿರೋಧಿಸಬೇಕು. ಇಂತಹ ಗುಣಗಳಿರುವ ಹುಡುಗ ನನಗೆ ಇಷ್ಟ ಆಗ್ತಾನೆ ಅಂತ ತಮಾಷೆ ಮಾಡಿದ್ರು.

ANU 1

ದಕ್ಷಿಣ ಅಮೆರಿಕಕ್ಕೆ ಹೋಗಬೇಕು. ಡಿಸ್ಕವರಿ ಚಾನೆಲ್ ನಲ್ಲಿ ಬರುವಂತಹ ಬಿದಿರಿನ ಒಳಗಡೆ ಅಡುಗೆ ಮಾಡೋದೆಲ್ಲ ನೋಡಕ್ಕೆ ಚೆನ್ನಾಗಿರತ್ತೆ. ಅಂತಹ ಜಾಗಗಳನ್ನು ನೋಡಬೇಕೆಂದು ಆಸೆಯಿದೆ. ಮಾಲ್ಡೀವ್ಸ್, ಸ್ವಿಜಲ್ರ್ಯಾಂಡ್, ಕನ್ಯಾಕುಮಾರಿಗೆಲ್ಲ ಹೋಗಬೇಕೆಂಬ ಆಸೆ ಇದೆ. ಒಟ್ಟಿನಲ್ಲಿ ನನಗೆ ಟ್ರಾವೆಲಿಂಗ್ ಅಂದ್ರೆ ತುಂಬಾ ಇಷ್ಟ. ಈವಾಗ ನನಗೊಂದಷ್ಟು ಜವಾಬ್ದಾರಿಗಳಿವೆ. ಹೀಗಾಗಿ ಬೇಕಾಬಿಟ್ಟಿಯಾಗಿ ಸುತ್ತಾಡಕ್ಕೆ ಸಾಧ್ಯವಾಗ್ತಿಲ್ಲ. ಈ ಜವಾಬ್ದಾರಿಗಳು ಸ್ವಲ್ಪ ಕಡಿಮೆ ಆದ ಬಳಿಕ ನನಗೆ ಅಂತ ನಾನು ಬದುಕಕ್ಕೆ ಇಷ್ಟಪಡ್ತೀನಿ ಅಂತ ಹೇಳಿದ್ರು.

ತಿನ್ನೋದು ಅಂದ್ರೆ ಬಹಳ ಇಷ್ಟ. ಸ್ವೀಟ್ ಅಂತೂ ನನ್ನ ಫೇವರಿಟ್. ಶೂಟಿಂಗ್‍ಗೆಂದು ಹೋದಾಗ ನಾವು ಫಸ್ಟ್ ಹುಡುಕೋದೆ ಇಂಡಿಯನ್ ಹೊಟೇಲ್ ಎಲ್ಲಿದೆ ಅಂತ. ಯಾಕಂದ್ರೆ ಬೇರೆ ಕಡೆಗಳಲ್ಲಿ ಸಿಗೋ ಆಹಾರದಲ್ಲಿ ಉಪ್ಪು, ಖಾರ ಇರೋದೆ ಇಲ್ಲ. ಪಿಜ್ಜಾ ಬರ್ಗರ್ ನಂತಹ ವಿದೇಶಿ ಆಹಾರವನ್ನು ಇಷ್ಟಪಡಲ್ಲ. ಪಾರ್ಟಿ, ಪಬ್ ಇವುಗಳಿಂದಲೂ ದೂರು. ಒಂದು ಬಾರಿ ಪಾರ್ಟಿಗೆ ಹೋಗಿದ್ದೆ. ಅಲ್ಲಿ ಅಪರಿಚಿತರು ಬಂದು ನಮ್ಮನ್ನು ತಬ್ಬಿಕೊಳ್ಳುವುದು. ಇವೆಲ್ಲ ನನಗೆ ಇಷ್ಟ ಆಗಲ್ಲ. ಹೀಗಾಗಿ ಪಾರ್ಟಿಗೂ ನನಗೂ ಅಷ್ಟೊಂದು ಆಗ್ಬರಲ್ಲ ಅಂತ ಅವರು ಹೇಳಿದ್ರು.

ANU 3

ANU 4

ANU

Share This Article
Leave a Comment

Leave a Reply

Your email address will not be published. Required fields are marked *