ಮದ್ವೆಯಲ್ಲಿ ಅನುಶ್ರೀ ಉಟ್ಟ ಸೀರೆಯ ಬೆಲೆ 2.5 ಲಕ್ಷ ಅಲ್ಲ ಕೇವಲ 2,700 ರೂ.

Public TV
2 Min Read
Anushree 9

ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ (Kannada Anchor Anushree) ಸದ್ಯಕ್ಕೆ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಸರಳ ವಿವಾಹ ಅಂತ ಅವರು ಹೇಳಿಕೊಂಡಿದ್ದರೂ ಅದ್ಧೂರಿಯಂತೆ ಕಂಡುಬಂದಿತ್ತು. ಬಳಿಕ ಮದುವೆಯ ಒಂದೊಂದೇ ವೀಡಿಯೋಗಳನ್ನ ತಮ್ಮ ಇನ್‌ಸ್ಟಾದಲ್ಲಿ ಪೋಸ್ಟ್‌ ಮಾಡುತ್ತಾ ಬರ್ತಿದ್ದಾರೆ ಅನುಶ್ರೀ.

Anushree 1

ಇದೀಗ ಮದುವೆಯ (AnuShree Marriage) ಶಾಸ್ತ್ರಕ್ಕೆ ಧರಿಸಿದ್ದ ಒಂದು ಸೀರೆ ಬಗ್ಗೆ ಹಾಗೂ ಆ ಸೀರೆಯ ಅಸಲಿ ಬೆಲೆ ಬಗ್ಗೆ ಬಹಿರಂಗವಾಗಿ ಮಾಹಿತಿ ಕೊಟ್ಟಿದ್ದಾರೆ. ಇದನ್ನೂ ಓದಿ: ನಮ್ಮನೆ ಅವ್ರ ಮನೆ ಒಂದೇ, ನಾವೆಲ್ಲ ಒಂದೇ ಕುಟುಂಬದವರು: ಯಶ್‌ ತಾಯಿ ಪುಷ್ಪ ಅರುಣ್‌ಕುಮಾರ್

Anushree 8

ಮುಹೂರ್ತಕ್ಕೂ ಮುನ್ನ ನಡೆಯುವ ದೇವತಾ ಕಾರ್ಯ ಶಾಸ್ತ್ರಕ್ಕಾಗಿ ಅನುಶ್ರೀ ಸಿಲ್ವರ್ ಬಣ್ಣದ ಸೀರೆ ಧರಿಸಿದ್ದರು. ನೋಡೋದಕ್ಕೆ ಬೆಲೆ ಬಾಳುವ ಸೀರೆಯಂತೆ ಕಾಣುತ್ತಿತ್ತು. ಇದೀಗ ಆ ಸೀರೆಯ ಬೆಲೆಯನ್ನ ಹೇಳುವ ಮೂಲಕ ಅಚ್ಚರಿ ಮೂಡಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಇಲ್ಲದ ರೂಲ್ಸ್ ದರ್ಶನ್‌ಗೆ ಯಾಕೆ?- ವಕೀಲರ ವಾದ

Anushree 2

ಸಿಲ್ವರ್ ಬಣ್ಣದ ಸೀರೆಯ ಫೋಟೋಗಳನ್ನ ತಮ್ಮ ಇನ್‌ಸ್ಟಾದಲ್ಲಿ ಹಂಚಿಕೊಂಡಿರುವ ಅನುಶ್ರೀ ʻಎಲ್ಲಾ ಪೋಸ್ಟ್‌ಗಳು ಹೇಳ್ತಿವೆ, ಈ ಸೀರೆ ಬೆಲೆ 2.5 ಲಕ್ಷ ಅಂತ. ಆದ್ರೆ ಈ ಸೀರೆಯ ಅಸಲಿ ಬೆಲೆ 2,700 ರೂಪಾಯಿʼ ಎಂದಿದ್ದಾರೆ. ಜೊತೆಗೆ ʻಈ ಕ್ಷಣದ ನಗು ನಾ ಆರಾಧಿಸುವ ದೇವರು, ಆಶೀರ್ವಾದ ಮಾಡಿದ ಪ್ರೀತಿಯ ಕನ್ನಡಿಗರು ಕೊಟ್ಟ ವರʼ ಎಂದು ಹೇಳುವ ಮೂಲಕ ಮದುವೆಯ ಖುಷಿಯನ್ನ ಮೊದಲ ಬಾರಿ ಪದಗಳಲ್ಲಿ ವರ್ಣಿಸಿದ್ದಾರೆ.  ಇದನ್ನೂ ಓದಿ: ಹಿಂದೆಂದೂ ಕಂಡು ಕೇಳರಿಯದ ರುಕ್ಮಿಣಿ ವಸಂತ್ ಬೋಲ್ಡ್ ಫೋಟೋಶೂಟ್

Anushree 6

ಕುಶಾಲನಗರದ ರೋಷನ್ ಜೊತೆ ಅನುಶ್ರೀ ಕಳೆದ ಆಗಸ್ಟ್ 28 ರಂದು ಸಪ್ತಪದಿ ತುಳಿದಿದ್ದರು. ಅದಕ್ಕವರು ಸರಳ ವಿವಾಹ ಎಂದು ಹೇಳಿದ್ದರು. ಇನ್ನೂ ಸರಳವಾಗಿ ಮಂತ್ರಮಾಂಗಲ್ಯ ಮಾಡಿಕೊಳ್ಳಲು ಅನುಶ್ರೀ ಇಷ್ಟಪಟ್ಟಿದ್ದರಂತೆ. ಆದರೆ ಸಾಧ್ಯವಾಗಲಿಲ್ಲ ಎಂದಿದ್ದಾರೆ. ಇದೀಗ ಅನುಶ್ರೀ ಮದುವೆಯಲ್ಲಿ ಉಟ್ಟ ಸೀರೆಯ ಅಸಲಿ ಬೆಲೆ ಹೇಳುವ ಮೂಲಕ ನೀವ್ ಅಂದುಕೊಂಡಿದ್ದೆಲ್ಲ ತಪ್ಪು ಅಸಲಿ ವಿಷಯ ಬೇರೆಯೇ ಇರುತ್ತೆ ಅನ್ನೋದನ್ನ ಮಾರ್ಮಿಕವಾಗಿ ನುಡಿದಿದ್ದಾರೆ.  ಇದನ್ನೂ ಓದಿ: ಕೀನ್ಯಾದಲ್ಲಿ ರಾಜಮೌಳಿ ಗಸ್ತು, ಕೀನ್ಯಾ ಸಚಿವ ಬಿಚ್ಚಿಟ್ಟರು `ಆ’ ರಹಸ್ಯ

Share This Article