Jawan ರಿಲೀಸ್ ದಿನವೇ ಬರುತ್ತಿದೆ ಕನ್ನಡತಿ ಅನುಷ್ಕಾ ಶೆಟ್ಟಿ ಸಿನಿಮಾ

Public TV
2 Min Read
anushka shetty

ತತ ಸೋಲಿನಿಂದ ಹೈರಾಣ ಆಗಿರುವ ಅನುಷ್ಕಾ ಶೆಟ್ಟಿ ನಟನೆಯ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ಸಿನಿಮಾ ಜವಾನ್ ರಿಲೀಸ್ ಆಗ್ತಿರುವ ದಿನವೇ ಬಿಡುಗಡೆಗೆ ಸಜ್ಜಾಗಿದೆ. ಸೆ.7ರಂದು ಶಾರುಖ್-ನಯನತಾರಾ ನಟನೆಯ ಜವಾನ್ ಸಿನಿಮಾದ ಎದುರು ಅನುಷ್ಕಾ ಶೆಟ್ಟಿ ಸಿನಿಮಾ ರಿಲೀಸ್ ಆಗುತ್ತಿದೆ.

jawan

ಅನುಷ್ಕಾ ಶೆಟ್ಟಿ (Anushka Shetty) ಅವರು ಚಿತ್ರರಂಗ ಕಂಡಿರುವ ಪ್ರತಿಭಾನ್ವಿತ ನಟಿ. ಅದರಲ್ಲಿ ಎರಡು ಮಾತಿಲ್ಲ. ಪಠಾಣ್ ಸಿನಿಮಾದ ಸಕ್ಸಸ್ ನಂತರ ಜವಾನ್ (Jawan) ಆಗಿ ಅಬ್ಬರಿಸುತ್ತಿರುವ ಶಾರುಖ್ (Sharukh Khan) ಸಿನಿಮಾ ಎದುರು ಅನುಷ್ಕಾ ನಟನೆಯ ಸಿನಿಮಾ ಬರುತ್ತಾ ಇರೋದು ಅಭಿಮಾನಿಗಳಿಗೆ ತಲೆ ಬಿಸಿಯಾಗಿದೆ.

anushka shetty 1

ಸತತ ಸೋಲಿನಿಂದ ಸುಸ್ತಾಗಿರುವ ನಟಿ ಅನುಷ್ಕಾ, ಈ ಬಾರಿ ಗೆಲುವಿನ ನಗೆ ಬೀರಬೇಕು ಎಂಬುದು ಕೋಟಿ ಕೋಟಿ ಅಭಿಮಾನಿಗಳ ಆಶಯ. ಜವಾನ್ ಚಿತ್ರದ ಮುಂದೆ ಅನುಷ್ಕಾ ಚಿತ್ರ ರಿಲೀಸ್ ಆಗ್ತಿರೋದು ಸೂಕ್ತವಲ್ಲ ಎಂಬುದು ಸಿನಿಪಂಡಿತರ ಮತ್ತು ಅಭಿಮಾನಿಗಳ ಲೆಕ್ಕಾಚಾರವಾಗಿದೆ. ಇದನ್ನೂ ಓದಿ:‘ಕ್ಯಾಡ್ಬರಿಸ್’ ಸಿನಿಮಾದಲ್ಲಿ ಸೋನು ಗೌಡ- ಪೋಸ್ಟರ್ ಔಟ್

anushka shetty

ಅದಕ್ಕೆ ತಾಜಾ ಉದಾಹರಣೆ ಎಂದರೆ, ಈ ಹಿಂದೆ ಕೆಜಿಎಫ್ 2 (KGF 2) ಮುಂದೆ ವಿಜಯ್ ದಳಪತಿ (Vijay Thalapathy) ನಟನೆಯ ಬೀಸ್ಟ್ ಸಿನಿಮಾ ರಿಲೀಸ್ ಆಗಿ ಮಕಾಡೆ ಮಲಗಿತ್ತು. ತಮಿಳು ನಟ ವಿಜಯ್ ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಇದ್ದರೂ ಕೂಡ ಸಿನಿಮಾ ಕ್ಲಿಕ್ ಆಗಿರಲಿಲ್ಲ. ಅದರಂತೆಯೇ ಅನುಷ್ಕಾ ಶೆಟ್ಟಿ ಸಿನಿಮಾ ಆಗಬಾರದು ಎಂದು ಫ್ಯಾನ್ಸ್ ಯೋಚಿಸುತ್ತಿದ್ದಾರೆ. ಜವಾನ್ (Jawan) ಮುಂದೆ ತೆಲುಗು ಸಿನಿಮಾ ರಿಲೀಸ್ ಮಾಡುವ ಯೋಚನೆ ಟೀಂಗೆ ಎಫೆಕ್ಟ್ ಆಗುತ್ತೆ ಎಂಬುದರ ನೆಟ್ಟಿಗರ ಅಭಿಪ್ರಾಯ. ಅಭಿಮಾನಿಗಳ ಲೆಕ್ಕಚಾರವೇ ಉಲ್ಟಾ ಆಗಿ ಅನುಷ್ಕಾ ಸಿನಿಮಾ ಗೆದ್ದು ಬೀಗುತ್ತಾ ಕಾಯಬೇಕಿದೆ.

‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ (Miss Shetty Mr Poli Shetty) ಬಹುಭಾಷೆಗಳಲ್ಲಿ ಸೆ.7ರಂದು ರಿಲೀಸ್ ಆಗುತ್ತಿದೆ. ಚಿತ್ರದ ಲುಕ್, ಟ್ರೈಲರ್ ಎಲ್ಲವೂ ಫ್ಯಾನ್ಸ್ ಕಿಕ್ ಕೊಟ್ಟಿದೆ. ನವೀನ್ ಪೋಲಿ ಶೆಟ್ಟಿಗೆ ಅನುಷ್ಕಾ ನಾಯಕಿಯಾಗಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article