ಹೈದರಾಬಾದ್: ‘ಬಾಹುಬಲಿ’ ಸಿನಿಮಾ ರಿಲೀಸ್ ಆದಗಿನಿಂದ ನಟಿ ಅನುಷ್ಕಾ ಶೆಟ್ಟಿ ಮತ್ತು ನಟ ಪ್ರಭಾಸ್ ಇಬ್ಬರ ಮದುವೆ ಸುದ್ದಿಗಳು ಸದಾ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇವೆ. ಇದೀಗ ಅನುಷ್ಕಾ ಶೆಟ್ಟಿ ಮದುವೆಯ ಬಗ್ಗೆ ಒಂದು ಸುರ್ಪ್ರೈಸ್ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.
ಹೌದು..ಇಷ್ಟು ದಿನ ಪ್ರಭಾಸ್ ಮತ್ತು ಅನುಷ್ಮಾ ತುಂಬಾ ಆತ್ಮೀಯರಾಗಿದ್ದಾರೆ. ಹೀಗಾಗಿ ಇವರಿಬ್ಬರು ಸದ್ಯದಲ್ಲೇ ಮದುವೆಯಾಗುತ್ತಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದರು. ಇದೀಗ ಅನುಷ್ಕಾ ಶೆಟ್ಟಿ ಅವರು ಕ್ರಿಕೆಟ್ ಆಟಗಾರನ ಜೊತೆ ವಿವಾಹವಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ.
ಇದುವರೆಗೂ ಅನುಷ್ಕಾ ಶೆಟ್ಟಿ ಯಾವ ಕ್ರಿಕೆಟ್ ಆಟಗಾರನ ಜೊತೆಯೂ ಕಾಣಿಸಿಕೊಂಡಿಲ್ಲ. ಆದರೂ ಅನುಷ್ಕಾ ಶೆಟ್ಟಿ ಈಗ ಕ್ರಿಕೆಟ್ ಆಟಗಾರನ ಜೊತೆ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಅಚ್ಚರಿ ತಂದಿದೆ. ಉತ್ತರ ಭಾರತ ಮೂಲದ ಆಟಗಾರನ ಜೊತೆ ವಿವಾಹವಾಗಲು ಅನುಷ್ಕಾ ಶೆಟ್ಟಿ ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಅನುಷ್ಕಾ ಶೆಟ್ಟಿ ಮದುವೆ ಕಿಕ್ರೆಟ್ ಆಟಗಾರನ ಜೊತೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಆ ಆಟಗಾರ ಯಾರು ಎಂಬುದರ ಬಗ್ಗೆ ಸಣ್ಣ ಸುಳಿವು ಕೂಡ ಸಿಕ್ಕಿಲ್ಲ. ಆದರೆ ಅಭಿಮಾನಿಗಳಂತೂ ಉತ್ತರ ಭಾರತದ ಆಟಗಾರ ಯಾರಿರಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಹುಡುಕಾಡುತ್ತಿದ್ದಾರೆ.
ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ. ಪ್ರಭಾಸ್ ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಅನುಷ್ಕಾ ಬಗ್ಗೆ ಮಾತನಾಡಿ, “ನಾನು ಮತ್ತು ಅನುಷ್ಕಾ ಒಳ್ಳೆಯ ಗೆಳೆಯ-ಗೆಳತಿ ಅಷ್ಟೇ. ಆಕೆ ಜೊತೆ ನಾನು ಯಾವತ್ತೂ ಡೇಟಿಂಗ್ ಮಾಡಿಲ್ಲ. ಬಾಹುಬಲಿಯಲ್ಲಿ ಆಕೆ ನನಗೆ ತಾಯಿಯಾಗಿದ್ದಾಳೆ, ಪ್ರೇಯಸಿಯೂ ಆಗಿದ್ದಾಳೆ. ಈಗ ನೀವೇ ಹೇಳಿ ತಾಯಿಯನ್ನು ಯಾರಾದರೂ ಮದುವೆ ಆಗೋಕೆ ಸಾಧ್ಯನಾ?” ಎಂದು ಹೇಳಿದ್ದರು.
ಸದ್ಯಕ್ಕೆ ಅನುಷ್ಕಾ ‘ನಿಶ್ಯಬ್ದಂ’ ಸಿನಿಮಾದಲ್ಲಿ ಅಭಿನಯಿಸಿದ್ದು, ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ಸುಮಾರು 30 ಕೋಟಿ ಬಜೆಟ್‍ನಲ್ಲಿ ತಯಾರಾಗುತ್ತಿದ್ದು, ಮಾಧವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ನಿಶಬ್ದಂ’ ಸಿನಿಮಾದ ಮೂಲಕ 13 ವರ್ಷಗಳ ನಂತರ ಮಾಧವನ್ ಮತ್ತು ಅನುಷ್ಕಾ ಶೆಟ್ಟಿ ಜೋಡಿ ತೆರೆಯ ಮೇಲೆ ಕಾಣಿಸುತ್ತಿರುವುದು ವಿಶೇಷವಾಗಿದೆ. ಹೇಮಂತ್ ಮಧುಕರ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಶಾಲಿನಿ ಪಾಂಡೆ, ಸುಬ್ಬರಾಜು, ಮತ್ತು ಶ್ರೀನಿವಾಸ ಅವಸರಲಾ ತಾರಾಬಳಗವೇ ಸಿನಿಮಾದಲ್ಲಿದೆ.