ಟಾಪ್ ಟ್ರೆಂಡಿಂಗ್ ಪದ್ಮಾವತಿ ಫಸ್ಟ್ ಲುಕ್ ಅನುಷ್ಕಾ ನೋಡಿಲ್ಲವಂತೆ!

Public TV
1 Min Read
Anushka Deepika

ಮುಂಬೈ: ದೀಪಿಕಾ ಪಡುಕೋಣೆ ಅವರ `ಪದ್ಮಾವತಿ’ ಚಿತ್ರದ ಫಸ್ಟ್ ಲುಕ್ ನೋಡಿ ಬಾಲಿವುಡ್ ನ ಕಲಾವಿದರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಅನುಷ್ಕಾ ಶರ್ಮಾ ಫಸ್ಟ್ ಲುಕ್ ನೋಡಿಲ್ಲವಂತೆ.

Deepika Anushka 3

ಮಾಧ್ಯಮದವರು ಅನುಷ್ಕಾ ಶರ್ಮಾ ಅವರಿಗೆ ಪದ್ಮಾವತಿ ಚಿತ್ರದ ಫಸ್ಟ್ ಲುಕ್ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ನೆಟ್‍ವರ್ಕ್ ಇಲ್ಲದ ಜಾಗದಲ್ಲಿ ನಾನು ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದೆ. ಇದರ ಬಗ್ಗೆ ನನಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಮುಂಬೈನಲ್ಲಿ ನೆಟ್‍ವರ್ಕ್ ಇಲ್ಲದ ಜಾಗದಲ್ಲಿ ಇದ್ದು ನಾನು ಖುಷಿಯಾಗಿದ್ದೆ. ಯಾವುದೇ ಫೋನ್ ಮತ್ತು ಮೆಸೇಜ್‍ಗಳಿಲ್ಲದೆ ನಾನು ಆರಾಮಾಗಿದ್ದೆ ಎಂದು ಅನುಷ್ಕಾ ಉತ್ತರಿಸಿದ್ದಾರೆ.

Deepika Anushka 2

ನೆಟ್‍ವರ್ಕ್ ಇಲ್ಲದ ಕಾರಣ ಏನು ಬಿಡುಗಡೆ ಆಯಿತೋ ಎಂದು ನನಗೆ ಗೊತ್ತಿಲ್ಲ. ಅದೃಷ್ಟವೋ ಅಥವಾ ದುರದೃಷ್ಟವೋ ಗೊತ್ತಿಲ್ಲ, ನಾನು ಏನು ನೋಡಲಿಲ್ಲ. ಈಗ ನಾನು ನನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತೇನೆ ಹಾಗೂ ಎಲ್ಲ ವಿಷಯದ ಬಗ್ಗೆ ತಿಳಿದುಕೊಳ್ಳುತ್ತೇನೆ ಎಂದು ಅನುಷ್ಕಾ ಶರ್ಮಾ ಪ್ರತಿಕ್ರಿಯಿಸಿದ್ದಾರೆ.

https://twitter.com/deepikapadukone/status/910668862336544768

https://twitter.com/deepikapadukone/status/910673498376364033

https://twitter.com/deepikapadukone/status/912118818012512256

https://twitter.com/deepikapadukone/status/912123492979564544

Share This Article
Leave a Comment

Leave a Reply

Your email address will not be published. Required fields are marked *