ನವದೆಹಲಿ: ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಹನಿಮೂನ್ ನಲ್ಲಿದ್ದಾರೆ.
ಗುರುವಾರ ವಿರಾಟ್ ಹಾಗೂ ಅನುಷ್ಕಾ ಪೋಷಕರು, ಸ್ನೇಹಿತರು ಇಟಲಿಯಿಂದ ಮುಂಬೈಗೆ ಬಂದಿಳಿದರು. ಆದರೆ ವಿರಾಟ್ ಹಾಗೂ ಅನುಷ್ಕಾ ಮಾತ್ರ ಭಾರತಕ್ಕೆ ಹಿಂದಿರುಗಲಿಲ್ಲ. ಮದುವೆ ಮುಗಿಸಿಕೊಂಡು ಈ ನವದಂಪತಿ ಹನಿಮೂನ್ ಗೆ ಹೋಗಿದ್ದಾರೆ.
Advertisement
ಮಂಜಿನ ನಡುವೆ ನಿಂತು ತೆಗೆದ ಫೋಟೋವೊಂದನ್ನು ಅನುಷ್ಕಾ ಶರ್ಮಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಜೊತೆಗೆ ನಿಜಕ್ಕೂ ಸ್ವರ್ಗ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಪೋಸ್ಟ್ ಮಾಡಿದ ಒಂದೇ ದಿನ (18 ಗಂಟೆ)ಯಲ್ಲಿ 26.7 ಲಕ್ಷಕ್ಕೂ ಅಧಿಕ ಲೈಕ್ಸ್ ಗಿಟ್ಟಿಸಿಕೊಂಡಿದೆ.
Advertisement
Advertisement
ವಿರಾಟ್ ಹಾಗೂ ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದು, ಡಿಸೆಂಬರ್ 21ರಂದು ದೆಹಲಿಯಲ್ಲಿ ಹಾಗೂ ಡಿಸೆಂಬರ್ 26 ಮುಂಬೈನಲ್ಲಿ ಅದ್ಧೂರಿಯಾಗಿ ಆರತಕ್ಷತೆ ನಡೆಯಲಿದೆ. ಇದಾದ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯ ನಡೆಯಲಿದ್ದು, ಅನುಷ್ಕಾ ತನ್ನ ಪತಿ ವಿರಾಟ್ ಜೊತೆ ದಕ್ಷಿಣ ಆಫ್ರಿಕಾಗೆ ಹೋಗಲಿದ್ದಾರೆ.
Advertisement
ದಕ್ಷಿಣ ಆಫ್ರಿಕಾಗೆ ಹೋದ ಬಳಿಕ ಕೆಲವು ದಿನಗಳಲ್ಲೇ ಅನುಷ್ಕಾ ಒಬ್ಬರೆ ಭಾರತಕ್ಕೆ ಹಿಂದಿರುಗುತ್ತಿದ್ದು, ವಿರಾಟ್ ತಮ್ಮ ಪಂದ್ಯಕ್ಕಾಗಿ ದಕ್ಷಿಣ ಆಫ್ರಿಕಾದಲ್ಲೇ ಉಳಿದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ವಿರಾಟ್ ಹಾಗೂ ಅನುಷ್ಕಾ ಮದುವೆ ವಿಷಯ ತಿಳಿಯುತ್ತಿದ್ದಂತೆ ಸೌತ್ ಆಫ್ರಿಕಾ ಹಿಟ್ಟರ್ ಎಬಿ ಡಿವಿಲಿಯರ್ಸ್ ವಿಶ್ ಮಾಡಿದ್ದು, ಹಲವು ಮಕ್ಕಳಾಗಲಿ ಎಂದು ಹರಸಿದ್ದಾರೆ.