Connect with us

Bollywood

ನಿಮ್ಮಿಬ್ಬರಿಗೂ ನಮ್ಮ ಕ್ಲಬ್‍ಗೆ ಸ್ವಾಗತ- ದೀಪ್‍ವೀರ್ ಗೆ ಅನುಷ್ಕಾ ಸ್ವಾಗತ

Published

on

ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ತಮ್ಮ ಗೆಳೆಯ ರಣ್‍ವೀರ್ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದೀಪಿಕಾ ಮದುವೆಯಾದ ಬಳಿಕ ನಟಿ ಅನುಷ್ಕಾ ಶರ್ಮಾ ತಮ್ಮ ಕ್ಲಬ್‍ಗೆ ಸ್ವಾಗತ ಕೋರಿದ್ದಾರೆ.

ದೀಪ್‍ವೀರ್ ಬುಧವಾರ ಕೊಂಕಣಿ ಸಂಪ್ರದಾಯದಂತೆ ಗುರುವಾರ ಸಿಂಧ್ ಸಂಪ್ರದಾಯದಂತೆ ಮದುವೆಯಾದರು. ಮದುವೆಯಾದ ನಂತರ ಬಾಲಿವುಡ್ ತಾರೆಯರು ಹಾಗೂ ಗಣ್ಯರು ಈ ಜೋಡಿಗೆ ಶುಭಾಶಯ ತಿಳಿಸಿದರು. ಹಾಗೆಯೇ ಅನುಷ್ಕಾ ಕೂಡ ದೀಪಿಕಾ ಅವರಿಗೆ ಶುಭಾಶಯ ತಿಳಿಸಿ ತಮ್ಮ ಕ್ಲಬ್‍ಗೆ ಸ್ವಾಗತಿಸಿದ್ದಾರೆ.

ಅನುಷ್ಕಾ ಶರ್ಮಾ ತಮ್ಮ ಟ್ವಿಟ್ಟರಿನಲ್ಲಿ, “ನಿಮ್ಮಿಬ್ಬರಿಗೂ ಪ್ರಪಂಚದ ಎಲ್ಲ ಖುಷಿ ಸಿಗಲಿ. ನೀವಿಬ್ಬರು ಯಾವಾಗಲೂ ಜೊತೆಯಾಗಿರಿ. ನೀವಿಬ್ಬರು ಈಗಿರುವ ಹಾಗೇ ಮುಂದೆ ಜೀವನದಲ್ಲೂ ಒಬ್ಬರನೊಬ್ಬರು ಪ್ರೀತಿಸುತ್ತೀರಿ. ನಿಮ್ಮಿಬ್ಬರಿಗೂ ನಮ್ಮ ಕ್ಲಬ್‍ಗೆ ಸ್ವಾಗತ” ಎಂದು ಟ್ವೀಟ್ ಮಾಡಿದ್ದಾರೆ.

ಇಟಲಿಯಿಂದ ನ.18ಕ್ಕೆ ಭಾರತಕ್ಕೆ ವಾಪಸ್ಸಾಗಲಿರುವ ಬಾಜಿರಾವ್ ಮಸ್ತಾನಿ ದಂಪತಿ ನ.21ರಂದು ಬೆಂಗಳೂರಿನ ಲೀಲಾ ಪ್ಯಾಲೇಸ್‍ನಲ್ಲಿ ಅದ್ಧೂರಿ ಆರತಕ್ಷತೆಯನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆಯವರ ಬಂಧುಗಳು ಮತ್ತು ಆಪ್ತ ಸ್ನೇಹಿತರು ಪಾಲ್ಗೊಳ್ಳಲಿದ್ದಾರೆ. ನ.21ರಂದು ಮುಂಬೈಯಲ್ಲಿ ಇನ್ನೊಂದು ರಿಸೆಪ್ಷನ್ ಪಾರ್ಟಿ ನಡೆಯಲಿದ್ದು, ಅದರಲ್ಲಿ ಬಾಲಿವುಡ್ ಮತ್ತು ಕ್ರೀಡಾ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

 

Click to comment

Leave a Reply

Your email address will not be published. Required fields are marked *

www.publictv.in