ಮುಂಬೈ: ರಸ್ತೆ ಮೇಲೆ ಕಸ ಎಸೆದ ಎಂದು ಆರೋಪಿಸಿ ನಟ ಅರ್ಹಾನ್ ಗೆ ತರಾಟೆಗೆ ತೆಗೆದುಕೊಂಡ ನಟಿ ಅನುಷ್ಕಾ ಶರ್ಮಾ ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಅರ್ಹಾನ್ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.
ಈ ಹಿಂದೆ ಸುದ್ದಿ ಮಾಧ್ಯಮದೊಂದಿಗೆ ಮೊಬೈಲ್ ಸಂದೇಶದ ಮೂಲಕ ಮಾತನಾಡಿದ ನಟ ಅರ್ಹಾನ್, ನನ್ನ ವಕೀಲರು ಕೊಹ್ಲಿ ದಂಪತಿಗೆ ಈಗಾಗಲೇ ನೋಟಿಸ್ ಜಾರಿ ಮಾಡಿದ್ದಾರೆ. ಈಗ ಚೆಂಡು ಕೋರ್ಟ್ ಅಂಗಳದಲ್ಲಿದೆ. ನಾನು ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲೇ ವ್ಯಕ್ತಿಯೊಬ್ಬನಿಗೆ ಅನುಷ್ಕಾ ಶರ್ಮಾ ತರಾಟೆ – ಪತ್ನಿಯ ಕ್ಲಾಸ್ ನೋಡಿ ಹೆಮ್ಮೆಗೊಂಡ ವಿರಾಟ್
Advertisement
ಜುಲೈ 17 ರಂದು ವಿರಾಟ್ ಹಾಗೂ ಅನುಷ್ಕಾ ಕಾರಿನಲ್ಲಿ ಪ್ರಯಾಣಿಸುತಿದ್ದಾಗ ಮತ್ತೊಂದು ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ರಸ್ತೆ ಮೇಲೆ ಕಸ ಎಸೆದ್ರು. ಇದನ್ನು ನೋಡಿದ ಅನುಷ್ಕಾ ಕಸ ಎಸೆದಿದ್ದ ಆರ್ಹಾನ್ ಅವರನ್ನು ಕ್ಲಾಸ್ ತೆಗೆದುಕೊಂಡಿದ್ದರು. ಆ ವಿಡಿಯೋವನ್ನು ವಿರಾಟ್ ಕೊಹ್ಲಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡು ಐಷಾರಾಮಿ ಕಾರಿನಲ್ಲಿ ಒಡಾಡುವ ಇವರು ನಮ್ಮ ದೇಶವನ್ನ ಸ್ವಚ್ಛವಾಗಿ ಇಡುತ್ತಾರಾ..? ಎಂದು ಬರೆದು ಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಇದನ್ನೂ ಓದಿ: ರಸ್ತೆಯಲ್ಲಿ ಕಸ ಎಸೆದಿದ್ದಕ್ಕೆ ವಾರ್ನಿಂಗ್ ನೀಡಿದ ಅನುಷ್ಕಾಗೆ ಆ ವ್ಯಕ್ತಿಯಿಂದ ಕ್ಲಾಸ್!
Advertisement
ಅವಮಾನಕ್ಕೆ ಒಳಗಾದ ಅರ್ಹಾನ್ ಹಾಗೂ ಅವರ ತಾಯಿ ಗೀತಾಂಜಲಿ ಸ್ವಚ್ಛತೆಯ ಬಗ್ಗೆ ಪಾಠ ಮಾಡಿದ ವಿರಾಟ್-ಅನುಷ್ಕಾ ಜೋಡಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಕಾನೂನಿನ ರೀತಿಯಲ್ಲಿ ವಿರಾಟ್ ಅನುಷ್ಕಾ ಜೋಡಿಗೆ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ.
Advertisement