Connect with us

Bollywood

ಅನುಷ್ಕಾ ಬಂದ ಮೇಲೆ ನಾನು ಹೇಗೆ ಬದಲಾದೆ – ಪತ್ನಿಯನ್ನು ಹೊಗಳಿದ ಕೊಹ್ಲಿ

Published

on

ಮೆಲ್ಬರ್ನ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇಂದು ತಮ್ಮ ಮೊದಲನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ವಿರಾಟ್ ತಮ್ಮ ಪತ್ನಿಯ ಬಗ್ಗೆ ಪ್ರೀತಿಯ ಮಾತುಗಳನ್ನು ಆಡಿದ್ದಾರೆ.

ವಿರಾಟ್ ಹಾಗೂ ಅನುಷ್ಕಾ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಸ್ಟ್ರೇಲಿಯಾದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಆಡಮ್ ಗಿಲ್‍ಕ್ರಿಸ್ಟ್ ಅವರು ವಿರಾಟ್ ಕೊಹ್ಲಿಯನ್ನು ಸಂದರ್ಶನ ಮಾಡಿದರು. ಈ ಸಂದರ್ಶನದಲ್ಲಿ ವಿರಾಟ್ ತಮ್ಮ ಪತ್ನಿ ಅನುಷ್ಕಾ ಬಗ್ಗೆ ಮಾತನಾಡಿದ್ದಾರೆ.

ನಾನು ನನ್ನ ಪತ್ನಿಯನ್ನು ಭೇಟಿ ಮಾಡಿದ್ದಾಗ ನಾನು ಬದಲಾಗಲು ಶುರು ಮಾಡಿದೆ. ನಾನು ಉತ್ತರ ಭಾರತದ ವಿಭಿನ್ನ ಹಿನ್ನೆಲೆಯಿಂದ ಬಂದಿದ್ದೇನೆ. ಸಮಾಜದ ಇತರೆ ಕ್ಷೇತ್ರಗಳಲ್ಲಿ ಅಥವಾ ಇನ್ನೊಬ್ಬರ ಜೀವನದಲ್ಲಿ ಏನಾಗುತ್ತಿದೆ ಎಂಬುದು ನನಗೆ ಗೊತ್ತಿರಲಿಲ್ಲ. ಆಕೆಯ ಜೀವನವು ಕೂಡ ತುಂಬ ವಿಭಿನ್ನವಾಗಿತ್ತು. ತನ್ನ ಸ್ವಂತ ಸವಾಲುಗಳಿಂದ ಆಕೆ ಬಂದಿದ್ದಳು ಎಂದು ವಿರಾಟ್ ಹೇಳಿದರು.

ನನ್ನನ್ನು ನಾನು ನೋಡಿಕೊಳ್ಳಲು ಅದ್ಭುತವೆನ್ನಿಸುತ್ತಿದೆ. ನಾನು ಯೋಚಿಸುವ ರೀತಿಯಲ್ಲಿ ಎಷ್ಟು ವಿಭಿನ್ನವಾದ ವಿಷಯಗಳಿದ್ದವು. ಅನುಷ್ಕಾಳನ್ನು ಭೇಟಿಯಾಗುವ ಮೊದಲು ನಾನು ಪ್ರಾಕ್ಟಿಕಲ್ ಆಗಿ ಇರಲಿಲ್ಲ. ನಂತರ ಆಕೆ ನನ್ನನ್ನು ಬದಲಾಯಿಸಿದ್ದಳು. ನಾನು ಅನುಷ್ಕಾಳಿಂದ ಬಹಳ ವಿಷಯ ಕಲಿತ್ತಿದ್ದೇನೆ. ನೀವು ಪರಸ್ಪರ ಬೆಳೆಯಲು ಸಹಾಯ ಮಾಡಬೇಕು. ಹಾಗೆಯೇ ಅನುಷ್ಕಾ ನನ್ನನ್ನು ಬೆಳೆಸಲು ಸಾಕಷ್ಟು ಸಹಾಯ ಮಾಡಿದ್ದಾಳೆ ಎಂದು ವಿರಾಟ್ ಸಂದರ್ಶನದಲ್ಲಿ ಹೇಳಿದರು.

ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಆಡುತ್ತಿದೆ. ಇತ್ತ ಅನುಷ್ಕಾ ತನ್ನ ಮುಂಬರುವ ಆನಂದ್ ಎಲ್ ರೈ ನಿರ್ದೇಶನದ ‘ಝೀರೋ’ ಚಿತ್ರವನ್ನು ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದು, ಇದರ ನಡುವೆಯೇ ಅನುಷ್ಕಾ ತಮ್ಮ ಪತಿ ಜೊತೆ ಮೊದಲ ವಿವಾಹ ವಾಷಿಕೋತ್ಸವ ಆಚರಿಸಲು ಆಸ್ಟ್ರೇಲಿಯಾಗೆ ತೆರಳಿದ್ದಾರೆ. ವಿರಾಟ್ ಪಂದ್ಯ ಮುಗಿದ ಬಳಿಕ ತನ್ನ ಪತ್ನಿ ಅನುಷ್ಕಾ ಜೊತೆ ಒಟ್ಟಿಗೆ ಊಟ ಮಾಡಿದ್ದಾರೆ.

ಅನುಷ್ಕಾ ಹಾಗೂ ನಾನು ಮುಂಬೈನಲ್ಲಿ ವಾಸಿಸುತ್ತಿದ್ದೇವೆ. ಆದರೆ ಇದು ಸ್ವಲ್ಪ ಕಷ್ಟವಾಗಿದೆ. ಏಕೆಂದರೆ ನಾವಿಬ್ಬರು ಹೆಚ್ಚು ಕಾಲ ಕಳೆಯಲು ಸಮಯ ಸಿಗುವುದಿಲ್ಲ. ನಮ್ಮಿಬ್ಬರಿಗೂ ಒಟ್ಟಿಗೆ ಕಾಲ ಕಳೆಯಲು ಸಮಯ ಸಿಕ್ಕರೆ ನಾವು ಮನೆಯಲ್ಲೇ ಕಾಲ ಕಳೆಯುತ್ತೇವೆ ಎಂದು ಗಿಲ್‍ಕ್ರಿಸ್ಟ್ ನಡೆಸಿದ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ತಮ್ಮ ಪತ್ನಿ ಹಾಗೂ ದಾಂಪತ್ಯ ಜೀವನದ ಬಗ್ಗೆ ಮಾತನಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *