ನಿದ್ದೆಗಳಿಲ್ಲದ ರಾತ್ರಿ ಕಳೆಯಲು ಸಿದ್ಧರಾಗಿ – ಪ್ರಿಯಾಂಕಾಗೆ ಅನುಷ್ಕಾ ಶರ್ಮಾ ವಿಶ್

Public TV
2 Min Read
Anushka Sharma Priyanka Chopra

ಮುಂಬೈ: ನಿದ್ದೆಗಳಿಲ್ಲದ ರಾತ್ರಿಗಳನ್ನು ಕಳೆಯಲು ಸಿದ್ಧರಾಗಿ ಎಂದು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಪ್ರಿಯಾಂಕಾ ಚೋಪ್ರಾಗೆ ವಿಶ್ ಮಾಡಿದ್ದಾರೆ.

ಇತ್ತೀಚೆಗೆ ಬಾಡಿಗೆ ತಾಯ್ತನದ ಮೂಲಕ ಮೊದಲ ಮಗುವನ್ನು ಸ್ವಾಗತಿಸಿದ ಪ್ರಿಯಾಂಕಾ ಚೋಪ್ರಾ ಸಂತೋಷದಲ್ಲಿದ್ದಾರೆ. ಈ ವೇಳೆ ಅನುಷ್ಕಾ ತನ್ನ ತಾಯ್ತನದ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ಅನುಷ್ಕಾ ಸ್ಟೋರಿಯಲ್ಲಿ, ಅಭಿನಂದನೆಗಳು ನಿಕ್ ಜೋನಾಸ್ ಮತ್ತು ಪ್ರಿಯಾಂಕಾ ಚೋಪ್ರಾ. ನೀವು ನಿದ್ದೆಗಳಿಲ್ಲದ ರಾತ್ರಿಗಳನ್ನು ಕಳೆಯಲು ಸಿದ್ಧರಾಗಿರಿ. ಆ ಕಷ್ಟದ ಜೊತೆಯಲ್ಲಿಯೂ ಸಾಟಿಯಿಲ್ಲದ ಸಂತೋಷ ಮತ್ತು ಪ್ರೀತಿಗಾಗಿ ಸಿದ್ಧರಾಗಿ. ನಿಮ್ಮ ಮಗುವಿಗೆ ಸಾಕಷ್ಟು ಪ್ರೀತಿ ಸಿಗಲಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:  6 ತಿಂಗಳಿಗೆ ಹುಟ್ಟಿದ ಹೆಣ್ಣು ಮಗುವಿನ ಪೋಷಕರಾದ ಪ್ರಿಯಾಂಕಾ

anush

ಸರೋಗಸಿ ಮೂಲಕ ಪ್ರಿಯಾಂಕಾ ಚೋಪ್ರಾ ತಾಯಿಯಾಗಿದ್ದು, ಈ ಕುರಿತು ಅವರು ನಾವು ಮಗುವನ್ನು ಸ್ವಾಗತಿಸಿದ್ದೇವೆ. ನಾವು ಕುಟುಂಬದ ಕಡೆಗೆ ಈ ವಿಶೇಷ ಸಮಯದಲ್ಲಿ ಹೆಚ್ಚಿನ ಗಮನ ಕೊಡಬೇಕಾಗಿರೋದರಿಂದ ನಮಗೆ ಪ್ರೈವಸಿ ಬೇಕಿದೆ. ಧನ್ಯವಾದಗಳು ಎಂದು ಬರೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಈ ಪೋಸ್ಟ್ ಗೆ ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ದಂಪತಿಗೆ ಶುಭಾಶಯ ತಿಳಿಸಿದ್ದರು.

 

View this post on Instagram

 

A post shared by Priyanka (@priyankachopra)

ಬಾಡಿಗೆ ತಾಯಿ 27 ವಾರಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಪೋಷಕರಾಗಿ ಬಡ್ತಿ ಪಡೆದ ಸಂತಸದಲ್ಲಿದ್ದಾರೆ. ಏಪ್ರಿಲ್‍ನಲ್ಲಿ ಪ್ರಿಯಾಂಕಾ ತಾಯಿ ಆಗುವ ನಿರೀಕ್ಷೆಯಲ್ಲಿದ್ದರು. ಆದರೆ 12 ವಾರಗಳ ಮೊದಲೇ ಹೆಣ್ಣು ಮಗು ಅಮೆರಿಕದ ಲಾಸ್ ಎಂಜಲೀಸ್ ಆಸ್ಪತ್ರೆಯಲ್ಲಿ ಜನಿಸಿದೆ. 6 ತಿಂಗಳಿಗೆ ಹುಟ್ಟಿದ ಪ್ರೀ-ಮೆಚ್ಯೂರ್ ಬೇಬಿಯಾಗಿರುವುದರಿಂದ ಮಗು ಮತ್ತು ಬಾಡಿಗೆ ತಾಯಿ ವಾರ ಆಸ್ಪತ್ರೆಯಲ್ಲೇ ವೈದ್ಯರ ನಿಗಾದಲ್ಲಿ ಇರಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಮಗಳ ವಿಚಾರದಲ್ಲಿ ನಮ್ಮ ನಿರ್ಧಾರ, ಮನವಿ ಮೊದಲಿನಂತೆಯೇ ಇರಲಿದೆ: ಅನುಷ್ಕಾ ಶರ್ಮಾ

anushka sharma 1 1

ಅನುಷ್ಕಾ ಸಹ ತಾಯಿಯಾಗಿದ್ದು, ಆಕೆಗೂ ಒಂದು ವರ್ಷದ ಹೆಣ್ಣು ಮಗು ಇದೆ. ಆ ಮಗುವಿಗೆ ಇವರು ‘ವಮಿಕಾ’ ಎಂದು ಹೆಸರಿಟ್ಟಿದ್ದಾರೆ. ಆದರೆ ಒಂದು ವರ್ಷದಿಂದ ಮಗಳ ಫೋಟೋ ಮತ್ತು ಮುಖವನ್ನು ಎಲ್ಲಿಯೂ ಇವರಿಬ್ಬರು ಬಿಟ್ಟುಕೊಟ್ಟಿರಲಿಲ್ಲ. ಆದರೆ ಇತ್ತೀಚೆಗೆ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಆ ಅರ್ಧಶತಕವನ್ನು ಮಗಳು ವಮಿಕಾಗೆ ಸಮರ್ಪಿಸಿದ್ದರು. ಆಗ ಅರ್ಧಶತಕ ಸಿಡಿಸುತ್ತಿದ್ದಂತೆ ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಅನುಷ್ಕಾ ಶರ್ಮಾ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದರು. ಈ ವೇಳೆ ಪುತ್ರಿ ವಮಿಕಾ ಕಿರುನಗೆ ಬೀರುತ್ತಾ ಕೊಹ್ಲಿಯನ್ನು ನೋಡಿದ್ದಳು. ಕೊಹ್ಲಿ ತನ್ನ ಬ್ಯಾಟ್‍ನ್ನು ಮಗುವಿನಂತೆ ಎತ್ತಿ ಆಡಿಸಿದಂತೆ ಮಾಡಿ ನನ್ನ ಅರ್ಧಶತಕ ನನ್ನ ಮಗಳಿಗೆ ಎಂಬಂತೆ ಸನ್ನೆ ಮಾಡಿ ಸಂಭ್ರಮಿಸಿದ್ದರು. ಈ ವೀಡಿಯೋದಲ್ಲಿ ಮಗಳ ವಮಿಕಾ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಳು. ಆಗ ವೀಡಿಯೋ ವೈರಲ್ ಆಗಿತ್ತು.

Share This Article
Leave a Comment

Leave a Reply

Your email address will not be published. Required fields are marked *