Sunday, 22nd July 2018

Recent News

ವಿರುಷ್ಕಾ ಆರತಕ್ಷತೆಯಲ್ಲಿ ಭಾಗಿಯಾದ ಪ್ರಧಾನಿ ಮೋದಿ

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಆರತಕ್ಷತೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದಾರೆ.

ಗುರುವಾರ ದೆಹಲಿಯ ತಾಜ್ ಡಿಪ್ಲೊಮ್ಯಾಟಿಕ್ ಎನ್ಕ್ಲೇವ್ ಡರ್ಬಾ ಹಾಲ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ವಿಶೇಷವೆಂದ್ರೆ ಕೊಹ್ಲಿಯ ರಿಸೆಪ್ಷನ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಜರಿದ್ರು. ನವದಂಪತಿಗೆ ಈಗಾಗಲೇ ಉಡುಗೊರೆ ನೀಡಿ ಶುಭ ಕೋರಿದ್ದ ಮೋದಿ ರಿಸೆಪ್ಷನ್ ಗೆ ಬಂದು ಮತ್ತೊಮ್ಮೆ ಗುಲಾಬಿ ಹೂಗಳನ್ನ ಶುಭ ಕೋರಿದ್ರು.

ಅನುಷ್ಕಾ ಕೆಂಪು ಬಣ್ಣದ ಬನಾರಸ್ ಸೀರೆಯಲ್ಲಿ ಮಿಂಚಿದ್ರೆ, ಕೊಹ್ಲಿ ಶೇರ್ವಾನಿಯಲ್ಲಿ ಎಲ್ಲರ ಕಣ್ಮನ ಸೆಳೆದಿದ್ದಾರೆ. ಇನ್ನು ಆರತಕ್ಷತೆ ಕಾರ್ಯಕ್ರಮಕ್ಕೂ ಮುನ್ನ ವಿರಾಟ್ ಹಾಗೂ ಅನುಷ್ಕಾ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೊದಲು ವಿರಾಟ್ ತವರಿನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು, ಇದಕ್ಕೆ ಅವರ ಕುಟುಂಬಸ್ಥರು ಹಾಗೂ ಗೆಳೆಯರು ಭಾಗಿಯಾಗಿದ್ದರು.

ಇಟಲಿಯಲ್ಲಿ ವಿರುಷ್ಕಾ ಜೋಡಿ ಡಿಸೆಂಬರ್ 11ರಂದು ತಮ್ಮ ದಾಂಪತ್ಯಕ್ಕೆ ಜೀವನಕ್ಕೆ ಕಾಲಿರಿಸಿದ್ದರು. ಆ ಬಳಿಕ ಅವರು ಹನಿಮೂನ್ ಗೆ ತೆರಳಿದ್ದರು. ಈ ವೇಳೆ ವಿರುಷ್ಕಾ ಜೋಡಿ ಫೋಟೊವೊಂದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದರು. ಈ ಫೋಟೋ ಈಗಲೂ ಟ್ರೋಲ್ ಆಗ್ತಿದೆ.

ದೆಹಲಿಯ ಆರತಕ್ಷತೆ ಕಾರ್ಯಕ್ರಮಕ್ಕೆ ಆಹ್ವಾನಿಸಲು ವಿರಾಟ್ ಹಾಗೂ ಅನುಷ್ಕಾ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದರು. ಈ ಫೋಟೋವನ್ನು ಮೋದಿ ಅವರು ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Leave a Reply

Your email address will not be published. Required fields are marked *