– ಹಿರಿಯ ಅಧಿಕಾರಿಗಳಿಂದ ಕಿರುಕುಳ
ಪ್ರವೀಣ್ ರೆಡ್ಡಿ
ಕಲಬುರಗಿ: ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರಿಗೆ ಸಾವಿನ ಭಯವಿತ್ತಂತೆ. ಹೀಗಂತ ಅನುರಾಗ್ ಸಹೋದರ ಮಯಾಂಕ್ ತಿವಾರಿ ಅವರ ಸ್ನೇಹಿತ ರಾಕೇಶ್ ಎಂಬುವರಿಗೆ ಮಾರ್ಚ್ 27ರಂದು ಮೇಸೆಜ್ ಕಳುಹಿಸಿದ್ದಾರೆ. ಸದ್ಯ ಹೀಗೆ ಸ್ನೇಹಿತನಿಗೆ ಮಯಾಂಕ್ ತಿವಾರಿ ಕಳುಹಿಸಿರುವ ವಾಟ್ಸಪ್ ಸಂದೇಶ ಇದೀಗ ಪಬ್ಲಿಕ್ ಟಿವಿಗೆ ಸಿಕ್ಕಿದೆ.
Advertisement
ಮಯಾಂಕ್ ಅವರನ್ನು ಅವರ ಸ್ನೇಹಿತ ಪದೇ ಪದೇ ಕರೆ ಮಾಡಿದ್ರೂ ಅವರು ಕರೆಯನ್ನು ಸ್ವಿಕರಿಸಿರಲಿಲ್ಲ. ಯಾಕೆ ಕಾಲ್ ರಿಸಿವ್ ಮಾಡಿಲ್ಲ ಅಂತಾ ವಾಟ್ಸಪ್ ಮೂಲಕ ರಾಕೇಶ್ ಪ್ರಶ್ನಿಸಿದ್ದಾಗ. “ನನ್ನ ಸಹೋದರ ಅನುರಾಗ್ ಮೇಲೆ ಜೀವ ಭಯವಿದೆ ಅಂತಾ ನನ್ನ ಸಹೋದರ(ಅಲೋಕ್) ಹೇಳಿದ್ದ” ಅಂತಾ ಮಯಾಂಕ್ ತನ್ನ ಸ್ನೇಹಿತನಿಗೆ ಸಂದೇಶ ಕಳುಹಿಸಿದ್ದಾರೆ. ಈ ಮೂಲಕ ಅನುರಾಗ್ ಜೀವಕ್ಕೆ ಕುತ್ತು ಇತ್ತು ಎಂಬುದನ್ನು ಅನುರಾಗ್ ತನ್ನ ಸಹೋದರನ ಬಳಿ ಹೇಳಿರುವುದು ದೃಢಪಟ್ಟಿದೆ.
Advertisement
ಇನ್ನು ಈ ಬಗ್ಗೆ ಮಯಾಂಕ್ ತಿವಾರಿ ಅವರನ್ನು ಪಬ್ಲಿಕ್ ಟಿವಿ ಸಂಪರ್ಕಿಸಿದಾಗ, ನನ್ನ ಸಹೋದರ ಅನುರಾಗ್ ತಿವಾರಿ ಸಾವು ಸಹಜ ಸಾವಲ್ಲ ಅದು ಕೊಲೆ. ಈ ಕುರಿತು ಅನುರಾಗ್ ಹಲವು ಬಾರಿ ನನ್ನ ಜೊತೆ ಮಾತನಾಡಿ ಮೇಸೆಜ್ ಸಹ ಕಳುಹಿಸಿದ್ದಾನೆ. ಆ ಎಲ್ಲಾ ಮೆಸೇಜ್ ಗಳು ನನ್ನ ಬಳಿ ಇವೆ. ಯಾಕಂದ್ರೆ ಆಹಾರ ಇಲಾಖೆಯಲ್ಲಿನ ದೊಡ್ಡ ಹಗರಣದ ಕಡತವನ್ನು ಸಿಬಿಐ ಮತ್ತು ಪಿಎಮ್ಓ(ಪ್ರಧಾನ ಮಂತ್ರಿಕಚೇರಿ)ಗೇ ಕಳುಹಿಸಲು ಸಿದ್ಧತೆ ನಡೆಸಿದ್ದ. ಆದರೆ
Advertisement
ಹಿರಿಯ ಅಧಿಕಾರಿಗಳು ಈ ಕುರಿತು ಹಲವು ಬಾರಿ ಅವನ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಇದೇ ಪ್ರಕರಣ ಸಂಬಂಧ ಅನುರಾಗ್ ಗೆ ಕಳೆದ 4-5 ತಿಂಗಳಿನಿಂದ ಸಂಬಳ ಸಹ ನೀಡಿರಲಿಲ್ಲ. ಇನ್ನು ಅವನು ರಜೆ ಕೇಳಿದ್ರೆ ಬೇಕು ಅಂತಾನೆ ಅವನ ರಜೆಯನ್ನು ಪದೇ ಪದೇ ಕೇಳಿದ್ರು ಅಧಿಕಾರಿಗಳು ಅದನ್ನು ರಿಜಕ್ಟ್ ಮಾಡಿ ಅವನಿಗೆ ಮಾನಸಿಕ ಕಿರುಕುಳ ಕೊಡುತ್ತಿದ್ದರು. ಅಂತಾ ತನ್ನ ಸಹೋದರನಿಗೆ ಆದ ಅನ್ಯಾಯದ ಬಗ್ಗೆ ಮಯಾಂಕ್ ತಿವಾರಿ ಅಲವತ್ತುಕೊಂಡಿದ್ದಾರೆ.
Advertisement
ಪರಿಸ್ಥಿತಿ ಸರಿ ಇಲ್ಲ: ಸದ್ಯ ಬೆಂಗಳೂರಿನಲ್ಲಿ ಪರಿಸ್ಥಿತಿ ಸರಿಯಿಲ್ಲ . ಹೀಗಾಗಿ ತಂದೆ-ತಾಯಿಯನ್ನು ಇಲ್ಲಿಗೆ ಕಳುಹಿಸಬೇಡಿ ಇನ್ನು ಕೆಲ ದಿನಗಳಲ್ಲಿ ನಾನೇ ಉತ್ತರದತ್ತ ಬರುತ್ತೇನೆ ಅಂತಾ ಮಾರ್ಚ್ 25ರಂದು ಮೃತ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ತನ್ನ ಸಹೋದರ ಮಯಾಂಕ್‍ಗೇ ವಾಟ್ಸಪ್ ಮೆಸೇಜ್ ಕಳುಹಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜಕೀಯ ಮತ್ತು ಮೇಲಾಧಿಕಾರಿಗಳ ವರ್ತನೆ ಸರಿಯಿಲ್ಲ. ಹೀಗಾಗಿ ಪೋಷಕರನ್ನು ಬೆಂಗಳೂರಿಗೆ ಕಳುಹಿಸುವುದು ಎಷ್ಟರ ಮಟ್ಟಿಗೆ ಸರಿ ಅಂತಾ ಅನುರಾಗ್ ಸಹೋದರನಿಗೆ ಪ್ರಶ್ನೆ ಮಾಡಿದ್ದಾರೆ. ಅಷ್ಟೆ ಅಲ್ಲ ಇನ್ನು ಕೆಲ ದಿನಗಳಲ್ಲಿ ಉತ್ತರ ಭಾರತದ ಪರಿಸ್ಥಿತಿ ಸರಿಯಾಗಬಹುದು. ಸದ್ಯ ಬೆಂಗಳೂರಿನಲ್ಲಿ ಕಲುಷಿತ ರಾಜಕೀಯ ಮತ್ತು ಹಿರಿಯ ಅಧಿಕಾರಿಗಳ ವರ್ತನೆಯಿಂದ ವಾತಾವರಣ ಸರಿಯಿಲ್ಲ ಅಂತಾ ಸಹ ಅನುರಾಗ್ ತಿವಾರಿ ತನ್ನ ಸಹೋದರನಿಗೆ ಮೇಸೆಜ್ ಕಳುಹಿಸಿದ್ದು ಅದರ ಎಕ್ಸ್ ಕ್ಲೂಸಿವ್ ಮಾಹಿತಿ ಸಹ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ತನಿಖೆಗೆ ಪತ್ರ: ಐಎಎಸ್ ಅಧಿಕಾರಿಯ ನಿಗೂಢ ಸಾವಿನ ಕುರಿತು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕ ಕೇಡರ್ ನ 2007ನೇ ಬ್ಯಾಚ್ ಐಎಎಸ್ ಅಧಿಕಾರಿ ಶ್ರೀ ಅನುರಾಗ್ ತಿವಾರಿಯವರು ಲಖನೌನ ಹಜರತ್ ಗಂಜ್ ಬಳಿಯ ಮೀರಾ ಬಾಯಿ ಅತಿಥಿ ಗೃಹದ ಬಳಿ ನತದೃಷ್ಟವಾಗಿ ಸಾವಿಗೀಡಾದ ಕುರಿತು ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ.
ಶ್ರೀ ತಿವಾರಿಯವರು ಕರ್ನಾಟಕ ಕೇಡರ್ ನ ಒಬ್ಬ ದಕ್ಷ ಅಧಿಕಾರಿಯಾಗಿದ್ದು, ಅವರ ಅಕಾಲಿಕ ಹಾಗೂ ದುರದೃಷ್ಟಕರ ಸಾವು ನಮಗೆ ತೀವ್ರ ದುಃಖ ತಂದಿದೆ. ಅವರ ಸಾವಿಗೆ ಸಂಬಂಧಿಸಿದಂತೆ ಇಡೀ ಪ್ರಕರಣವನ್ನು, ಅದರ ಸನ್ನಿವೇಶಗಳು ಹಾಗೂ ಕಾರಣಗಳ ಸಹಿತ ತಿಳಿಯುವುದು ಅತ್ಯಂತ ಅಗತ್ಯವಾಗಿದ್ದು ಈ ಸಂಬಂಧ ತನಿಖಾಧಿಕಾರಿಗಳು ಹಾಗೂ ತಜ್ಞರನ್ನೊಳಗೊಂಡ ಸಮರ್ಥ ತಂಡದಿಂದ ತನಿಖೆ ನಡೆಸುವ ಅಗತ್ಯವಿದೆ. ಈ ಕುರಿತಾಗಿ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸುವಂತೆ ತಮ್ಮಲ್ಲಿ ವಿನಂತಿಸುತ್ತೇನೆ.
ಸಿಎಂ ಪತ್ರ: ನಮ್ಮ ರಾಜ್ಯದ ಓರ್ವ ದಕ್ಷ ಐಎಎಸ್ ಅಧಿಕಾರಿಯಾಗಿದ್ದ ಅನುರಾಗ್ ತಿವಾರಿಯವರು ಉತ್ತರಪ್ರದೇಶದ ಲಖನೌನ ತೀವ್ರ ಭದ್ರತಾ ವಲಯದ ಸಮೀಪವೇ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸುವಂತೆ ಕೋರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯವರಾದ ಯೋಗಿ ಆದಿತ್ಯನಾಥ್ ಅವರಿಗೆ ಪತ್ರವನ್ನು ಬರೆದಿದ್ದೇನೆ. ಪತ್ರದ ಕನ್ನಡಾನುವಾದ:
ಪ್ರೀತಿಯ ಶ್ರೀ ಯೋಗಿ ಆದಿತ್ಯನಾಥ್ ರವರೇ
ಕರ್ನಾಟಕ ಕೇಡರ್ ನ 2007ನೇ ಬ್ಯಾಚ್ ಐಎಎಸ್ ಅಧಿಕಾರಿ ಶ್ರೀ ಅನುರಾಗ್ ತಿವಾರಿಯವರು ಲಖನೌನ ಹಜರತ್ ಗಂಜ್ ಬಳಿಯ ಮೀರಾ ಬಾಯಿ ಅತಿಥಿ ಗೃಹದ ಬಳಿ ನತದೃಷ್ಟವಾಗಿ ಸಾವಿಗೀಡಾದ ಕುರಿತು ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ.
ಶ್ರೀ ತಿವಾರಿಯವರು ಕರ್ನಾಟಕ ಕೇಡರ್ ನ ಒಬ್ಬ ದಕ್ಷ ಅಧಿಕಾರಿಯಾಗಿದ್ದು, ಅವರ ಅಕಾಲಿಕ ಹಾಗೂ ದುರದೃಷ್ಟಕರ ಸಾವು ನಮಗೆ ತೀವ್ರ ದುಃಖ ತಂದಿದೆ. ಅವರ ಸಾವಿಗೆ ಸಂಬಂಧಿಸಿದಂತೆ ಇಡೀ ಪ್ರಕರಣವನ್ನು, ಅದರ ಸನ್ನಿವೇಶಗಳು ಹಾಗೂ ಕಾರಣಗಳ ಸಹಿತ ತಿಳಿಯುವುದು ಅತ್ಯಂತ ಅಗತ್ಯವಾಗಿದ್ದು ಈ ಸಂಬಂಧ ತನಿಖಾಧಿಕಾರಿಗಳು ಹಾಗೂ ತಜ್ಞರನ್ನೊಳಗೊಂಡ ಸಮರ್ಥ ತಂಡದಿಂದ ತನಿಖೆ ನಡೆಸುವ ಅಗತ್ಯವಿದೆ. ಈ ಕುರಿತಾಗಿ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸುವಂತೆ ತಮ್ಮಲ್ಲಿ ವಿನಂತಿಸುತ್ತೇನೆ.
ಕೃತಜ್ಞತಾಪೂರ್ವಕವಾಗಿ
ತಮ್ಮ ವಿಶ್ವಾಸಿ,
ಸಿದ್ದರಾಮಯ್ಯ
An IAS officer of our state has died in a high security neighborhood of Lucknow. My letter to CM @myogiadityanath ji pic.twitter.com/0PiWNeiR3P
— CM of Karnataka (@CMofKarnataka) May 19, 2017