Connect with us

Bengaluru City

ಶೋಭಾ ಕರಂದ್ಲಾಜೆ ಸಚಿವರಾಗಿದ್ದ ವೇಳೆಯೇ ಆಹಾರ ಇಲಾಖೆಯಲ್ಲಿ ಸಾಕಷ್ಟು ಹಗರಣ ನಡೆದಿದೆ: ದಿನೇಶ್ ಗುಂಡೂರಾವ್

Published

on

ಬೆಂಗಳೂರು: ಈ ಹಿಂದೆ ಶೋಭಾ ಕರಂದ್ಲಾಜೆ ಅವರು ಆಹಾರ ಇಲಾಖೆ ಸಚಿವರಾಗಿದ್ದ ವೇಳೆಯೇ ಸಾಕಷ್ಟು ಹಗರಣ ನಡೆದಿದೆ. ಈಗ ಅವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಆಹಾರ ಇಲಾಖೆಯಲ್ಲಿನ ಹಗರಣಕ್ಕೆ ಅನುರಾಗ್ ತಿವಾರಿಯವರ ಕೊಲೆ ನಡೆದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಚಾರಕ್ಕಾಗಿ ಆರೋಪ ಮಾಡುವುದನ್ನು ಶೋಭಾ ಕರಂದ್ಲಾಜೆ ಅಭ್ಯಾಸ ಮಾಡಿಕೊಂಡಿದ್ದಾರೆ. ಅವರ ಆರೋಪವನ್ನ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಪ್ರಕರಣವನ್ನ ಸಿಬಿಐಗೆ ವಹಿಸಲಾಗಿದೆ. ತನಿಖೆಯಾದಾಗ ಎಲ್ಲವೂ ಗೊತ್ತಾಗಲಿದೆ ಎಂದು ತಿಳಿಸಿದರು.

ಶೋಭೆ ತರಲ್ಲ: ಸುಮ್ಮನೆ ಆರೋಪ ಮಾಡೋದು ಶೋಭಾ ಕರಂದ್ಲಾಜೆ ಅವರಿಗೆ ಶೋಭೆ ತರುವುದಿಲ್ಲ. ಈ ರೀತಿ ಆರೋಪ ಮಾಡಿ ಪತ್ರಿಕೆ ಹಾಗು ಟಿವಿಯಲ್ಲಿ ಸುದ್ದಿಯಲ್ಲಿರಬೇಕೆಂದು ಅವರು ಅಭ್ಯಾಸ ಮಾಡಿಕೊಂಡಿದ್ದಾರೆ. ಈ ಹಿಂದೆ ಸಚಿವ ರೋಷನ್ ಬೇಗ್ ಮೇಲೆ ಇದೇ ರೀತಿ ಕೊಲೆ ಪ್ರಕರಣದಲ್ಲಿ ಆರೋಪ ಮಾಡಿ ಈಗ ಏನಾಗಿದೆ ಎಂದು ಎಲ್ಲರಿಗೂ ಗೊತ್ತಾಗಿದೆ ಎಂದು ಹೇಳುವ ಮೂಲಕ ಶೋಭಾ ವಿರುದ್ಧ ವಾಗ್ದಾಳಿ ನಡೆಸಿದರು.

ಯಾರು ಅನ್ನೋದು ಗೊತ್ತಿಲ್ಲ: ಹೆಚ್‍ಡಿ ದೇವೇಗೌಡ ಮತ್ತು ಹೆಚ್‍ಡಿ ಕುಮಾರಸ್ವಾಮಿ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿರುವ ಕಾಂಗ್ರೆಸ್ ಕಾರ್ಯಕರ್ತ ವೆಂಕಟೇಶ್ ಗೌಡ ಯಾರೆಂದು ಗೊತ್ತಿಲ್ಲ. ಅವರ ಬಗ್ಗೆ ಯಾವ ಮಾಹಿತಿಯೂ ಇಲ್ಲ. ವೆಂಕಟೇಶ್ ಗೌಡ ಯಾರೆಂದು ನಾವು ಕೂಡ ಪರಿಶೀಲನೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಸಾವಿಗೂ ಮುನ್ನ ನಡೆದಿದೆ ಹಲ್ಲೆ: ಅನುರಾಗ್ ತಿವಾರಿ ನಿಗೂಢ ಸಾವಿನ ಪ್ರಕರಣಕ್ಕೆ ಟ್ವಿಸ್ಟ್

Click to comment

Leave a Reply

Your email address will not be published. Required fields are marked *