ನವದೆಹಲಿ: ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಅವರು ಗಾಂಧಿ ಕುಟುಂಬವನ್ನು ಭಗವಾನ್ ರಾಮನ ವಂಶದೊಂದಿಗೆ ಹೋಲಿಸಿರುವುದು ಅಹಂಕಾರವಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಮತ್ತು ಗಾಂಧಿ ಕುಟುಂಬದ ನಡುವಿನ ಹೋಲಿಕೆಗಿಂತ ದುರದೃಷ್ಟಕರ ಬೇರೊಂದಿಲ್ಲ. ಸಹೋದರ ಮತ್ತು ಸಹೋದರಿಯ ಈ ದುರಹಂಕಾರವನ್ನು ಇಡೀ ರಾಷ್ಟ್ರವು ಗಮನಿಸುತ್ತಿದೆ. ದೇಶವನ್ನು ಬಿಡಿ, ಈಗ ಅವರು ಭಗವಾನ್ ರಾಮನನ್ನು ಸಹ ಉಳಿಸುತ್ತಿಲ್ಲ ಎಂದು ಕಿಡಿಕಾರಿದರು.
ಈ ವೇಳೆ ರಾಹುಲ್ ಗಾಂಧಿ ಅವರ ವಿರುದ್ಧ ಕಿಡಿಕಾರಿದ ಅವರು, ರಾಹುಲ್ ಗಾಂಧಿ ತನ್ನ ಅತ್ಯುತ್ತಮ ಕನಸುಗಳಲ್ಲಿ ಎಂದಿಗೂ ವೀರ್ ಸಾವರ್ಕರ್ ಆಗಲು ಸಾಧ್ಯವಿಲ್ಲ. ಏಕೆಂದರೆ ಅದಕ್ಕೆ ಬಲವಾದ ನಿರ್ಣಯ ಮತ್ತು ದೇಶದ ಬಗ್ಗೆ ಅಪಾರ ಪ್ರೀತಿಯ ಅಗತ್ಯವಿರುತ್ತದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ಅರ್ಜಿ ವಜಾ: ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ
ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ನಮ್ಮ ಮೇಲೆ ರಾಜವಂಶದ ಆರೋಪ ಮಾಡುತ್ತಾರೆ. ಹಾಗಾದರೆ ಭಗವಾನ್ ರಾಮ ಏನು? ಅವರು ದೇಶಭ್ರಷ್ಟರಾಗಿದ್ದರು, ಆದರೆ ಇನ್ನೂ ತಮ್ಮ ಕುಟುಂಬ ಮಾತೃಭೂಮಿಯ ಬಗ್ಗೆ ತಮ್ಮ ಜವಾಬ್ದಾರಿಗಳನ್ನು ಪೂರೈಸಿದ್ದಾರೆ. ಇದು ರಾಜವಂಶವೇ? ಪಾಂಡವರು ರಾಜವಂಶದಲ್ಲಿ ತೊಡಗಿಸಿಕೊಂಡಿದ್ದಾರೆಯೇ ಎಂದು ಹೇಳಿದ್ದರು. ಇದನ್ನೂ ಓದಿ: ಗ್ಯಾಂಗ್‍ಸ್ಟರ್ ಅತೀಕ್‍ನನ್ನು ಕರೆದೊಯ್ಯುತ್ತಿದ್ದ ಪೊಲೀಸ್ ಬೆಂಗಾವಲು ವಾಹನಕ್ಕೆ ಹಸು ಡಿಕ್ಕಿ