ಬಾಲಿವುಡ್‌ನ ಖ್ಯಾತ ನಿರ್ಮಾಪಕ ಅನುರಾಗ್ ಕಶ್ಯಪ್ ಪುತ್ರಿ ಆಲಿಯಾ ಕಶ್ಯಪ್ ಒಂದಲ್ಲಾ ಒಂದು ವಿಚಾರವಾಗಿ ಟ್ರೇಂಡಿಂಗ್‌ನಲ್ಲಿರುತ್ತಾರೆ. ಇದೀಗ ತನ್ನ ಪ್ರೀಯಕರ ಶೇನ್ ಜೊತೆಗಿನ ಬೋಲ್ಡ್ ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡ್ತಿದ್ದಾರೆ.
ಖ್ಯಾತ ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಮೊದಲ ಪತ್ನಿ ಆರತಿ ಬಜಾಜ್ ಅವರ ಮಗಳು ಆಲಿಯಾ ಕಶ್ಯಪ್ ಆಗಾಗ ಬಾಯ್‌ಫ್ರೆಂಡ್ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುತ್ತಾರೆ. ಗೆಳೆಯ ಶೇನ್ ಗ್ರೆಗೊಯಿರ್ ಜತೆ ಆಲಿಯಾ ಸದಾ ಸುತ್ತಾಡುತ್ತಾ, ಬೋಲ್ಡ್ ಮತ್ತು ರೋಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾಳೆ. ಇದೀಗ ಪ್ರವಾಸಕ್ಕೆ ಪ್ರಿಯಕರನ ಜತೆ ಇಟಲಿಗೆ ಹಾರಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಖಾನ್ ಜೊತೆ ಸಮಂತಾ- ರಶ್ಮಿಕಾ ಮಂದಣ್ಣ ಡ್ಯುಯೇಟ್.!
View this post on Instagram
ಆಲಿಯಾ ಕಶ್ಯಪ್ ಇತ್ತೀಚೆಗಷ್ಟೇ ಇಟಲಿಯಲ್ಲಿ ತನ್ನ ಗೆಳೆಯನೊಂದಿಗೆ ಸಮಯ ಕಳೆಯುತ್ತಿರುವುದನ್ನು ಹಂಚಿಕೊಂಡಿದ್ದಾಳೆ. ಆಲಿಯಾ ತನ್ನ ಗೆಳೆಯ ಶೇನ್ ಚುಂಬಿಸಿದ ಚಿತ್ರಗಳನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿ, ವೈರಲ್ ಆಗಿದ್ದಾರೆ. ಆಲಿಯಾ ಮತ್ತು ಶೇನ್ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಇಬ್ಬರು ಯೂಟ್ಯೂಬ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಕೂಡ 21ರ ಆಲಿಯಾ ತನ್ನ ಗಳೆಯನ ಬಗ್ಗೆ ಬೋಲ್ಡ್ ಆಗಿ ಮಾತನಾಡಿದ್ದರು. ಸದ್ಯ ಇಟಲಿಯಲ್ಲಿ ಶೇನ್ ಜತೆ ಕಾಲ ಕಳೆಯುತ್ತಿದ್ದಾರೆ. ಬೋಲ್ಡ್ ಫೋಟೋಗಳ ಮೂಲಕ ಸೌಂಡ್ ಮಾಡ್ತಿದ್ದಾರೆ.