ಕಿನ್ಶಾಸ: ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ನಡೆಯುತ್ತಿರುವ ಯುಎನ್ ವಿರೋಧಿ ಪ್ರತಿಭಟನೆಯಲ್ಲಿ ಇಬ್ಬರು ಭಾರತೀಯ ಶಾಂತಿಪಾಲನ ಸೈನಿಕರು ಹುತಾತ್ಮರಾಗಿದ್ದಾರೆ.
Advertisement
ಈ ಕುರಿತು ಬಾರ್ಡರ್ ಸೆಕ್ಯುರಿಟಿ ಫೋರ್ಸ್(ಬಿಎಸ್‍ಎಫ್) ಟ್ವೀಟ್ ಮಾಡಿದ್ದು, 26 ಜುಲೈ ರಂದು ಎಚ್‍ಸಿ ಶಿಶುಪಾಲ್ ಸಿಂಗ್ ಮತ್ತು ಎಚ್‍ಸಿ ಸನ್ವಾಲಾ ರಾಮ್ ವಿಷ್ಣೋಯ್ ಅವರು ನಿಧನರಾಗಿದ್ದಾರೆ. ಅವರಿಗೆ ಸಂತಾಪ ವ್ಯಕ್ತಪಡಿಸುತ್ತೇವೆ. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ನಡೆಯುತ್ತಿರುವ ಪ್ರತಿಭಟನೆ ತಡೆಯಲು ಯುಎನ್ ಶಾಂತಿಪಾಲನಾ ತಂಡದೊಂದಿಗೆ ಇವರನ್ನು ನಿಯೋಜಿಸಲಾಗಿತ್ತು. ಈ ಸಂಕಷ್ಟದ ಸಮಯದಲ್ಲಿ ನಾವು ಮೃತರ ಕುಟುಂಬದೊಂದಿಗೆ ಇದ್ದೇವೆ. ಜೈಹಿಂದ್ ಎಂದು ಬರೆದು ಮಾಹಿತಿ ತಿಳಿಸಿದೆ. ಇದನ್ನೂ ಓದಿ: ಕಾಂಗೋದಲ್ಲಿ ಯುಎನ್ ವಿರೋಧಿ ಪ್ರತಿಭಟನೆ: 3 ಶಾಂತಿಪಾಲಕರು, 12 ನಾಗರಿಕರು ಮೃತ
Advertisement
DG BSF & all ranks express condolences on the sad demise of HC Shishupal Singh & HC Sanwala Ram Vishnoi on 26 Jul 2022, deployed with UN Peace Keeping Contingent (@MONUSCO) in Democratic Republic of Congo.
Prahari Parivar stands by their families in these trying times.#JaiHind pic.twitter.com/HF8Sv5FS9w
— BSF (@BSF_India) July 27, 2022
Advertisement
ಏನಿದು ಘಟನೆ?
MONUSCO ಎಂದು ಕರೆಯಲ್ಪಡುವ ಯುಎನ್ ಮಿಷನ್, ಮಿಲಿಟರಿಯ ಹಿಂಸಾಚಾರದ ವಿರುದ್ಧ ನಾಗರಿಕರನ್ನು ರಕ್ಷಿಸಲು ವಿಫಲವಾಗಿದೆ ಎಂದು ಪ್ರತಿಭಟನೆಗಳು ನಡೆಯುತ್ತಿದೆ. ಯುಎನ್ ಉಪ ವಕ್ತಾರ ಫರ್ಹಾನ್ ಹಕ್ ಈ ಕುರಿತು ಮಾತನಾಡಿದ್ದು, ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಹಿಂಸಾಚಾರವನ್ನು ಖಂಡಿಸಿದ್ದಾರೆ ಎಂದು ತಿಳಿಸಿದ್ದರು.