ಕಿನ್ಶಾಸ: ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಮಂಗಳವಾರ ನಡೆದ ಯುಎನ್ ವಿರೋಧಿ ಪ್ರತಿಭಟನೆಯ ಎರಡನೇ ದಿನ ಯುಎನ್ ಮೂವರು ಶಾಂತಿಪಾಲಕರು ಮತ್ತು 12 ನಾಗರಿಕರು ಸಾವನ್ನಪ್ಪಿದ್ದಾರೆ.
Advertisement
MONUSCO ಎಂದು ಕರೆಯಲ್ಪಡುವ ಯುಎನ್ ಮಿಷನ್, ಮಿಲಿಟರಿಯ ಹಿಂಸಾಚಾರದ ವಿರುದ್ಧ ನಾಗರಿಕರನ್ನು ರಕ್ಷಿಸಲು ವಿಫಲವಾಗಿದೆ ಎಂದು ಪ್ರತಿಭಟನೆಗಳು ನಡೆಯುತ್ತಿದೆ. ಯುಎನ್ ಉಪ ವಕ್ತಾರ ಫರ್ಹಾನ್ ಹಕ್ ಈ ಕುರಿತು ಮಾತನಾಡಿದ್ದು, ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಹಿಂಸಾಚಾರವನ್ನು ಖಂಡಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಭಾರೀ ಮಳೆ ತಾತ್ಕಾಲಿಕ ಸ್ಥಗಿತಗೊಂಡ ಅಮರನಾಥ ಯಾತ್ರೆ – ಪ್ರವಾಹದ ಭೀತಿ
Advertisement
Advertisement
ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳ ವಿರುದ್ಧ ನಿರ್ದೇಶಿಸಿದ ಯಾವುದೇ ದಾಳಿಯು ಯುದ್ಧ ಅಪರಾಧವಾಗಬಹುದು. ಈ ಘಟನೆಗಳ ಬಗ್ಗೆ ತ್ವರಿತವಾಗಿ ತನಿಖೆ ನಡೆಸುವಂತೆ ಕಾಂಗೋ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. ಇದಕ್ಕೆ ಕಾರಣರಾದವರನ್ನು ನ್ಯಾಯಾಂಗಕ್ಕೆ ತನ್ನಿ ಎಂದು ಮನವಿ ಮಾಡಿಕೊಂಡರು.
Advertisement
ಏನಿದು?
ಸೋಮವಾರದಂದು ಗೋಮಾ ನಗರದಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು. ಮಂಗಳವಾರ ಬುಟೆಂಬೊಗೆ ಹರಡಿತು. ಪ್ರತಿಭಟನೆ ವೇಳೆ ಯುಎನ್ ಸೈನಿಕ ಮತ್ತು ಇಬ್ಬರು ಯುಎನ್ ಪೊಲೀಸರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಇದನ್ನೂ ಓದಿ: ‘ಎಗ್ ಬೋಂಡಾ’ ಮಾಡುವ ಸರಳವಾದ ವಿಧಾನ – ಟ್ರೈ ಮಾಡಿ
ಎರಡೂ ನಗರಗಳಲ್ಲಿ ನೂರಾರು ಪ್ರತಿಭಟನಾಕಾರರು ಕಲ್ಲುಗಳು ಮತ್ತು ಪೆಟ್ರೋಲ್ ಬಾಂಬ್‍ಗಳನ್ನು ಎಸೆದು ಯುಎನ್ ಕಟ್ಟಡಗಳನ್ನು ಧ್ವಂಸಗೊಳಿಸಿದರು. ಪ್ರತಿಭಟನಾಕಾರರು U.N ಶಾಂತಿಪಾಲನಾ ಪಡೆಗಳ ಪ್ರತಿದಾಳಿಯಿಂದ ಆಕ್ರೋಶಗೊಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಗೋಮಾದಲ್ಲಿ ಯುಎನ್ ಶಾಂತಿಪಾಲನ ಸೈನಿಕರು ಇಬ್ಬರು ಪ್ರತಿಭಟನಾಕಾರರನ್ನು ಗುಂಡಿಕ್ಕಿ ಕೊಂದಿದ್ದಾರೆ. ಸರ್ಕಾರದ ವಕ್ತಾರ ಪ್ಯಾಟ್ರಿಕ್ ಮುಯಾಯಾ ಅವರು ಈ ಕುರಿತು ಮಾಹಿತಿ ಕೊಟ್ಟಿದ್ದು, ಈ ಪ್ರತಿಭಟನೆಯಲ್ಲಿ ಐದು ಜನರು ಸಾವನ್ನಪ್ಪಿದ್ದು, 50 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದರು.