ಖಲಿಸ್ತಾನಿ ಉಗ್ರ ಲಖ್ಬೀರ್ ಸಿಂಗ್ ರೋಡ್‍ನ ಆಸ್ತಿ ಜಪ್ತಿ

Public TV
1 Min Read
Lakhbir Rode

ಚಂಡೀಗಢ: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಹಾಗೂ ಭಯೋತ್ಪಾದನಾ ನಿಗ್ರಹ ದಳದ ದಾಳಿಯ ನಂತರ ಖಲಿಸ್ತಾನಿ ಭಯೋತ್ಪಾದಕ (Khalistani Terrorist) ಲಖ್ಬೀರ್ ಸಿಂಗ್ ರೋಡ್‍ನ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ.

ನಿಷೇಧಿತ ಸಂಘಟನೆ ಇಂಟರ್‌ನ್ಯಾಶನಲ್ ಸಿಖ್ ಯೂತ್ ಫೆಡರೇಶನ್ (ಐಎಸ್‍ವೈಎಫ್) ಮುಖ್ಯಸ್ಥ ಲಖ್ಬೀರ್ ಸಿಂಗ್ ರೋಡ್‍ನನ್ನು ಕೇಂದ್ರ ಸರ್ಕಾರ ಭಯೋತ್ಪಾದಕರ ಪಟ್ಟಿಗೆ ಸೇರಿಸಿತ್ತು. ಆತನ ಪಂಜಾಬ್‍ನ‌ (Punjab) ಮೊಗಾದಲ್ಲಿರುವ ಮನೆ ಹಾಗೂ ಆಸ್ತಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆತನ ವಿರುದ್ಧ ಹಲವಾರು ಭಯೋತ್ಪಾದಕ ಕೃತ್ಯ ಎಸಗಿರುವ ಪ್ರಕರಣಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಕಾಲಿಗೆ ಬಿದ್ದ ಶಾಸಕ ಮುನಿರತ್ನ

ಆರ್‌ಡಿಎಕ್ಸ್ ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ಕಳ್ಳಸಾಗಣಿಕೆಯಲ್ಲಿ ಆತನ ಪಾತ್ರವಿದೆ. ನವದೆಹಲಿಯ ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದ. ಅಲ್ಲದೇ ಪಂಜಾಬ್‍ನಲ್ಲಿ ದ್ವೇಷವನ್ನು ಹರಡುವುದರಲ್ಲಿ ಆತನ ಪ್ರಮುಖಪಾತ್ರವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎನ್‍ಐಎ ವಿಶೇಷ ನ್ಯಾಯಾಲಯದ ಆದೇಶದ ನಂತರ ಅಧಿಕಾರಿಗಳು ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಇದನ್ನೂ ಓದಿ: ನಾಂದೆಡ್ ಆಸ್ಪತ್ರೆಯಲ್ಲಿ 8 ದಿನಗಳಲ್ಲಿ 108 ಮಂದಿ ದುರ್ಮರಣ!

Web Stories

Share This Article