ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್‍ಐಟಿ ಪೊಲೀಸರಿಗೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಪಾಕ್ ಪ್ರೇಮಿ ಅಮೂಲ್ಯ ಸೇರಿದಂತೆ ಕೆಲ ವಿದ್ಯಾರ್ಥಿಗಳು ಬೆಂಗಳೂರು ಸ್ಟೂಡೆಂಟ್ ಫೆಡರೇಶನ್(ಬಿಎಸ್‍ಎಫ್) ಹೆಸರಿನಲ್ಲಿ ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದರು. ಸಿಎಎ, ಎನ್‌ಆರ್‌ಸಿ ಸೇರಿದಂತೆ ಕೆಲ ಹಿಂದೂ ವಿರೋಧಿ ವಿಚಾರಗಳಿಗೆ ಹೇಗೆ ಪ್ರತಿಭಟನೆಯ ರೂಪುರೇಷಗಳು ಇರಬೇಕು ಅನ್ನೋದನ್ನ ಈ ಗ್ರೂಪ್‍ನಲ್ಲಿ ಚರ್ಚೆ ಮಾಡುತ್ತಿದ್ದರು. ನೂರಾರು ಎಡಪಂಥೀಯ ವ್ಯಕ್ತಿಗಳು, ವಿದ್ಯಾರ್ಥಿಗಳು ಈ ಗ್ರೂಪ್‍ನಲ್ಲಿದ್ದರು.
Advertisement
Advertisement
ಈ ಗ್ರೂಪ್ ಹೊರತುಪಡಿಸಿ ಅಮೂಲ್ಯ, ಆರ್ದ್ರಾ ಸೇರಿದಂತೆ ಕೆಲವೇ ಸಮಾನ ಮನಸ್ಕರು ಸೇರಿಕೊಂಡು ಯಂಗ್ ಇಂಡಿಯಾ ಅನ್ನೋ ಮತ್ತೊಂದು ವಾಟ್ಸಪ್ ಗ್ರೂಪ್ ಮಾಡ್ಕೊಂಡಿದ್ದರು. ಯಂಗ್ ಇಂಡಿಯಾ ಗ್ರೂಪ್‍ನಲ್ಲಿ ಆಯ್ದ ಕೆಲವರಿಗಷ್ಟೇ ಅವಕಾಶವಿದ್ದು, ಪ್ರತಿಭಟನೆಗಳು, ಸಭೆ ಸಮಾರಂಭಗಳ ಬಗ್ಗೆ ಗೌಪ್ಯ ಮಾಹಿತಿಗಳನ್ನು ಇದರಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
Advertisement
Advertisement
ಸದ್ಯ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರ ತಂಡ ಆರೋಪಿಗಳ ಬಳಿ ಸೋಷಿಯಲ್ ಮೀಡಿಯಾದ ಪೋಸ್ಟ್ ಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಯಂಗ್ ಇಂಡಿಯಾ ವಾಟ್ಸಪ್ ಗ್ರೂಪ್‍ನಲ್ಲಿ ಯಾರೆಲ್ಲಾ ಸದಸ್ಯರು ಇದ್ದಾರೋ, ಅವರನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು ತಿರ್ಮಾನ ಮಾಡಿದ್ದಾರೆ.
ಅಷ್ಟೇ ಅಲ್ಲದೇ ವಿಚಾರಣೆ ವೇಳೆ ಕಾರ್ಪೋರೇಟರ್ ಇಮ್ರಾನ್ ಪಾಷ ಆಯೋಜನೆ ಮಾಡಿದ್ದ ಎರಡು ಪ್ರತಿಭಟನೆ ಕಾರ್ಯಕ್ರಮದಲ್ಲಿ ಭಾಗವಹಿಸರೋದಾಗಿ ಅಮೂಲ್ಯ ಹೇಳಿಕೊಂಡಿದ್ದಾಳೆ. ಸದ್ಯ ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದ್ದು, ಹಂತ ಹಂತವಾಗಿ ವಿವಿಧ ಪೊಲೀಸರ ತಂಡಗಳು ಅಮೂಲ್ಯ, ಆರ್ದ್ರಾಳನ್ನು ವಿಚಾರಣೆ ನಡೆಸಲಿದ್ದಾರೆ.