ಬೆಂಗಳೂರು: ನಗರದ ಫ್ರೀಡಂ ಪಾರ್ಕ್‍ನಲ್ಲಿ `ಪಾಕಿಸ್ತಾನ್ ಜಿಂದಾಬಾದ್’ ಅಂತ ದೇಶದ್ರೋಹಿ ಘೋಷಣೆ ಕೂಗಿ, ಹೀರೋ ಆಗಲು ಹೋಗಿದ್ದ ಅಮೂಲ್ಯ ಲಿಯೋನಾ, ಈಗ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಕಂಬಿ ಎಣಿಸ್ತಿದ್ದಾಳೆ. 14 ದಿನ ನ್ಯಾಯಾಂಗ ಬಂಧನ ವಿಧಿಸಿ 5ನೇ ಎಸಿಎಂಎಂ ಜಡ್ಜ್ ಆದೇಶಿಸಿದ್ದಾರೆ. ಇಷ್ಟಾದರೂ ಕೂಡ ಅಮೂಲ್ಯಳಿಗೆ ಭಯವಾಗಲಿ, ಪಶ್ಚಾತಾಪವಾಗಿ ಆಗಿಲ್ಲ. ಬದಲಿಗೆ ವಿಕ್ಟರಿ ಸಿಂಬಲ್ ತೋರಿಸಿ ಭಂಡತನ ಮೆರೆದಿದ್ದಾಳೆ.
Advertisement
ಪಾಕಿಸ್ತಾನ ಜಿಂದಾಬಾದ್ ಅಂತ ಘೋಷಣೆ ಕೂಗಿ ಏಕಾಏಕಿ ಕುಖ್ಯಾತಿ ಗಳಿಸಿದ ಆರೋಪಿ ಅಮೂಲ್ಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ. ಅಮೂಲ್ಯ ಹೇಳಿಕೆ ವಿಡಿಯೋ ಆಧಾರದ ಮೇಲೆ ಅವರನ್ನು ಅರೆಸ್ಟ್ ಮಾಡಿದ ಉಪ್ಪಾರಪೇಟೆ ಠಾಣೆ ಪೊಲೀಸರು, ಸುಮೋಟೋ ಕೇಸ್ ದಾಖಲಿಸಿ ಎಫ್‍ಐಆರ್ ದಾಖಲಿಸಿಕೊಂಡರು. ಅಮೂಲ್ಯ ವಿರುದ್ಧ ಐಪಿಸಿ ಸೆಕ್ಷನ್ 124ಎ(ದೇಶದ್ರೋಹ ಆರೋಪ), 153ಎ(ಶತೃತ್ವ ಬಿತ್ತುವುದು), 153ಬಿ(ಭಾವೈಕ್ಯತೆ ಹಾಗೂ ರಾಷ್ಟೀಯ ಏಕೀಕರಣಕ್ಕೆ ಧಕ್ಕೆ ತರುವುದು) ಸೆಕ್ಷನ್ ಅಡಿ ಕೇಸ್ ದಾಖಲಿಸಿದ್ದಾರೆ.
Advertisement
Advertisement
ಈ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ಪ್ರತ್ರಿಕ್ರಿಯಿಸಿ, ಅಮೂಲ್ಯ ವಿಚಾರಣೆ ನಡೆಸಿದ್ದಾಗ ಉದ್ದೇಶಪೂರ್ವಕವಾಗಿಯೇ ಮಾಡಿದ್ದಾರೆ ಅಂತ ಅನ್ನಿಸುತ್ತೆ ಎಂದು ಡಿಸಿಪಿ ರಮೇಶ್ ಹೇಳಿಕೆ ನೀಡಿದರು. ಅಮೂಲ್ಯ ಪರ ವಕೀಲರು ಕೂಡ ಡಿಸಿಪಿ ರಮೇಶ್ ಹಾಗೂ ಸೌಮೇಂದು ಮುಖರ್ಜಿ ಅವರನ್ನು ಭೇಟಿಯಾಗಿದ್ದರು. ಆದರೆ ಬ್ಯುಸಿ ಇರೋ ಕಾರಣ ಭೇಟಿಯಾಗಲು ಆಗಲ್ಲ ಅಂತ ಅಧಿಕಾರಿಗಳು ನಿಕಾರಿಸಿದ್ರು. ನಂತರ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಯ್ತು. ಇದನ್ನೂ ಓದಿ: ಮಗಳು ಮಾಡಿದ್ದು ತಪ್ಪು, ಅವಳ ಕೈ-ಕಾಲು ಮುರಿಯಲಿ: ಅಮೂಲ್ಯ ತಂದೆ
Advertisement
ಬಳಿಕ ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮದಲ್ಲಿರುವ 5ನೇ ಎಸಿಎಂಎಂ ಜಡ್ಜ್ ಶಿರಿನ್ ಜೆ ಅನ್ಸಾರಿ ನಿವಾಸಕ್ಕೆ ಹಾಜರು ಪಡಿಸಿದರು. ಇಲ್ಲಿಯೂ ಅಮೂಲ್ಯಗೆ ಕಿಂಚಿಷ್ಟೂ ಭಯವಾಗಲಿ, ಪಶ್ಚಾತಾಪವಾಗಲಿ ಕಾಣಲೇ ಇಲ್ಲ. ಯಾಕಂದ್ರೆ ಜಡ್ಜ್ ಎದುರು ಹಾಜರು ಪಡಿಸುವ ಮುನ್ನ ವಿಕ್ಟರಿ ಸಿಂಬಲ್ ತೋರಿಸಿ ಭಂಡತನ ಮೆರೆದಿದ್ದಾಳೆ. ಅಮೂಲ್ಯ ಲಿಯೋನಾಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ 5 ನೇ ಎಸಿಎಂಎಂ ನ್ಯಾಯಾಧೀಶರಾದ ಶಿರಿನ್ ಜೆ.ಲಿಯೋನಿ ಆದೇಶ ನೀಡಿದ್ರು. ತಕ್ಷಣವೇ ಅಮೂಲ್ಯಳನ್ನ ಪರಪ್ಪನ ಅಗ್ರಹಾರಕ್ಕೆ ಉಪ್ಪಾರಪೇಟೆ ಪೊಲೀಸರು ಕರೆದೊಯ್ದರು. ಇದನ್ನೂ ಓದಿ: ಮುಂದೇನು ಮಾತನಾಡುತ್ತಿದ್ದಳು ಎಂದು ಕಾದು ನೋಡಬೇಕಿತ್ತು: ಅಮೂಲ್ಯ ತಾಯಿ
ಆಯೋಜಕರ ವಿರುದ್ಧವೂ ಕೇಸ್‍ಗೆ ಚಿಂತನೆ:
ಫ್ರೀಡಂ ಪಾರ್ಕ್‍ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಅಮೂಲ್ಯ ಮಾತಿಗೆ ಅವಕಾಶ ಕಲ್ಪಿಸಿದ ಕಾರ್ಯಕ್ರಮ ಆಯೋಜಿಸಿದ್ದ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷ ವಿರುದ್ಧ ದೇಶದ್ರೋಹ ಕೇಸ್ ದಾಖಲಿಸಲು ಚಿಂತನೆ ನಡೆಸಲಾಗಿದೆ ಅಂತ ತಿಳಿದು ಬಂದಿದೆ. ಆದರೆ ಅಮೂಲ್ಯಗೆ ನಾವ್ಯಾರು ಆಹ್ವಾನ ಕೊಟ್ಟಿಲ್ಲ. ಡಿಸಿಪಿ ಬಳಿ ನಾನೇ ಸ್ವತಃ ದೂರು ನೀಡಿದ್ದೇನೆ ಅಂತ ಇಮ್ರಾನ್ ಹೇಳಿದ್ರು. ಅಲ್ಲದೆ ನಮ್ಮ ಪ್ರತಿಭಟನೆ ಹತ್ತಿಕ್ಕಲು, ಶಾಂತಿಭಂಗ ಮಾಡಲು ಯಾರೋ ಸಂಚು ನಡೆಸಿದ್ದಾರೆ ಅಂತಲೂ ಆರೋಪಿಸಿದರು. ಇದನ್ನೂ ಓದಿ: ಬೆಂಗ್ಳೂರಿನ ಓವೈಸಿ ಕಾರ್ಯಕ್ರಮದ ವೇದಿಕೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದ ಯುವತಿ
ಒಟ್ಟಿನಲ್ಲಿ ಇಂಥ ಕ್ರಿಮಿಗಳನ್ನು ಎಳಸಿನಲ್ಲೇ ಒಸಕಿ ಹಾಕಬೇಕು. ಇಲ್ಲವಾದಲ್ಲಿ ಹೆಮ್ಮರವಾಗಿ ಬೆಳೆದು ದೇಶಕ್ಕೇ ವಿಷವಿಕ್ಕೋದರಲ್ಲಿ ಅನುಮಾನ ಇಲ್ಲ. ಇದನ್ನೂ ಓದಿ: ಅಮೂಲ್ಯ ಜೊತೆ ವೇದಿಕೆಯಲ್ಲಿದ್ದ ಎಲ್ಲರ ಮೇಲೆ ದೇಶದ್ರೋಹ ಕೇಸ್ ಹಾಕಿ: ಅನಂತ್ ಕುಮಾರ್ ಹೆಗ್ಡೆ