ಬೆಂಗಳೂರು: ಮತಾಂತರ ನಿಯಂತ್ರಣ ಕಾಯ್ದೆಯ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಆಕ್ರೋಶ ಭರಿತರಾಗಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿ ಕಾಂಗ್ರೆಸ್ ಪಕ್ಷ ಮತ್ತು ಡಿ.ಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದೆ.
ಟ್ವೀಟ್‍ನಲ್ಲಿ ಏನಿದೆ?: ಕೆಪಿಸಿಸಿ ಅಧ್ಯಕ್ಷರಿಗೆ ತಮ್ಮದೇ ಕೋಟೆ ಕನಕಪುರ, ಕಪಾಲಿ ಬೆಟ್ಟ, ಹಾರೋಬೆಲೆ ವ್ಯಾಪ್ತಿಯಲ್ಲಿ ಮತಾಂತರದ ಪರವಾಗಿರುವವರ ಮತ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಮತಾಂತರದ ಪರವಾಗಿರುವವರ ಓಲೈಕೆಗಾಗಿ ಮತಾಂತರ ನಿಯಂತ್ರಣ ಕಾಯ್ದೆಯಂತಹ ಜನಸ್ನೇಹಿ ಕಾನೂನಿಗೆ ವಿರೋಧಿಸುತ್ತಿದ್ದೀರಿ ಅಲ್ಲವೇ? ಎಂದು ಪ್ರಶ್ನಿಸಿ ಹಿಂದೂ ವಿರೋಧಿ ಕಾಂಗ್ರೆಸ್ ಎನ್ನುವ ಹ್ಯಾಶ್ ಟ್ಯಾಗ್ ಹಾಕಿ ಟ್ವೀಟ್ ಮಾಡಲಾಗಿದೆ.
ಮತಾಂತರ ನಿಯಂತ್ರಣ ಕಾಯ್ದೆಯ ವಿರುದ್ಧ ಕೆಪಿಸಿಸಿ ಅಧ್ಯಕ್ಷ @DKShivakumar ಅವರು ಆಕ್ರೋಶ ಭರಿತರಾಗಿದ್ದಾರೆ.
ಇಟಲಿ ಮೂಲದವರನ್ನು ಮೆಚ್ಚಿಸುವುದಕ್ಕಾಗಿ ಈ ಸದಾರಮೆ ನಾಟಕವೇ?
ಹಿಂದೂಗಳು ಮತಾಂತರವಾದರೂ ಪರವಾಗಿಲ್ಲ ಎನ್ನುವ ನಿಮ್ಮ ಹಿಂದೂ ವಿರೋಧಿ ನಿಲುವಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ.#ಹಿಂದೂವಿರೋಧಿಕಾಂಗ್ರೆಸ್
— BJP Karnataka (@BJP4Karnataka) March 18, 2022
ಮತಾಂತರ ನಿಯಂತ್ರಣ ಕಾಯ್ದೆಯ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಆಕ್ರೋಶ ಭರಿತರಾಗಿದ್ದಾರೆ. ಇಟಲಿ ಮೂಲದವರನ್ನು ಮೆಚ್ಚಿಸುವುದಕ್ಕಾಗಿ ಈ ಸದಾರಮೆ ನಾಟಕವೇ? ಹಿಂದೂಗಳು ಮತಾಂತರವಾದರೂ ಪರವಾಗಿಲ್ಲ ಎನ್ನುವ ನಿಮ್ಮ ಹಿಂದೂ ವಿರೋಧಿ ನಿಲುವಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಟ್ವೀಟ್ ಮಾಡುವ ಮೂಲಕವಾಗಿ ವಾಗ್ದಾಳಿ ಮಾಡಿದೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ – ಎಲ್ಲ ಮುಸಲ್ಮಾನರು ಕೆಟ್ಟವರಲ್ಲ, ಎಲ್ಲ ಹಿಂದೂಗಳು ಒಳ್ಳೆಯವರಲ್ಲ: ಸೋಮಣ್ಣ