ಬೆಂಗಳೂರು: ಧರ್ಮದ ಹೆಸರಲ್ಲಿ ದೇಶ ಒಡೆಯಲು ನಾವು ಬಿಡಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಶಾಸಕಿ ಸೌಮ್ಯ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಸಿಎಎ, ಎನ್‍ಆರ್ ಸಿ ಕಾಯ್ದೆ ಜಾರಿ ವಿರೋಧಿಸಿ ಜಯನಗರ ಈದ್ಗಾ ಮೈದಾನದ ಪ್ರತಿಭಟನೆಯಲ್ಲಿ ಶಾಸಕಿ ಸೌಮ್ಯ ರೆಡ್ಡಿ ಭಾಗವಹಿಸಿ ಮಾತನಾಡಿದರು. ದೇಶದಲ್ಲಿ ಭೀಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪೌರತ್ವ ಕಾಯ್ದೆ ವಿರುದ್ಧ ದೇಶದೆಲ್ಲಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಮೋದಿ ನೋಟು ಅಮಾನ್ಯಿಕರಣ, ಜಿಎಸ್ಟಿ ಜಾರಿಗೆ ತಂದಾಗ ದೇಶಕ್ಕೆ ಒಳ್ಳೆದು ಆಗಬಹುದೆಂದು ಜನರು ಸುಮ್ಮನಾಗಿದ್ದರು. ಆದರೆ ಸಿಎಎ ಹಾಗೂ ಎನ್‍ಆರ್ ಸಿ ಜಾರಿ ವಿಚಾರವಾಗಿ ಸುಮ್ಮನೆ ಕೈಕಟ್ಟಿಕೂರುವುದಿಲ್ಲ ಎಂದರು.
Advertisement
Advertisement
ಧರ್ಮದ ಹೆಸರಲ್ಲಿ ದೇಶ ಹೊಡೆಯಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಅಸಲಿ ಹಿಂದೂ ಎಂದರೇ ಹಿಂದು, ಮುಸ್ಲಿಂ, ಸಿಖ್ ಧರ್ಮದವರನ್ನೆಲ್ಲಾ ಒಗ್ಗೂಡಿಸಿಕೊಂಡು ಹೋಗುವವರು ನಿಜವಾದ ಹಿಂದೂಗಳು. ರಾಜ್ಯದಲ್ಲಿ ಪೌರತ್ವ ಕಾಯ್ದೆ ಖಂಡಿಸಿ ಪ್ರತಿಭಟನೆ ನಡೆಯುತ್ತಿದ್ದಾಗ ರಾಜ್ಯ ಸರ್ಕಾರ ಎಲ್ಲಾ ಕಡೆ 144 ಸೆಕ್ಷನ್ ಜಾರಿ ಮಾಡಿ ನಮ್ಮ ದನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದರು. ರಾಜ್ಯ ಸರ್ಕಾರದ ನಡೆಯ ವಿರುದ್ಧ ನಾನು ಸೇರಿದಂತೆ ನಾಲ್ಕು ಜನ ಹೈಕೋರ್ಟ್ ಮೇಟ್ಟಿಲೇರಿದ್ದೆವು. ಸಿಎಎ ಮತ್ತು ಎನ್‍ಆರ್‍ಸಿ ಜಾರಿ ವಾಪಾಸ್ ಪಡೆಯದೆ ಹೋದರೂ ನಾವು ಇಲ್ಲಿಗೆ ಸುಮ್ಮನಾಗುವುದಿಲ್ಲ. ನಮ್ಮ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.