ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆಯುತ್ತಿರುವ ಇತಿಹಾಸ ಪ್ರಸಿದ್ಧ ಅಂತರಘಟ್ಟಮ್ಮನ ಜಾತ್ರೆಯಲ್ಲಿ ನೂರಾರು ಎತ್ತಿನಗಾಡಿಗಳ ಮಧ್ಯೆ ಒಂದು ಟಗರಿನ ಗಾಡಿ ಎಲ್ಲರ ಗಮನ ಸೆಳೆದಿದೆ.
Advertisement
ಕಳೆದೊಂದು ವಾರದಿಂದ ಅಜ್ಜಂಪುರ ತಾಲೂಕಿನ ಅಂತರಘಟ್ಟೆಯಲ್ಲಿ ಅಂತರಘಟ್ಟಮನ ಜಾತ್ರೆ ನಡೆಯುತ್ತಿದೆ. ಈ ಜಾತ್ರೆಗೆ ಸುತ್ತಮುತ್ತಲಿನ ಹಳ್ಳಿ-ತಾಲೂಕು ಹಾಗೂ ಜಿಲ್ಲೆಯ ಜನ ಕೂಡ ಎತ್ತಿನಗಾಡಿಯಲ್ಲಿ ಬಂದು ಅಂತರಘಟ್ಟಮನಿಗೆ ಪೂಜೆ ಸಲ್ಲಿಸಿ ಹೋಗುತ್ತಾರೆ. ಆದರೆ, ನೂರಾರು ಎತ್ತಿನಗಾಡಿಗಳ ಮಧ್ಯೆ ಬಗ್ಗವಳ್ಳಿ ಗ್ರಾಮದ ರೈತ ಲಿಂಗಪ್ಪ, ವಿಶೇಷ ಗಾಡಿ ಮಾಡಿಸಿ ಟಗರಿನ ಗಾಡಿಯಲ್ಲಿ ಜಾತ್ರೆಗೆ ಹೊರಟಿದ್ದಾರೆ. ಇದನ್ನೂ ಓದಿ: ಏಳು ದಿನದ ಟಗರು 2 ಲಕ್ಷಕ್ಕೆ ಮಾರಾಟ!
Advertisement
Advertisement
ಗಾಡಿ ಕಟ್ಟಿಕೊಂಡು ಸಂಚರಿಸೋದಕ್ಕೆ ಟಗರಿಗೆ ವಿಶೇಷವಾದ ತರಬೇತಿ ಕೂಡ ನೀಡಿದ್ದಾರೆ. ಹಾವೇರಿಯಿಂದ ಟಗರಿನ ಗಾಡಿಯನ್ನು ತರಿಸಿರುವ ಲಿಂಗಪ್ಪ ಟಗರಿನ ಗಾಡಿಯಲ್ಲಿ ಅಂತರಘಟ್ಟಮನ ದರ್ಶನಕ್ಕೆ ಹೊರಟಿದ್ದಾರೆ. ಗಾಡಿ ಹಾಗೂ ಟಗರುಗಳಿಗೆ ನವವಧುವಿನಂತೆ ಶೃಂಗರಿಸಿ ಹೊರಟಿದ್ದಾರೆ. ಈ ಗಾಡಿಯನ್ನು ನೋಡಲು ದಾರಿಯುದ್ಧಕ್ಕೂ ನೂರಾರು ಜನ ನಿಂತಿದ್ದಾರೆ. ರೈತ ಲಿಂಗಪ್ಪನವರ ಈ ಭಕ್ತಿ ಹಾಗೂ ಪ್ರಾಣಿಗಳ ಮೇಲಿನ ಪ್ರೀತಿಗೆ ಸ್ಥಳೀಯರು ಕೂಡ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಹಿಜಬ್ ನಮಗೆ ಮುಖ್ಯ – ಕಲಬುರಗಿ ಉರ್ದು ಶಾಲೆಗೆ ಗೈರಾದ ವಿದ್ಯಾರ್ಥಿನಿಯರು
Advertisement
ಈ ಜಾತ್ರೆಗೆ ತರೀಕೆರೆ, ಕಡೂರು, ಬೀರೂರು, ಭದ್ರಾವತಿ, ಹೊಸದುರ್ಗ, ಶಿವಮೊಗ್ಗ, ಅರಸೀಕೆರೆ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ರೈತರು ಬಂದು ಹೋಗುತ್ತಾರೆ. ಅಜ್ಜಂಪುರದ ಅಂತಗಘಟ್ಟೆ ಜಾತ್ರೆ ಅಂದ್ರೆ ಇಡೀ ರಾಜ್ಯಕ್ಕೆ ಚಿರಪರಿಚಿತ. ಈ ಜಾತ್ರೆಯ ವೇಳೆ ತರೀಕೆರೆ-ಅಜ್ಜಂಪುರ ತಾಲೂಕಿನಲ್ಲಿ ಸಾವಿರಾರು ಕುರಿಗಳನ್ನು ಅಂತರಘಟ್ಟಮ್ಮನಿಗೆ ಹರಕೆ ಸಲ್ಲಿಸುವ ವಾಡಿಕೆ ಇದೆ.