ಮುಂಬೈ: ಪರೀಕ್ಷೆ ಬರೆದಿದ್ದ 1600 ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ನಾಪತ್ತೆಯಾಗಿರುವ ಘಟನೆ ಮುಂಬೈ ವಿಶ್ವವಿದ್ಯಾಲಯದಲ್ಲಿ ನಡೆದಿದ್ದು, ಇಷ್ಟು ವಿದ್ಯಾರ್ಥಿಗಳಿಗೂ ಬೋನಸ್ ಅಂಕಗಳನ್ನು ನೀಡಲು ವಿಶ್ವವಿದ್ಯಾಲಯ ತೀರ್ಮಾನ ತೆಗೆದುಕೊಂಡಿದೆ.
ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದಿಂದ ಉತ್ತರ ಪತ್ರಿಕೆಗಳು ನಾಪತ್ತೆಯಾಗಿದ್ದು, ಈ ಕುರಿತು ತೀರ್ಮಾನವನ್ನು ಕೈಗೊಳ್ಳಲು ವಿಶ್ವವಿದ್ಯಾಲಯದ ಅಧಿಕಾರಿಗಳು ಗುರುವಾರ ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ತೆಗೆದುಕೊಂಡ ನಿರ್ಣಾಯದಂತೆ ಎಲ್ಲ ವಿದ್ಯಾರ್ಥಿಗಳಿಗೂ ಇತರೆ ವಿಷಯಗಳಲ್ಲಿ ತೆಗೆದುಕೊಳ್ಳಲಾಗಿರುವ ಅಂಕಗಳಿಗೆ ಆಧಾರವಾಗಿ ಬೋನಸ್ ಅಂಕಗಳನ್ನು ನೀಡುವ ತೀರ್ಮಾನವನ್ನು ಅಡಳಿತ ಮಂಡಳಿ ಕೈಗೊಂಡಿದೆ.
Advertisement
ಪರೀಕ್ಷೆಯ ಉತ್ತರ ಪತ್ರಿಕೆಗಳು ಕಳೆದು ಹೋಗಲು ಹೊಸ ಮೌಲ್ಯಮಾಪನ ತಂತ್ರಜ್ಞಾನವನ್ನು(ಆನ್‍ಸ್ಕ್ರೀನ್ ಮಾರ್ಕೆಟಿಂಗ್ ಸಿಸ್ಟಮ್-ಓಎಸ್‍ಎಂ) ಅಳವಡಿಸಿಕೊಂಡಿರುವುದೇ ಕಾರಣವಾಗಿದೆ. ಈಗಾಗಲೇ ಪರೀಕ್ಷಾ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲು ಮೆರಿಟ್ಟ್ರಾಕ್ನೊ ಕಂಪೆನಿ(ಐಟಿ)ಯೊಂದಿಗೆ ಒಂದು ವರ್ಷದ ಒಪ್ಪಂದ ಮಾಡಿಕೊಳ್ಳಲಾಗಿದೆ. ಒಪ್ಪಂದನ್ನು ಹಾಗೆಯೇ ಮುಂದುವರೆಸಲಾಗುತ್ತದೆ ಎಂದು ಸಭೆಯಲ್ಲಿ ತೀರ್ಮಾನಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಕಳೆದು ಹೋಗಿರುವ ಉತ್ತರ ಪತ್ರಿಕೆಗಳನ್ನು ಹುಡುಕಲು ಸಾಧ್ಯವಾಗಿಲ್ಲ. ಅದರಿಂದ ವಿದ್ಯಾರ್ಥಿಗಳ ಫಲಿತಾಂಶವನ್ನು ಘೋಷಣೆ ಮಾಡಲು ಈ ಕ್ರಮವನ್ನು ಕೈಗೊಳ್ಳುತ್ತಿದೆ. ಹೊಸ ತಂತ್ರಜ್ಞಾನದ ಅಳವಡಿಕೆಯ ಸಂದರ್ಭದಲ್ಲಿ ಮಾಹಿತಿಯ ಕೊರತೆಯಿಂದ ಈ ತಪ್ಪು ನಡೆದಿದೆ. ಅದರಿಂದ ವಿಶ್ವವಿದ್ಯಾಲಯವು ಮುಂದಿನ 5ನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ತೀರ್ಮಾನಕೈಗೊಂಡಿದೆ. ಮುಂದಿನ ಬಾರಿ ಸಾಫ್ಟ್ ವೇರ್‍ನಲ್ಲಿ ಬದಲಾವಣೆಗಳನ್ನು ಮಾಡಿ ಅಳವಡಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.