ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Vidhanasabha Election) ಗೆ ಇನ್ನೈದು ತಿಂಗಳು ಬಾಕಿ ಇದೆ. ಈ ಮಧ್ಯೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಯವರು ರಾಜ್ಯಕ್ಕೆ ಆಗಮಿಸಿದ್ದು, ಆ ಬಳಿಕ ಇಡೀ ರಾಜಕೀಯ ಚಿತ್ರಣವೇ ಬದಲಾಯ್ತಾ ಎಂಬ ಅನುಮಾನವೊಂದು ಮೂಡಿದೆ.
Advertisement
ಹೌದು. ಕರ್ನಾಟಕದಲ್ಲಿ ಮೋದಿ ಹಾಗೂ ಅಮಿತ್ ಶಾ 9Amitshah) ಎಲೆಕ್ಷನ್ ಗೇಮ್ ಶುರು ಮಾಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಲಿಂಗಾಯತ (Lingayat), ಒಕ್ಕಲಿಗ (Okkaliga), ಎಸ್‍ಸಿ (SC), ಎಸ್‍ಟಿ 9ST), ಕುರುಬ ಸಮುದಾಯಗಳತ್ತ ಚಿತ್ತಹರಿಸಿದ್ದಾರೆ ಎನ್ನಲಾಗಿದೆ.
Advertisement
Advertisement
ಹಿಂದುತ್ವ ಮೊದಲ ಅಜೆಂಡಾ ಎಂಬ ಸಂದೇಶ ರವಾನಿಸಿರುವ ಬಿಜೆಪಿ ಹೈಕಮಾಂಡ್, ಜಾತಿ ಸಮೀಕರಣವೂ ಅಷ್ಟೇ ಮುಖ್ಯ ಎಂದು ಹೇಳಿದೆ. ಹಾಗಾಗಿ ಕರ್ನಾಟಕದ ಪ್ರಮುಖ ಸಮುದಾಯಗಳು, ನಿರ್ಣಾಯಕವಾಗಿರುವ ಸಮುದಾಯಗಳನ್ನೇ ಓಲೈಕೆ ಮಾಡಲು ಬಿಜೆಪಿ ಮುಂದಾಗಿದೆ. ಇದನ್ನೂ ಓದಿ: ಮೋದಿಯಿಂದಾಗಿ ನಳಿನ್ ಕುಮಾರ್ ಕಟೀಲ್ ಡಾಲರ್ ಪದ ಕೇಳಿದರೆ ಬೆಚ್ಚಿ ಬೀಳುತ್ತಾರೆ: ಕಾಂಗ್ರೆಸ್
Advertisement
ಪ್ರಧಾನಿ ನರೇಂದ್ರ ಮೋದಿ ಅವರು ಆಧುನಿಕ ವಿಕಾಸ ಪುರುಷ. ದೇಶದ ಹಲವು ಸಮಸ್ಯೆಗಳನ್ನು ಬಗೆಹರಿಸಿ ಬಲಿಷ್ಠ ರಾಷ್ಟ್ರಕಟ್ಟಿದ್ದಾರೆ. ಕೆಂಪೇಗೌಡರೆಂಬ ಆ ವಿಕಾಸ ಪುರುಷನ ಹಾದಿಯಲ್ಲಿ ನವಭಾರತ ನಿರ್ಮಾಣ ಮಾಡುತ್ತಿರುವ @narendramodi ಅವರಿಂದ ನಾಡಪ್ರಭುಗಳ ಮೂರ್ತಿ ಅನಾವರಣ ದೈವ ಇಚ್ಚೆಯಾಗಿದೆ – ಸಿಎಂ ಶ್ರೀ @BSBommai#KarnatakaWelcomesModi pic.twitter.com/TtdW0TWQXl
— BJP Karnataka (@BJP4Karnataka) November 11, 2022
ಚುನಾವಣೆಗೆ 5 ತಿಂಗಳ ಮೊದಲೇ ಕರ್ನಾಟಕದ ಕ್ಯಾಸ್ಟ್ ಕಾಂಬಿನೇಶನ್ ಗಟ್ಟಿ ಮಾಡಲು ಮೆಗಾ ಪ್ಲಾನ್ ರೂಪಿಸಲಾಗಿದೆ. ಮೊದಲು ಪ್ರಬಲ, ನಿರ್ಣಾಯಕ ಸಮುದಾಯಗಳತ್ತ ಬಿಜೆಪಿ ಹೈಕಮಾಂಡ್ ಚಿತ್ತ ಹರಿಸಿದೆ. ಆ ಬಳಿಕ ಹಿಂದುಳಿದ ವರ್ಗಗಳ ಸಣ್ಣ ಸಣ್ಣ ಸಮುದಾಯಗಳ ಮೇಲೆ ಕಣ್ಣಿಡುವ ತಂತ್ರ ಹೂಡಲಾಗಿದೆ.
ನಿನ್ನೆಯಷ್ಟೇ ಮೋದಿ ಬೆಂಗಳೂರು ಪ್ರವಾಸದಲ್ಲಿ ಮೂರು ಸಮುದಾಯಗಳ ಮೇಲೆ ಹೆಚ್ಚು ಚಿತ್ತ ಹರಿಸಿ ಎಲೆಕ್ಷನ್ ಮಂತ್ರ ಜಪಿಸಿದ್ದರು. ಈ ಹಿನ್ನೆಲೆಯಲ್ಲಿ ಡಿಸೆಂಬರ್ ಬಳಿಕ ಕರ್ನಾಟಕದಲ್ಲಿ ಕ್ಯಾಸ್ಟ್ ಬೇಸ್ಡ್ ಪೊಲಿಟಿಕ್ಸ್ ಗೇಮ್ ಜೋರಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಶನಿವಾರ ವಿದ್ಯಾಮಂದಿರಕ್ಕೆ ಚಾಲನೆ – ಸ್ನಾತಕೋತ್ತರ ಪದವಿ ಮೆಗಾ ಎಜ್ಯುಕೇಶನ್ ಎಕ್ಸ್‌ಪೋ