ಮುಂಬೈ: 2020ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಹಾಗೂ ಕಾಮನ್‌ವೆಲ್ತ್ ಗೇಮ್ಸ್-2022ರಲ್ಲಿ ಚಿನ್ನದ ಪದಕ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ ವೇಟ್‌ಲಿಫ್ಟಿಂಗ್ ಕ್ರೀಡಾತಾರೆ ತಮ್ಮ ಹುಟ್ಟುಹಬ್ಬದಂದು ಪರಿಸರ ಪ್ರೀತಿ ಮೆರೆದಿದ್ದಾರೆ.
Made my birthday special by planting trees this year. pic.twitter.com/HTnVwbXpQo
— Saikhom Mirabai Chanu (@mirabai_chanu) August 9, 2022
Advertisement
ಇಂದು ವಿವಿಧೆಡೆ ಗಿಡಗಳನ್ನು ನೆಡುವ ಮೂಲಕ ಮೀರಾಬಾಯಿ ಚಾನು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಲ್ಲದೇ ಗಿಡಗಳನ್ನು ನೆಟ್ಟಿದ್ದು ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿಸಿದೆ ಎಂದು ಟ್ವೀಟ್‌ನಲ್ಲಿ ಬರೆದು, ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರೀಡಾಭಿಮಾನಿಗಳು ಶುಭಕೋರಿದ್ದಾರೆ. ಇದನ್ನೂ ಓದಿ: ಕಾಮನ್‌ವೆಲ್ತ್‌ಗೆ ತೆರಳಿದ್ದ ಇಬ್ಬರು ಪಾಕಿಸ್ತಾನಿ ಬಾಕ್ಸರ್‌ಗಳು ನಾಪತ್ತೆ – PBF
Advertisement
Another year, another medal and birthday celebrations with the family ???? pic.twitter.com/3tzitXW37q
— Saikhom Mirabai Chanu (@mirabai_chanu) August 9, 2022
Advertisement
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಮಿರಾಬಾಯಿ ಚಾನು, `ದೇಶದ ಜನರ ಬೆಂಬಲ ನೋಡಿ ನಾನು ಉತ್ಸುಕಳಾಗಿದ್ದೇನೆ. ಅಲ್ಲದೇ ಕಾಮನ್‌ವೆಲ್ತ್‌ನಲ್ಲಿ ಚಿನ್ನ ಗೆದ್ದಾಗ ರಾಷ್ಟ್ರಗೀತೆ ನುಡಿಸುವ ವೇಳೆ ಎಲ್ಲರೂ ಗಟ್ಟಿಯಾಗಿ ಹಾಡಿದ್ದು, ಮತ್ತಷ್ಟು ಸ್ಫೂರ್ತಿ ನೀಡಿದಂತಾಗಿದೆ. ಸದ್ಯ ನಾನೀಗ ಗಾಯದ ಸಮಸ್ಯೆಗಳಿಂದ ಚೇತರಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಊಟ ಬೇಕಂದ್ರೆ ಕೇಳಿ ಹಾಕಿಸ್ಕೋತಿನಿ ಬಿಡು ಗುರು – ನಟ ಕೋಮಲ್ ಶೈಲಿ ಕಾಪಿ ಹೊಡೆದ್ರಾ ಶಿಖರ್ ಧವನ್?
Advertisement
ಮೀರಾಬಾಯಿ ಚಾನು 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಪದಕ ಗೆದ್ದಿದರು. ಆದರೆ 2022ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಚಿನ್ನ ಗೆದ್ದು ಸಾಧನೆ ಮಾಡಿದ್ದಾರೆ.