ಬೆಂಗಳೂರು: ಕೆಜಿಎಫ್ ಚಿತ್ರ ಸ್ಯಾಂಡಲ್‍ವುಡ್‍ನಲ್ಲಿ ಮೈಲೇಜ್ ಪಡೆದುಕೊಂಡ ಚಿತ್ರ. ಚಿತ್ರದ ಹೊಸ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈಗ ಈ ಫೋಟೋ ಸಾಕಷ್ಟು ವೈರಲ್ ಆಗಿದೆ.
ಕೆಜಿಎಫ್ ಚಿತ್ರ ಸುಮಾರು ಎರಡು ವರ್ಷಗಳಿಂದ ಚಿತ್ರೀಕರಣ ನಡೆಯುತ್ತಿದ್ದು, ಸೆಟ್ ಏರಿದಾಗಿನಿಂದ ಶೂಟಿಂಗ್ ಮುಗಿಯುವರೆಗೂ ಯಶ್ ಚಿತ್ರದಲ್ಲಿ ಒಂದೇ ಲುಕ್‍ನಲ್ಲಿ ಕಾಣಿಸಿಕೊಂಡಿದ್ದರು. ಅದು ಬಿಟ್ಟರೆ ಯಶ್ ಬೇರೆ ಲುಕ್‍ನಲ್ಲಿ ಕಾಣಿಸಿಕೊಳ್ಳಲಿಲ್ಲ. ಯಶ್ ಡಿಫರೆಂಟ್ ಲುಕ್‍ಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗುತ್ತಿತ್ತು. ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋವೊಂದು ಭಾರೀ ಸದ್ದು ಮಾಡುತ್ತಿದೆ.
Advertisement
ಇತ್ತೀಚೆಗಷ್ಟೇ ಕೆಜಿಎಫ್‍ನ ಕೆಲವು ದೃಶ್ಯಗಳ ತುಣುಕನ್ನು ಚಿತ್ರೀಕರಿಸಲಾಗಿದ್ದು, ಯಶ್ ರೆಟ್ರೊ ಸ್ಟೈಲ್‍ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಆದರೆ ಈಗ ಯಶ್ ಕೆಂಪು ಬಣ್ಣದ ಬೆಲ್ ಬಾಟಮ್ ಪ್ಯಾಂಟು, ಬಿಳಿ ಟೀ ಶರ್ಟ್ ಧರಿಸಿರುವ ಶೈಲಿ ಎರಡು ದಶಕದ ಹಿಂದಿನ ಸ್ಟೈಲ್‍ನ್ನು ತೋರಿಸುತ್ತೆ. ಇನ್ನು ಯಶ್ ಪಕ್ಕದಲ್ಲಿ ಓಡಾಡುತ್ತಿರುವ ಜೂನಿಯರ್ ಆರ್ಟಿಸ್ಟ್ ಗಳ ಎರಡು ದಶಕದ ಹಿಂದಿನ ಉಡುಪನ್ನು ಧರಿಸಿರುವುದು ವಿಶೇಷ.
Advertisement
Advertisement
ಕೆಜಿಎಫ್ ಚಿತ್ರ ಹಲವು ಕಾರಣಗಳಿಂದ ತಡವಾಗುತ್ತಿದೆ ಎಂದು ಸ್ವತಃ ಯಶ್ ಹೇಳಿದ್ದರು. ಈ ಚಿತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ಹಾಗೂ ಮಾಳವಿಕಾ ಅಭಿನಯಿಸುತ್ತಿದ್ದಾರೆ. ಮಾಳವಿಕಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಗ ಅನಂತ್ ನಾಗ್ ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದರು. ನಂತರ ಆ ಫೋಟೋವನ್ನು ತಮ್ಮ ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿ, ಅನಂತ್ ನಾಗ್ ಅವರ ಜೊತೆ ನಟಿಸಿದ್ದು ಖುಷಿ ಕೊಟ್ಟಿದೆ ಎಂದು ಹೇಳಿದ್ದರು. ಮತ್ತೊಂದು ಫೋಟೋದಲ್ಲಿ ನಟ ಹಾಗೂ ನಿರ್ದೇಶಕ ನಾಗಾಭರಣ ಅವರ ಜೊತೆ ಮಾಳವಿಕಾ ಕಾಣಿಸಿಕೊಂಡಿದ್ದಾರೆ.
Advertisement
ಸದ್ಯ ಕೆಜಿಎಫ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಚಿತ್ರೀಕರಣವನ್ನು ನಾಜೂಕಾಗಿ ಮುಗಿಸಿದಂತೆಯೇ ಮುಂದಿನ ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡುವ ಯೋಜನೆ ಚಿತ್ರತಂಡ ಹಾಕಿಕೊಂಡಿದೆ. ಹೀಗಾಗಿ ಕೆಜಿಎಫ್ ದಸರಾ ಸಂದರ್ಭದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಸದ್ಯ ಕೆಜಿಎಫ್ ಚಿತ್ರೀಕರಣ ಮುಕ್ತಾಯವಾಗಿದ್ದು, ಅದರ ಜೊತೆಯೇ ಯಶ್ ಇನ್ನೊಂದು ಲುಕ್ ನೋಡಿರೋ ಪ್ರೇಕ್ಷಕರು ಚಿತ್ರ ನೋಡೋಕೆ ಇನ್ನಷ್ಟು ಉತ್ಸುಕರಾಗಿದ್ದಾರೆ.