ಬಳ್ಳಾರಿ: ಕಳೆದ 2 ದಿನಗಳ ಹಿಂದೆ ಬಳ್ಳಾರಿಯಲ್ಲಿ ನಡೆದ ಘನಘೋರ ದುರಂತಕ್ಕೆ ಈಗ ಸಾಕ್ಷಿಗಳು ಒಂದೊಂದಾಗೇ ದೊರೆಯುತ್ತಿವೆ. ವಿದ್ಯುತ್ ಸಮಸ್ಯೆಯಿಂದ ರೋಗಿಗಳ ಸಾವು ಸಂಭವಿಸಿಲ್ಲ ಎನ್ನುತ್ತಿರುವ ವಿಮ್ಸ್ (VIMS Hospital) ಹಾಗೂ ಜಿಲ್ಲಾಡಳಿತ ವಾದಕ್ಕೆ ಈಗ ಮತ್ತೊಂದು ಸಾಕ್ಷಿ ಸಿಕ್ಕಿದೆ.
Advertisement
ಹೌದು. ಕೇವಲ ನಾಲ್ಕು ರೋಗಿಗಳಿಗೆ ಈ ಸಮಸ್ಯೆ ಆಗಿಲ್ಲ. ಬದಲಾಗಿ ಅಲ್ಲಿದ್ದ ಬಹುತೇಕ ರೋಗಿಗಳು (Patients) ಇದೇ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಸ್ಪತ್ರೆಯಲ್ಲಿ ಇದ್ದ ಬಹುತೇಕ ರೋಗಿಗಳು ವಿದ್ಯುತ್ ಸಮಸ್ಯೆಯಿಂದ ಬಲಳುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸುಮಾರು ಆರು ಗಂಟೆಗಳ ಕಾಲ ವಿದ್ಯುತ್ ಕೈಕೊಟ್ಟಿದೆ. ಹೀಗಾಗಿ ಜನರು ಮತ್ತು ರೋಗಿಗಳು ಹೈರಾಣಾಗಿದ್ದಾರೆ. ಆಸ್ಪತ್ರೆಯಲ್ಲಿ ಕರೆಂಟ್ ಕೈ ಕೊಟ್ಟ ಸಂದರ್ಭದಲ್ಲಿ ರೋಗಿ ಸಹೋದರ ಒಬ್ಬ ಲೈನ್‍ಮ್ಯಾನ್ (Lineman) ಒಬ್ಬರನ್ನ ಮಾತನಾಡಿಸಿದ್ದಾರೆ.
Advertisement
Advertisement
ರೋಗಿಯ ಸಂಬಂಧಿ: ಐಸಿಯುನಲ್ಲಿ ಇದ್ದು ಸಾಕಾಗಿದೆ, ಇಲ್ಲಿ ಕರೆಂಟ್ ಬೇರೆ ಇಲ್ಲ..
ಅಣ್ಣಾ ಕರೆಂಟ್ ಯಾವಾಗ ಬರುತ್ತೆ..?
ಲೈನ್‍ಮ್ಯಾನ್: ನಾವೇನು ಬೇಕಂತಾ ಮಾಡ್ತಿವಾ… ನಮಗೇನು ಗೊತ್ತು…?
ಗೊತ್ತಿಲ್ಲಾ, ಗ್ರೌಂಡ್‍ನಲ್ಲಿ ಕರೆಂಟ್ ಶಾರ್ಟ್ ಆಗಿದೆ..
ಎಲ್ಲಾ ವೈರ್ ತೆಗೆದು ಹಾಕಬೇಕು…
ಒಂದು ತಾಸ್ ಆಗುತ್ತೋ.. ಎರಡು ತಾಸ್ ಆಗುತ್ತೋ ಗೊತ್ತಿಲ್ಲ..
Advertisement
ಕರೆಂಟ್ (Power Cut) ಕೈಕೊಟ್ಟಿದ್ದ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ವೈದ್ಯರಿಗೆ ಜನರು ತರಾಟೆಗೆ ತೆಗೆದುಕೊಂಡಿದ್ರು. ಮತ್ತೊಂದ್ಕಡೆ ಐಸಿಯುನಲ್ಲಿದ್ದ ರೋಗಿಗಳ ಸಂಬಂಧಿಕರು, ವೆಂಟೆಲೇಟರ್ ಬಲೂನ್‍ಗಳನ್ನು ಕೈಯಿಂದ ಹಿಡಿದು ಪ್ರೆಸ್ ಮಾಡಿ ರೋಗಿಯನ್ನು ಬದುಕಿಸಲು ಹೋರಾಟ ಮಾಡ್ತಿದ್ರೆ, ಅತ್ತ ನೈಟ್ ಶಿಫ್ಟ್ ನಲ್ಲಿದ್ದ ವೈದ್ಯರು ಫೋನಲ್ಲಿ ವೀಡಿಯೋ ನೋಡೋದ್ರಲ್ಲಿ ಬ್ಯುಸಿಯಾಗಿದ್ರು. ಕನಿಷ್ಠ ಪಕ್ಷ ಏನಾಗ್ತಿದೆ ಅಂತ ಕೂಡ ಬಂದು ನೋಡಿಲ್ಲ.
ಘಟನೆ ಸಂಬಂಧ ಜಿಲ್ಲಾಧಿಕಾರಿ ಖುದ್ದು ಭೇಟಿ ನೀಡಿ ತನಿಖಾ ವರದಿ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಅವರಿಗೆ ಸೂಚನೆ ನೀಡಿದ್ರು. ಆದರೆ ಅದು ಕೂಡ ಪೂರ್ಣಗೊಂಡಿಲ್ಲ. ಕಾರಣ ಈ ದುರಂತದ ಹಿಂದೆ ಸಾಕಷ್ಟು ಅನುಮಾನಗಳಿದ್ದು, ಐಸಿಯುನಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತೆ. ಇದನ್ನೂ ಓದಿ: ಇದು ಸರ್ಕಾರಿ ಪ್ರಾಯೋಜಿತ ಕೊಲೆ – ವಿಮ್ಸ್ ದುರಂತಕ್ಕೆ ಸಿದ್ದು ಕಿಡಿ
ಒಟ್ಟಿನಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ದುರಂತವನ್ನು ಮುಚ್ಚಿ ಹಾಕುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಸತ್ತವರಿಗೆ ಕೆವಲ ಪರಿಹಾರ ನೀಡಿ ಕೈ ತೊಳೆದುಕೊಳ್ಳಲು ಮುಂದಾಗಿದೆ ಎನ್ನುವ ಆರೋಪ ಕೇಳಿಬಂದಿದೆ.