ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಸುರಿದಿರುವ ಭಾರೀ ಮಳೆಗೆ (Rain) ಮತ್ತೊಂದು ಬಲಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸೋಮವಾರ ಬಿದ್ದಿರುವ ಭಾರೀ ಮಳೆಗೆ ಫಕ್ರುದ್ದೀನ್ ಸಾವನ್ನಪ್ಪಿದ್ದಾರೆ. ಘಟನೆ ನೈಸ್ ರಸ್ತೆಯ (NICE Road) ಕಾಚೋಹಳ್ಳಿಯ ಅಂಡರ್ ಪಾಸ್ ಬಳಿ ನಡೆದಿದೆ.
Advertisement
Advertisement
ಸೋಮವಾರ ಕೆಲಸ ಮುಗಿಸಿಕೊಂಡು ರಾಮನಗರ ಕಡೆಗೆ ಬೈಕ್‌ನಲ್ಲಿ ಫಕ್ರುದ್ದೀನ್ ತೆರಳುತ್ತಿದ್ದರು. ಈ ವೇಳೆ ಕಾಚೋಹಳ್ಳಿ ಅಂಡರ್ ಪಾಸ್ ಮೇಲಿನ ನೈಸ್ ರೋಡ್ ಮೇಲೆ ಸಂಚರಿಸುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ನೈಸ್ ರಸ್ತೆಯಲ್ಲಿ ಬಿದ್ದಿದ್ದರು. ಇದನ್ನೂ ಓದಿ: ಇನ್ನೂ ಮೂರು ದಿನ ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ
Advertisement
ಫ್ರಕ್ರುದ್ದೀನ್‌ನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಇದಕ್ಕೂ ಮುನ್ನ ಭಾನುವಾರ ನಗರದಲ್ಲಿ ಸುರಿದಿದ್ದ ಮಹಾಮಳೆಗೆ ಕೆಪಿ ಅಗ್ರಹಾರದ ಬಳಿ ಯುವಕನೊಬ್ಬ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ. ಕೆಆರ್ ಸರ್ಕಲ್ ಬಳಿಯ ಅಂಡರ್‌ಪಾಸ್‌ನಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ಸಿಲುಕಿ ಇನ್ಫೋಸಿಸ್ ಉದ್ಯೋಗಿ ಯುವತಿಯೊಬ್ಬರ ಸಾವೂ ಆಗಿತ್ತು. ಇದನ್ನೂ ಓದಿ: ಆರ್‌ವಿ ರಸ್ತೆ, ಬೊಮ್ಮಸಂದ್ರ ಪ್ರಯಾಣಿಕರಿಗೆ ಗುಡ್ ನ್ಯೂಸ್ – ವರ್ಷಾಂತ್ಯಕ್ಕೆ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ