ಮೈಸೂರು: ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಲು ಕಸರತ್ತು ನಡೆಸಿದೆ. ಇದ್ರ ನಡುವೆಯೂ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಇಂದು ಕೂಡ ಒಬ್ಬರು ಬಲಿ ಆಗಿದ್ದಾರೆ.
6 ಲಕ್ಷ ಸಾಲ ಮಾಡಿದ್ದ ಪಿರಿಯಾಪಟ್ಟಣದ ಬೆಟ್ಟದಪುರದ ಕೂಲಿಕಾರ್ಮಿಕ ಸುಬ್ರಹ್ಮಣ್ಯ, ಕಿರುಕುಳ ತಾಳದೇ ಆತ್ಮಹತ್ಯೆ ಮಾಡ್ಕೊಂಡಿದ್ದಾರೆ.ಇದನ್ನೂ ಓದಿ: ಕೊಪ್ಪಳದ ಹುಲಿಗೆಮ್ಮ ದೇವಸ್ಥಾನದ ಹುಂಡಿ ಎಣಿಕೆ – 64,93500 ರೂ. ಸಂಗ್ರಹ
ಸಕಾಲಕ್ಕೆ ಸಾಲ ಕಟ್ಟದ ಸುಬ್ರಹ್ಮಣ್ಯ ಮನೆ ಮೇಲೆ ಸಾಲದ ವಿವರವನ್ನು ಫೈನಾನ್ಸ್ ಸಿಬ್ಬಂದಿ ಬರೆದಿದ್ದರು. ಅತ್ತ, ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತ ಮಹಿಳೆಯರು ಮೂರು ದಿನ ಸ್ಮಶಾನದಲ್ಲಿ ಕಾಲ ಕಳೆದ ಘಟನೆ ರಾಯಚೂರಿನ ಹಟ್ಟಿಯಲ್ಲಿ ನಡೆದಿದೆ.
ಇನ್ನು, ಬೆಂಗಳೂರಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಚಾಮರಾಜನಗರದ 7ನೇ ತರಗತಿ ಬಾಲಕನೊಬ್ಬ, 3 ಲಕ್ಷ ಸಾಲ ಪಡೆದ ಅಪ್ಪ ಅಮ್ಮನಿಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ನಿತ್ಯ ಕಿರುಕುಳ ಕೊಡ್ತಿದ್ದಾರೆ. ಕಿಡ್ನಿ ಮಾರಿ, ಸಾಲ ಕಟ್ತೀನಿ. ಇದಕ್ಕೆ ಸರ್ಕಾರ ಅನುಮತಿ ಕೊಡ್ಬೇಕು ಎಂದು ಕೋರಿದ್ದಾರೆ. ಇದನ್ನು ಕೇಳಿ ಸಚಿವ ಮಹದೇವಪ್ಪ ಶಾಕ್ ಆಗಿ, ಮೈಕ್ರೋ ಫೈನಾನ್ಸ್‌ವರು ಹೇಗೆ ಟಾರ್ಚರ್ ಕೊಡ್ತಿದ್ದಾರೆ ಅನ್ನೋದು ಅರ್ಥವಾಗ್ತಿದೆ ಎಂದಿದ್ದಾರೆ.ಇದನ್ನೂ ಓದಿ: ಅಸ್ತಿ ವಿಸರ್ಜನೆಯಿಂದ ಕಾವೇರಿ ನದಿ ಮಲಿನ – ವೈಜ್ಞಾನಿಕವಾಗಿ ಅಸ್ತಿ ಬಿಡಲು ಯೋಜನೆ ರೂಪಿಸುವಂತೆ ಕೋರ್ಟ್ ನಿರ್ದೇಶನ