ಬೆಂಗಳೂರು: ನಗರದಲ್ಲಿ 7.11 ಕೋಟಿ ದರೋಡೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳು ತಮ್ಮ ಗರ್ಭಿಣಿ ಪತ್ನಿಯರ ಆರೋಗ್ಯ ವಿಚಾರಿಸಲು ಮುಂದಾಗಿ ಪೊಲೀಸರ ಕೈಗೆ ಲಾಕ್ ಆಗಿದ್ದಾರೆ.
ಹಾಡಹಗಲೇ ಏಳು ಕೋಟಿ ದರೋಡೆ ಪ್ರಕರಣದ ಮತ್ತೊಂದು ಇಂಟರೆಸ್ಟಿಂಗ್ ವಿಚಾರ ಗೊತ್ತಾಗಿದೆ. ಏಳು ಕೋಟಿ ದರೋಡೆ ಪ್ರಕರಣದ ಆರೋಪಿಗಳಾದ ರವಿ ಹಾಗೂ ರಾಕೇಶ್‌ನ ಪತ್ನಿಯರು ಗರ್ಭಿಣಿಯರಾಗಿದ್ದರು. ಗರ್ಭಿಣಿ ಪತ್ನಿಯರು ಮನೆಯಲ್ಲಿ ಒಬ್ಬರೇ ಇರ್ತಾರೆ, ಏನ್ ಆಗಿದೆಯೋ ಅಂತ ಆರೋಪಿಗಳು ಭಯದಲ್ಲಿದ್ದರು. ಇಬ್ಬರೂ ತಮ್ಮ ಪತ್ನಿಯರ ಆರೋಗ್ಯ ವಿಚಾರಿಸುವುದಕ್ಕಾಗಿ 10 ಮೊಬೈಲ್ ಖರೀದಿಸಿದ್ದರು. ಆದರೆ, ಹೊಸದಾಗಿ ಸಿಮ್ ತಗೊಂಡ್ರೆ ಸಿಕ್ಕಿಬೀಳ್ತೀವಿ ಅಂತ ಬರೀ ಮೊಬೈಲ್ ಖರೀದಿಸಿ ಸುಮ್ಮನಾಗಿದ್ದರು. ಇದನ್ನೂ ಓದಿ: ಉದ್ಯಮಿ ಮನೋಜ್ ಕಿಡ್ನ್ಯಾಪ್ ಕೇಸ್ – ರೌಡಿ ಶೀಟರ್ ಬೇಕರಿ ರಘು ಅರೆಸ್ಟ್
ಆರೋಪಿಗಳು ಮೊದಲು ಹೊಸೂರಿಗೆ ಹೋಗಿ ಅಲ್ಲಿಂದ ಹೈದರಾಬಾದ್‌ಗೆ ಕ್ಯಾಬ್ ಬುಕ್ ಮಾಡಿದ್ದರು. 10 ಸಾವಿರ ಕೊಟ್ಟು ಕ್ಯಾಬ್ ಬುಕ್ ಮಾಡಿದ್ದರು. ಇದೇ ವೇಳೆ ಕ್ಯಾಬ್ ಚಾಲಕನ ನಂಬರ್‌ನಿಂದ ಹೆಂಡತಿಯರಿಗೆ ಕರೆ ಮಾಡಿ ‘ಆರೋಗ್ಯದ ಕಡೆ ಗಮನ ಕೊಡು, ಹುಷಾರು..’ ಅಂತಾ ಪೋನ್ ಮಾಡಿದ್ದರು. ಅಷ್ಟರಲ್ಲಿ ಪೊಲೀಸರು, ಇಬ್ಬರು ಆರೋಪಿಗಳ ಪತ್ನಿಯರನ್ನು ವಶಕ್ಕೆ ಪಡೆದಿದ್ದರು.
ಕ್ಯಾಬ್ ಚಾಲಕ ಕರೆ ಆಧರಿಸಿ ಆರೋಪಿಗಳ ಬೆನ್ನತ್ತಿ ಹೈದರಾಬಾದ್‌ಗೆ ತೆರಳಿದ್ದ ಪೊಲೀಸರು, ಕೊನೆಗೆ ಹೈದರಾಬಾದ್ ರೈಲ್ವೆ ನಿಲ್ದಾಣದಲ್ಲಿ ಆರೋಪಿಗಳನ್ನು ಸೆರೆಹಿಡಿದಿದರು. ಇದನ್ನೂ ಓದಿ: ಪರಮೇಶ್ವರ್ ಸಿಎಂ ಆದ್ರೆ ನಾನು ಅವರ ಪರ: ರಾಜಣ್ಣ

