ಹುಬ್ಬಳ್ಳಿ: ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಹತ್ಯಾ ಪ್ರಕರಣ ದಿನದಿಂದ ದಿನಕ್ಕೆ ಸಾಕಷ್ಟು ರೋಚಕ ಟ್ವಿಸ್ಟ್‌ಗಳನ್ನು ಪಡೆದುಕೊಳ್ಳುತ್ತಿದೆ. ಪೊಲೀಸರ ವಶದಲ್ಲಿರುವ ಹಂತಕರು ಗಂಟೆಗಂಟೆಗೂ ಗುರೂಜಿ ಕೊಲೆ ಹಿಂದಿನ ಅಸಲಿ ರೋಚಕ ಹಾಗೂ ಭಯಾನಕ ಸತ್ಯಗಳನ್ನು ಬಾಯ್ಬಿಡುತ್ತಿದ್ದು, ಕೊಲೆಗೆ ಕಾರಣವಾಗಿದ್ದ 3 ವಿಚಾರಗಳನ್ನು ಹಂತಕರು ಪೊಲೀಸರ ಮುಂದೆ ತೆರೆದಿಟ್ಟಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
Advertisement
ಮೊದಲನೆಯದಾಗಿ ಚಂದ್ರಶೇಖರ್ ಗುರೂಜಿ ಮಾಡಿದ್ದ ಬೇನಾಮಿ ಆಸ್ತಿಯನ್ನು ಕಾಂಗ್ರೆಸ್ ಮುಖಂಡರೊಬ್ಬರು ಖರೀದಿಸಿದ ವಿಚಾರ ಈಗ ಬೆಳಕಿಗೆ ಬಂದಿದೆ. ಸರ್ವೆ ನಂಬರ್ 166/1 ರಲ್ಲಿ ಇದ್ದ 5 ಎಕರೆ 11 ಗುಂಟೆ ಆಸ್ತಿಯನ್ನು ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಖರೀದಿಸಿದ್ದರು. ಸಿಜಿ ಪರಿವಾರದ ಮಾಜಿ ನೌಕರ ಬಸವರೆಡ್ಡಿ ಹೆಸರಿನಲ್ಲಿದ್ದ ಈ ಆಸ್ತಿಯನ್ನು ತಾನಾಜಿಬಶಿರ್ಕೆ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಖರೀದಿಸಿದ್ದರು. 2016 ರಲ್ಲಿ ಬಸವರೆಡ್ಡಿ ಹೆಸರಲ್ಲಿ ಬೇನಾಮಿ ಆಸ್ತಿಮಾಡಿದ್ದ ಈ ಆಸ್ತಿಯನ್ನು ಮಹಾಂತೇಶ್ ಶಿರೂರ ಜೊತೆಗೂಡಿ ಬಸವರೆಡ್ಡಿ ದೀಪಕ್ ಚಿಂಚೋರೆಗೆ ಮಾರಾಟ ಮಾಡಿದ್ದರು. ಅದರಂತೆಯೇ ದೀಪಕ್ ಚಿಂಚೋರೆಯಿಂದ 50 ಲಕ್ಷ ರೂ. ಮುಂಗಡ ಪಡೆದು, ಆ 50 ಲಕ್ಷ ರೂ.ಯಲ್ಲಿ ಮಹಾಂತೇಶ್ 20 ಲಕ್ಷ ರೂ. ಪಡೆದು, ಉಳಿದ ಹಣದಲ್ಲಿ ಬಸವರೆಡ್ಡಿ ಹಾಗೂ ಮಧ್ಯವರ್ತಿಗೆ ನೀಡಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಒಂದೇ ಆಟೋದಲ್ಲಿ 27 ಮಂದಿ ಪ್ರಯಾಣ- ದಿಗ್ಭ್ರಮೆಗೊಂಡ ಪೊಲೀಸರು
Advertisement
Advertisement
ಇನ್ನುಳಿದ 1 ಕೋಟಿ ರೂ. ನೊಂದಣಿ ಸಮಯದಲ್ಲಿ ನೀಡುವುದಾಗಿ ದೀಪಕ್ ಚಿಂಚೋರೆ ಹೇಳುವ ಮೂಲಕ ಕಮೀಟ್ ಆಗಿದ್ದರು. ಆದರೆ ಈ ವಿಚಾರ ತಿಳಿದ ಗುರೂಜಿ ಜಮೀನು ಖರೀದಿ ಪ್ರಕ್ರಿಯೆಗೆ ಅಡ್ಡಿಪಡಿಸಿದ್ದ ಹಿನ್ನೆಲೆಯಲ್ಲಿ ಇದೇ ವಿಚಾರಕ್ಕೆ ಹಂತಕ ಮಹಾಂತೇಶ್ ಗುರೂಜಿ ಹತ್ಯೆಗೆ ಸ್ಕೆಚ್ ಹಾಕಿದ್ದಾನೆ.
Advertisement
ಆಸ್ತಿ ಮಾರಾಟಕ್ಕೆ ಅಡ್ಡಿ ಪಡಿಸಿದ್ದ ಗುರೂಜಿ ತಮ್ಮ ಅಣ್ಣನ ಮಗ ಸಂತೋಷ್ ಅಂಗಡಿ ಮೂಲಕ ಕೋರ್ಟ್ನಲ್ಲಿ ಸ್ಟೇ ತಂದೊಡ್ಡಿದ್ದರು. ಹೀಗಾಗಿ ಆಸ್ತಿ ಖರೀದಿ ವಿಚಾರದಲ್ಲಿ ಅಡ್ಡಿಯಾಗಿದ್ದರಿಂದ ಇತ್ತ ದೀಪಕ್ ಚಿಂಚೋರೆ ಹಣ ಮರಳಿ ಕೊಡುವಂತೆ ಮಹಾಂತೇಶ್‌ಗೆ ಬೆನ್ನು ಬೀಳಲು ಶುರುಮಾಡಿದ್ದರು. ಆದರೆ ಆಸ್ತಿ ಮಾರಿ ಹಣ ಪಡೆದಿದ್ದ ಮಹಾಂತೇಶ್ ಆ ಹಣವನ್ನು ಸಂಪೂರ್ಣ ಖರ್ಚು ಮಾಡಿಕೊಂಡಿದ್ದ. ಇದರಿಂದ ದೀಪಕ್ ಚಿಂಚೋರೆಗೆ ಹಣ ಮರಳಿಸಲು ಸಾಧ್ಯವಾಗದೇ ಗುರೂಜಿ ಮೇಲೆ ಸಾಕಷ್ಟು ಕ್ರೋಧಗೊಂಡು ಹತ್ಯೆಗೆ ಒಂದೊಂದಾಗಿ ಸ್ಕೆಚ್ ಶುರು ಮಾಡಿದ್ದ. ಇದನ್ನೂ ಓದಿ: ಶೋಭಾ ಕರಂದ್ಲಾಜೆ ನೋಡಲು ನೆರೆ ನೀರಿನಲ್ಲಿ ಈಜಿ ಬಂದ ಜನ
ಚಂದ್ರಶೇಖರ್ ಗುರೂಜಿ ಬೇನಾಮಿಯಾಗಿ ಮಾಡಿದ್ದ ಬಹುತೇಕ ಆಸ್ತಿಗಳನ್ನು ಮರಳಿ ಕೊಡಿಸಿದ್ದ ಮಹಾಂತೇಶ್‌ಗೆ ಗುರೂಜಿ 60 ಲಕ್ಷ ರೂ.ಹಣ ನೀಡುವುದಾಗಿ ಹೇಳಿ, ಆಸ್ತಿ ಮರಳಿ ಕೊಡಿಸಿದ ಬಳಿಕ ಆತನಿಗೆ ಹಣ ನೀಡಲು ನಿರಾಕರಿಸಿದ್ದರು. ಹೀಗಾಗಿ ತನ್ನ ಕೆಲಸ ಮುಗಿಸಿದರೂ ಗುರೂಜಿ ನಂಬಿಕೆ ಉಳಿಸದ ಕಾರಣ ಮಹಾಂತೇಶ್ ಗುರೂಜಿ ಹತ್ಯೆಗೆ ಪ್ಲಾನ್ ಮೇಲೆ ಪ್ಲಾನ್ ಮಾಡಿಕೊಂಡು, ಹತ್ಯೆ ನಡೆಸಿರುವುದಾಗಿ ಕೊಲೆಯ ಹಿಂದಿನ ಅಸಲಿ ಕಹಾನಿಯನ್ನು ಹಂತಕರು ಬಿಚ್ಚಿಟ್ಟಿದ್ದಾರೆ.