‘ಜೊತೆ ಜೊತೆಯಲಿ’ ಸೀರಿಯಲ್ ಮತ್ತೊಂದು ಟ್ವಿಸ್ಟ್ : ಆರ್ಯವರ್ಧನ್ ಕೊಲ್ಲಿಸೋಕೆ ಅನುನೇ ಕೊಟ್ಳು ಸುಪಾರಿ

Public TV
2 Min Read
jote joteyali serial 3

ಟ ಅನಿರುದ್ಧ(Aniruddha)  ಜೊತೆ ಜೊತೆಯಲಿ (Jothe Jotheyali) ಸೀರಿಯಲ್ ನಿಂದ ಆಚೆ ಬರುತ್ತಿದ್ದಂತೆಯೇ ಏನೆಲ್ಲ ಬೆಳವಣಿಗೆಗಳು ಕಥೆಯಲ್ಲಿ ಆಗುತ್ತಿವೆ. ವಾರಕ್ಕೊಂದು ತಿರುವು ಕೊಡುವುದರ ಮೂಲಕ ಪ್ರೇಕ್ಷಕರನ್ನು ಕಟ್ಟಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ನಿರ್ದೇಶಕರು. ಮೊನ್ನೆಯಷ್ಟೇ ಆರ್ಯವರ್ಧನ್ ಪಾತ್ರಕ್ಕೆ ಕಾರು ಅಪಘಾತ ಮಾಡಿಸಿದ್ದರು. ಈಗಷ್ಟೇ ಎಂಟ್ರಿ ಕೊಟ್ಟಿರುವ ಹರೀಶ್ ರಾಜ್ ಪಾತ್ರವನ್ನು ಸಾಯಿಸೇ ಬಿಟ್ಟರು. ಇದೀಗ ಕಥಾ ನಾಯಕಿ ಅನು ಮೇಲೆ ಗುರುತರ ಆರೋಪವೊಂದನ್ನು ಹೊರಿಸಿದ್ದಾರೆ.

FotoJet 57

ಆರ್ಯವರ್ಧನ್ ಕಾರು ಆಕ್ಸಿಡೆಂಟ್ ಮಾಡಿಕೊಂಡು ಮುಖ ಗುರುತೇ ಸಿಗದಷ್ಟು ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದ್ದರು. ಅದೇ ಆಸ್ಪತ್ರೆಗೆ ಹರೀಶ್ ರಾಜ್ (Harish Raj) ನಿರ್ವಹಿಸುವ ಪಾತ್ರವು ಆತ್ಮಹತ್ಯೆ ಮಾಡಿಕೊಂಡ ಬಾಡಿ ಕೂಡ ಬಂದಿತ್ತು. ಈಗ ಆರ್ಯವರ್ಧನ್ ಫೇಸ್ ಗೆ ಹರೀಶ್ ರಾಜ್ ಫೇಸ್ ಸೇರಿಸಿ ಹೊಸ ಆರ್ಯವರ್ಧನ್ ಸೃಷ್ಟಿ ಆಗಿದ್ದಾನೆ. ಹರೀಶ್ ರಾಜ್ ಪಾತ್ರಕ್ಕೆ ಬೆಂಕಿ ಇಡಲಾಗಿದೆ. ಅದೇ ಸಮಯದಲ್ಲೇ ಮತ್ತೊಂದು ಮೆಗಾ ಟ್ವಿಸ್ಟ್ ಕೊಡಲಾಗಿದೆ. ಇದನ್ನೂ ಓದಿ:‘ಥ್ಯಾಂಕ್ ಗಾಡ್’ ಚಿತ್ರದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ: ನಟ ಅಜಯ್ ದೇವಗನ್ ವಿರುದ್ಧ ದೂರು ದಾಖಲು

jote joteyali serial 2 1

ಗಂಡನನ್ನು ಅತಿಯಾಗಿ ಪ್ರೀತಿಸುತ್ತಿದ್ದ ಅನು (Anu) , ಹೆಂಡತಿ ಕಂಡರೇ ಅಷ್ಟೇ ಗೌರವ ಕೊಡುತ್ತಿದ್ದ ಆರ್ಯವರ್ಧನ್ ಪಾತ್ರದ ಮಧ್ಯ ಕಂದಕ ಸೃಷ್ಟಿ ಮಾಡಿದ್ದು, ಆರ್ಯವರ್ಧನ್ ಅಪಘಾತಕ್ಕೆ ಅನುನೆ ಕಾರಣವೆಂದು ಕಥೆ ಬರೆದುಕೊಳ್ಳಲಾಗಿದೆ. ಆರ್ಯವರ್ಧನ್ ಕೊಲೆ (Murder) ಮಾಡಲು ಅನು ಸಂಚು ರೂಪಿಸಿದ್ದರು ಎನ್ನುವ ಕಾರಣಕ್ಕಾಗಿ ಪೊಲೀಸರು (Police) ಅನುವನ್ನು ಬಂಧಿಸಿ ಸ್ಟೇಶನ್ ಗೆ ಕರೆದುಕೊಂಡು ಹೋಗಿದ್ದಾರೆ. ಸ್ಮಶಾನದಿಂದಲೇ ಅನುನನ್ನು ಕರೆದುಕೊಂಡು ಹೋಗಲಾಗಿದೆ.

jote joteyali serial 1

ಅನು ಮತ್ತು ಆರ್ಯವರ್ಧನ್ ಪಾತ್ರಗಳ ಸುತ್ತ ಮತ್ತೊಂದು ಸುತ್ತಿನ ಸಮರ ನಡೆಯಲಿದ್ದು, ಆರ್ಯವರ್ಧನ್ (Aryavardhan) ಕೊಲೆಯ ಸುತ್ತ ಹಲವು ಅನುಮಾನಗಳನ್ನು ಕ್ರಿಯೇಟ್ ಮಾಡಿ, ಪಾತ್ರಕ್ಕಿಂತಲೂ ಕಥೆಯೇ ಮುಖ್ಯ ಎಂದು ಸಾರುವಂತಹ ಪ್ರಯತ್ನಗಳನ್ನು ಜೊತೆ ಜೊತೆಯಲಿ ಸೀರಿಯಲ್ (Serial) ತಂಡ ಮಾಡುತ್ತಿದ್ದೆ. ಅದಕ್ಕಾಗಿಯೇ ಕಥೆಯಲ್ಲಿ ವೇಗ ಮತ್ತು ಅಚ್ಚರಿ ಮೂಡಿಸುವಂತಹ ತಿರುವುಗಳನ್ನು ನೀಡಲಾಗುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *