ರಾಯಚೂರಿನಲ್ಲಿ ಇಂದೇ ಮತ್ತೊಂದು ದುರಂತ: ಕ್ರೂಸರ್ ಪಲ್ಟಿಯಾಗಿ ಐವರ ದುರ್ಮರಣ

Public TV
1 Min Read
rcr accident

ರಾಯಚೂರು: ಸಿಂಧನೂರು ತಾಲೂಕಿನ ದಡೆಸುಗೂರು ಬಳಿ ಲಾರಿ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ಐದು ಜನ ಮೃತಪಟ್ಟ ಘಟನೆಯ ಬೆನ್ನಲ್ಲೇ ಇದೀಗ ಮತ್ತೊಂದು ಅಪಘಾತ ನಡೆದಿದೆ.

RCR ACCIDENT DEATH 6

ರಾಯಚೂರಿನ ದೇವದುರ್ಗ ತಾಲೂಕಿನ ಪಿಲಗುಂಡ ಬಳಿ ಕ್ರೂಸರ್ ವಾಹನ ಪಲ್ಟಿಯಾಗಿ ಐದು ಜನ ಸಾವನ್ನಪ್ಪಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅರಕೇರಾ ಸರ್ಕಾರಿ ಆಸ್ಪತ್ರೆ ಹಾಗೂ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಗಾಯಾಳುಗಳನ್ನ ದಾಖಲಿಸಲಾಗಿದೆ.

ಮೃತರನ್ನು ಬಸವರಾಜ,(35) , ಪಾಂಡುರಂಗ (13), ಮುತ್ತಣ್ಣ (35) ಹಾಗೂ ಅಯ್ಯಣ್ಣ(34) ಎಂದು ಗುರುತಿಸಲಾಗಿದ್ದು, ಇನ್ನೋರ್ವನ ಗುರುತು ಪತ್ತೆಯಾಗಿಲ್ಲ.

ಇದನ್ನೂ ಓದಿ: ಲಾರಿ-ಕಾರು ಮುಖಾಮುಖಿ ಡಿಕ್ಕಿ: ಒಂದೇ ಕುಟುಂಬದ ಐವರ ದುರ್ಮರಣ

RCR ACCIDENT DEATH 1

ಮೃತರೆಲ್ಲಾ ದೇವದುರ್ಗ ತಾಲೂಕಿನ ಅರಕೇರಾ ಹಾಗೂ ಪಿಲಗುಂಡಾ ಗ್ರಾಮದವರಾಗಿದ್ದಾರೆ. ದೇವದುರ್ಗದಿಂದ ಸಿರವಾರ ಕಡೆಗೆ ಪ್ರಯಾಣಿಕರನ್ನ ಕರೆದ್ಯೊಯ್ಯುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.

RCR ACCIDENT DEATH 4

ಘಟನೆ ಕುರಿತು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಎರಡು ಅಪಘಾತಗಳಿಂದ ಒಟ್ಟು 10 ಜನ ಸಾವನ್ನಪ್ಪಿದ್ದಾರೆ.

RCR ACCIDENT DEATH 5

Share This Article
Leave a Comment

Leave a Reply

Your email address will not be published. Required fields are marked *