ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯ ಮೈತ್ರಿ ಸರ್ಕಾರಕ್ಕೆ ಮತ್ತೊಂದು ಸಂಕಟ ಎದುರಾಗಿದ್ದು, ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದಾರೆ.
ಸರ್ಕಾರ ವಿದ್ಯಾರ್ಥಿಗಳಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಆದ್ದರಿಂದ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶಗೊಂಡು ಬಂದ್‍ಗೆ ಕರೆ ಕೊಟ್ಟಿದ್ದಾರೆ. ಜುಲೈ 21ರಂದು ಸ್ವಯಂಪ್ರೇರಿತ ಶಾಲಾ-ಕಾಲೇಜು ಬಂದ್‍ಗೆ ಕರೆ ನೀಡಿವೆ. ಜೊತೆಗೆ ಎರಡು ಪ್ರಮುಖ ಬೇಡಿಕೆಗಳನ್ನ ಇಟ್ಟುಕೊಂಡು ಬಂದ್ ಗೆ ಕರೆ ನೀಡಿವೆ.
Advertisement
Advertisement
ಮೊದಲನೆಯದು ಕೊಟ್ಟ ಮಾತಿನಂತೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು. ಎರಡನೆಯದು ಈಗಾಗಲೇ ಪಾಸ್ ಖರೀದಿಸಿರುವ ವಿದ್ಯಾರ್ಥಿಗಳಿಗೆ ಹಣ ಹಿಂತಿರುಗಿಸಬೇಕು. ಈ ಎರಡು ಬೇಡಿಕೆಯನ್ನು ಈಡೇರಿಸುವಂತೆ ವಿದ್ಯಾರ್ಥಿಗಳು ಸರ್ಕಾರಕ್ಕೆ ಒತ್ತಾಯ ಮಾಡಲಿದ್ದಾರೆ.
Advertisement
ಈ ಹಿಂದೆ ಬಜೆಟಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಕೊಡುವುದಾಗಿ ಹೇಳಿದ್ದರು. ಈ ಕುರಿತು ಬಜೆಟ್ ಸದನದಲ್ಲಿ ಒಪ್ಪಿಗೆಯೂ ಸೂಚಿಸಿತ್ತು. ಆದರೆ ಈಗ ಸಾರಿಗೆ ಇಲಾಖೆಗೆ ಆರ್ಥಿಕ ನಷ್ಟವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಉಚಿತ್ ಬಸ್ ಪಾಸನ್ನು ಕೊಡುವುದಿಲ್ಲ ಎಂದು ಡಿ.ಸಿ. ತಮ್ಮಣ್ಣ ಸ್ಪಷ್ಟನೆ ನೀಡಿದ್ದರು. ಇವರ ನಿರ್ಧಾರದಿಂದ ವಿದ್ಯಾರ್ಥಿಗಳು ಆಕ್ರೋಶಗೊಂಡು ಬಂಸ್ ಗೆ ಕರೆ ಕೊಟ್ಟಿದ್ದಾರೆ.
Advertisement