ಬೆಂಗಳೂರು: 2015ರಲ್ಲಿ ವಿಜ್ಞಾನಿ ಅನಂತ್‌ದಾಸ್ ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದ ಬಾಂಗ್ಲಾದೇಶದ ಶಂಕಿತ ಉಗ್ರನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ಬಂಧನಕ್ಕೊಳಗಾಗಿರುವ ಶಂಕಿತ ಉಗ್ರನನ್ನು ಫೈಜಲ್ ಎಂದು ಗುರುತಿಸಲಾಗಿದೆ. ಮೂಲತಃ ಬಾಂಗ್ಲಾದೇಶದವನಾಗಿದ್ದ ಫೈಜಲ್ ಕೋಲ್ಕತ್ತಾ ಮೂಲಕ ಬೆಂಗಳೂರಿಗೆ ಬಂದಿದ್ದನು. ಬಾಂಗ್ಲಾದೇಶದ ಪೊಲೀಸರ ಮಾಹಿತಿ ಮೇರೆಗೆ ತನಿಖೆ ಶುರು ಮಾಡಿದ್ದ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ವಾಸ್ತುಗುರೂಜಿ ಕೊಲೆ ಬಗ್ಗೆ ಹಂತಕರ ತಪ್ಪೊಪ್ಪಿಗೆ – ಸಂಧಾನ ನೆಪದಲ್ಲಿ ದಾಖಲೆ ಜೊತೆ ಚಾಕು ತಂದು ಹತ್ಯೆ
Advertisement
Advertisement
ಫೈಜಲ್ ಮೊಬೈಲ್ ನಂಬರ್ ಅನ್ನು ಟ್ರೇಸ್ ಮಾಡುತ್ತಿದ್ದ ಪೊಲೀಸರು, ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿರುವುದಾಗಿ ಮಾಹಿತಿ ಪಡೆದುಕೊಂಡಿದ್ದರು. ಈ ನಡುವೆ ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಫೈಜಲ್‌ನನ್ನು ಜುಲೈ 1ರಂದು ಬೆಂಗಳೂರಿನ ಬೊಮ್ಮನಹಳ್ಳಿ ಬಳಿಯಲ್ಲಿ ಬಂಧಿಸಿದ್ದಾರೆ. ಜುಲೈ 03 ರಂದು ಬೆಂಗಳೂರಿನಿಂದ ಕೋಲ್ಕತ್ತಾಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಸಿದ್ದರಾಮೋತ್ಸವ ಮುಗೀತಿದ್ದಂತೆ ಕಾಂಗ್ರೆಸ್ ಇಬ್ಭಾಗ- ಈಶ್ವರಪ್ಪ ಭವಿಷ್ಯ
Advertisement
Advertisement
2015 ರಲ್ಲಿ ವಿಜ್ಞಾನಿ ಅನಂತ್ ದಾಸ್ ಎಂಬವರ ಹತ್ಯೆ ಮಾಡಿ ಫೈಜಲ್ ಅನೇಕ ವರ್ಷಗಳಿಂದ ತಲೆ ಮರೆಸಿಕೊಂಡಿದ್ದ. ಈತನಿಗೆ ಉಗ್ರ ಸಂಘಟನೆ ಅಲ್ ಖೈದಾ ಜೊತೆಗೆ ಸಂಪರ್ಕ ಇರೋದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಆಧಾರ್ ಕಾರ್ಡ್, ವೋಟರ್ ಐಡಿ ಎಲ್ಲವನ್ನೂ ಪಡೆದುಕೊಂಡಿದ್ದ ಫೈಜಲ್ ಸ್ಲೀಪರ್‌ಸೆಲ್ ಗಳ ಜೊತೆ ಸಂಪರ್ಕ ಹೊಂದಿರುವುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.