ಬೆಂಗಳೂರು: ನಟ ದುನಿಯಾ ವಿಜಯ್‍ಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದ್ದು, ಈಗ ಸ್ಟೇಷನ್ ಮೆಟ್ಟಿಲು ಹತ್ತಿ ಹೈರಾಣಾಗಿದ್ದ ವಿಜಿಗೆ ಪೊಲೀಸರು ಮತ್ತೊಂದು ಶಾಕ್ ಕೊಟ್ಟಿದ್ದಾರೆ.
ನಿರ್ಮಾಪಕ ಸುಂದರ್ ಗೌಡನನ್ನ ಪರಾರಿ ಮಾಡಿಸಿದ ಪ್ರಕರಣದಲ್ಲಿ ದುನಿಯಾ ವಿಜಯ್ ಮೇಲೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಸಿಕೆ ಅಚ್ಚುಕಟ್ಟು ಪೊಲೀಸರಿಂದ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಚಾರ್ಜ್ ಶೀಟ್ ನ ಎಕ್ಸ್ ಕ್ಲೂಸಿವ್ ಕಾಪಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ಏನಿದು ಕೇಸ್?
ಸುಂದರ್ ಗೌಡ ಮಾಸ್ತಿಗುಡಿ ಚಿತ್ರೀಕರಣದ ವೇಳೆ ಖಳನಟರ ಸಾವಿನ ಕೇಸ್ ನಲ್ಲಿ ಕೋರ್ಟ್ ಗೆ ಹಾಜರಾಗಿರಲಿಲ್ಲ. ಬಳಿಕ ರಾಮನಗರ ನ್ಯಾಯಾಲಯದಿಂದ ಸುಂದರ್ ಪಿ ಗೌಡನ ಮೇಲೆ ಅರೆಸ್ಟ್ ವಾರೆಂಟ್ ಜಾರಿಯಾಗಿತ್ತು. ಹೀಗಾಗಿ ಸುಂದರ್ ಗೌಡನನ್ನು ಅರೆಸ್ಟ್ ಮಾಡಲು ಮೇ ತಿಂಗಳಲ್ಲಿ ಸಿಕೆ ಅಚ್ಚುಕಟ್ಟುವಿನಲ್ಲಿರುವ ಮನೆಗೆ ತಾವರೆಕೆರೆ ಪೊಲೀಸರು ಅರೆಸ್ಟ್ ವಾರೆಂಟ್ ತಂದಿದ್ದರು. ಈ ವೇಳೆ ಅಲ್ಲೇ ಇದ್ದ ದುನಿಯಾ ವಿಜಿ ಪೊಲೀಸರ ಮೇಲೆ ದಬ್ಬಾಳಿಕೆ ಮಾಡಿದ್ದರು.
Advertisement
ರಾತ್ರಿ ವೇಳೆ ದಬ್ಬಾಳಿಕೆ ಮಾಡುತ್ತೀರಾ, ನಿಮ್ಮ ಮೇಲೆ ಕೇಸ್ ಹಾಕುತ್ತೇನೆ ಅಂತ ಅವಾಜ್ ಹಾಕಿದ್ದರು. ಅಲ್ಲದೇ ಸುಂದರ್ ಪಿ ಗೌಡನನ್ನ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದರು. ಈ ಬಗ್ಗೆ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ತಾವರೆಕೆರೆ ಪೊಲೀಸ್ ಠಾಣೆಯ ಎಚ್‍ಸಿ ಗೋವಿಂದರಾಜು ದೂರು ದಾಖಲಿಸಿದ್ದರು. ಕೋರ್ಟ್ ಆದೇಶವನ್ನ ಉಲ್ಲಂಘಿಸಿ, ಸರ್ಕಾರಿ ಕೆಲಸಕ್ಕೆ ತಡೆಯೊಡ್ಡಿದ ಆರೋಪದ ಮೇಲೆ ದೂರು ದಾಖಲಾಗಿತ್ತು.
Advertisement
ದೂರು ದಾಖಲಾಗುತ್ತಿದ್ದಂತೆ ದುನಿಯಾ ವಿಜಿ ಪರಾರಿಯಾಗಿದ್ದರು. ಬಳಿಕ ಎಸ್‍ಐ ವಿನಯ್ ಅವರು ಬಂಡೀಪುರ ಟೈಗರ್ ರೆಸಾರ್ಟ್ ನಲ್ಲಿ ವಿಜಿಯನ್ನು ಪತ್ತೆ ಮಾಡಿದ್ದರು. ಕೂಡಲೇ ಸಿಕೆ ಅಚ್ಚುಕಟ್ಟು ಪೊಲೀಸರು ವಿಜಿಯನ್ನ ಬಂಡೀಪುರದಿಂದ ಕರೆತಂದು ಅರೆಸ್ಟ್ ಮಾಡಿದ್ದರು. ಬಳಿಕ ದುನಿಯಾ ವಿಜಿ ಅವರು ಕೋರ್ಟ್ ನಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡಿದ್ದರು.
ಪೊಲೀಸರು ಈಗ ದುನಿಯಾ ವಿಜಯ್ ಮೇಲೆ 65 ಪುಟಗಳ ಚಾರ್ಜ್ ಶೀಟ್ ಸಿದ್ಧಪಡಿಸಿ ಎರಡನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಸಂಬಂಧ 9 ಮಂದಿಯನ್ನ ಸಾಕ್ಷಿಯನ್ನಾಗಿ ಪರಿಗಣಿಸಿ ಹೇಳಿಕೆ ಪಡೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv