ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ (B.S.Yediyurappa) ರಾಜ್ಯ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. ಕೋವಿಡ್ ಬಳಿಕ ಕೆಕೆಆರ್‌ಡಿಬಿ ಅಕ್ರಮದ ಕುರಿತು ತನಿಖೆಗೆ ಸರ್ಕಾರ ತಂಡ ರಚಿಸಿದೆ.
ಕೋವಿಡ್ ಹಗರಣದ ತನಿಖೆಗೆ ಬಳಿಕ ಯಡಿಯೂರಪ್ಪ ವಿರುದ್ಧ ಮತ್ತೊಂದು ಹಗರಣದ ತನಿಖೆಗೆ ಸರ್ಕಾರ ಸಮಿತಿ ರಚನೆ ಮಾಡಿದೆ. ಕಲ್ಯಾಣ-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ಅಕ್ರಮದ ಕುರಿತು ತನಿಖೆಗೆ ಆದೇಶ ಹೊರಡಿಸಿದೆ. 300 ಕೋಟಿ ಅನುದಾನ ಅಕ್ರಮ ಆಗಿದೆ ಎಂದು ತನಿಖೆಗೆ ಸರ್ಕಾರ ಸಮಿತಿ ರಚನೆ ಮಾಡಿದೆ. ಇದನ್ನೂ ಓದಿ: 50-50 ಸೈಟ್ ಪಡೆದವರ ಮತ್ತೊಂದು ಪಟ್ಟಿ ಲಭ್ಯ – 125 ಜನರಿಗೆ ಬರೋಬ್ಬರಿ 928 ಸೈಟ್ ಹಂಚಿಕೆ
Advertisement
Advertisement
2020-2023ರ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ ರಚನೆ ಮಾಡಲಾಗಿತ್ತು. ಈ ಅವಧಿಯಲ್ಲಿ ದತ್ತಾತ್ರೇಯ ಪಾಟೀಲ್ ರೇವೂರ್ ಅಧ್ಯಕ್ಷರಾಗಿದ್ದರು. ಆಗ ಯಡಿಯೂರಪ್ಪ ಅವರು ಸಿಎಂ ಆಗಿದ್ದರು. ಪ್ರತಿ ವರ್ಷ 100 ಕೋಟಿಯಂತೆ 300 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು.
Advertisement
ಈ ಅನುದಾನದಲ್ಲಿ ದುರ್ಬಳಕೆ ಆಗಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಸಮಿತಿ ರಚನೆ ಮಾಡಿದೆ. ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್ – ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ
Advertisement
ಆರೋಪ ಏನು?
* ಯಡಿಯೂರಪ್ಪ ಸಿಎಂ ಆಗಿದ್ದಾಗ 2020-2023 ರಲ್ಲಿ ಕೆಕೆಆರ್‌ಡಿಬಿಗೆ 300 ಕೋಟಿ ಅನುದಾನ ಬಿಡುಗಡೆ ಆಗಿತ್ತು.
* ಈ ಅನುದಾನ ವೆಚ್ಚ ಮಾಡುವಲ್ಲಿ ವ್ಯಾಪಕ ಅಕ್ರಮ ಆಗಿದೆ ಅನ್ನೋ ಆರೋಪ.
* ಈಗ ಅಕ್ರಮದ ತನಿಖೆ ನಡೆಸಲು ನಿವೃತ್ತ ಐಎಎಸ್ ಸುಧೀರ್ ಕುಮಾರ್ ನೇತೃತ್ವದಲ್ಲಿ ಸಮಿತಿ ರಚನೆ.
* ಕೋವಿಡ್ ಅವಧಿಯಲ್ಲಿ ಮೃತಪಟ್ಟ ಶಿಕ್ಷಕರ ಕುಟುಂಬಕ್ಕೆ ಪರಿಹಾರ ನೀಡಿಕೆ. ದೇಶಿ ಹಸು ಸಾಕಣೆಗೆ ಪ್ರೋತ್ಸಾಹ ಧನ ವಿತರಣೆ. 1 ಕೋಟಿ ಸಸಿ ನೆಟ್ಟಿರುವ ಬಗ್ಗೆಯೂ ತನಿಖೆ.