ಬೆಂಗಳೂರು: ನಮ್ಮ ಮೆಟ್ರೋ (Namma Metro) ದರ ಏರಿಕೆಯಾದ ಬೆನ್ನಲ್ಲೇ ಈಗ ಕಾವೇರಿ ನೀರಿನ (Cauvery Water) ದರವೂ ಏರಿಕೆಯಾಗಲಿದೆ.
ಶೀಘ್ರವೇ 3% ನೀರಿನ ದರ ಏರಿಕೆಯಾಗುವ ಸಾಧ್ಯತೆಯಿದೆ. ಪ್ರತಿ ವರ್ಷ ನೀರಿನ ದರ ಏರಿಕೆ ಆಗಬೇಕು ಎಂದು ಆಡಳಿತ ಸುಧಾರಣಾ ಸಮಿತಿ ಶಿಫರಾಸ್ಸು ಮಾಡಿತ್ತು. ಇದನ್ನೂ ಓದಿ: ಮೆಟ್ರೋ ಪ್ರಯಾಣ ದರ 5% ಏರಿಕೆ – ಫೆ.9 ರಿಂದ ಜಾರಿ
ಕಳೆದ ವರ್ಷದ ಏಪ್ರಿಲ್‌ನಲ್ಲಿ ಗೃಹ ಬಳಕೆದಾರರಿಗೆ ಪ್ರತಿ ಲೀಟರ್ ಗೆ ಕನಿಷ್ಠ 0.15 ಪೈಸೆ ಗರಿಷ್ಠ 1 ಪೈಸೆ ಹೆಚ್ಚಳ ಮಾಡಿದ್ದರೆ ವಾಣಿಜ್ಯ ಬಳಕೆಗೆ ಪ್ರತಿ ಲೀಟರ್ ಗರಿಷ್ಠ 1.90 ಪೈಸೆಯವರೆಗೆ ಏರಿಕೆ ಮಾಡಲಾಗಿತ್ತು.

