ನವದೆಹಲಿ: ದೆಹಲಿ (Delhi) ಸರ್ಕಾರದ ಸಚಿವ ರಾಜ್ ಕುಮಾರ್ ಆನಂದ್ (Rajkumar Anand) ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಿವಿಲ್ ಲೈನ್ಸ್ ಪ್ರದೇಶದಲ್ಲಿನ ಸಚಿವರ ನಿವಾಸ ಸೇರಿದಂತೆ 9 ಸ್ಥಳಗಳಲ್ಲಿ ಇಡಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದೆ.
ಹೊಸ ಅಬಕಾರಿ ನೀತಿ ಯೋಜನೆಯಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಆರೋಪಿಸಿರುವ ಇಡಿ ಆಪ್ (AAP) ಪಕ್ಷದ ಅನೇಕ ನಾಯಕರ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ಇತ್ತೀಚೆಗೆ ಸಂಸದ ಸಂಜಯ್ ಸಿಂಗ್ ನಿವಾಸದ ಮೇಲೆ ದಾಳಿ ನಡೆಸಿ ಬಳಿಕ ಅವರನ್ನು ಬಂಧಿಸಿತ್ತು.
ಆಮದು ಮಾಡಿಕೊಳ್ಳುವಲ್ಲಿ ಸುಳ್ಳು ಘೋಷಣೆಗಳ ಆರೋಪದ ಮೇಲೆ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (DRI) ಸಲ್ಲಿಸಿದ ಚಾರ್ಜ್ ಶೀಟ್ ಕಾರಣ ರಾಜ್ ಕುಮಾರ್ ಆನಂದ್ ಅವರ ಆವರಣದ ಮೇಲೆ ದಾಳಿಗಳು ನಡೆದಿವೆ. 7 ಕೋಟಿ ರೂ.ಗೂ ಅಧಿಕ ಹಣ ಅಂತಾರಾಷ್ಟ್ರೀಯ ಹವಾಲಾ ವಹಿವಾಟುಗಳ ಮೂಲಕ ನಡೆಸಲಾಗಿದೆ ಎಂದು ರಾಜ್ ಕುಮಾರ್ ಆನಂದ್ ವಿರುದ್ಧ ಅನುಮಾನಿಸಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಶುರುವಾಯ್ತು ವಾಯು ಸಂಕಟ
ಪಟೇಲ್ ನಗರದ ಶಾಸಕರಾಗಿರುವ 57 ವರ್ಷದ ರಾಜ್ ಕುಮಾರ್ ಆನಂದ್ ಕಾರ್ಮಿಕ ಸಚಿವರಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ರಾಜೀನಾಮೆ ನೀಡಿದ ನಂತರ ಶಿಕ್ಷಣ ಮತ್ತು ಆರೋಗ್ಯ ಸಚಿವಾಲಯಗಳನ್ನು ಹಂಚಲಾಯಿತು. ನಂತರ ಸೌರಭ್ ಭಾರದ್ವಾಜ್‌ಗೆ ಆರೋಗ್ಯ, ಅತಿಶಿಗೆ ಶಿಕ್ಷಣ ಇಲಾಖೆಗಳನ್ನು ನೀಡಲಾಯಿತು. ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟದಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ: ನಿತೀಶ್ ಕುಮಾರ್ ಬೇಸರ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]