ಮೈಸೂರು: ಮುಡಾದ ಇನ್ನೊಂದು ಮಹಾ ಗೋಲ್ಮಾಲ್ ಪ್ರಕರಣ (MUDA Case) 8 ತಿಂಗಳ ನಂತರ ಬೆಳಕಿಗೆ ಬಂದಿದೆ. ಜನರು ವಿವಿಧ ಸೇವೆಗಳಿಗಾಗಿ ಪ್ರಾಧಿಕಾರಕ್ಕೆ ಕಟ್ಟಿದ ಹಣವನ್ನ ಮುಡಾ ನೌಕರರು ಮತ್ತು ಬ್ಯಾಂಕ್‌ನ ಕೆಲ ನೌಕರರ ಜೇಬು ಸೇರಿದೆ. ಹೀಗೆ ಜೇಬು ಸೇರಿದ ಹಣದ ಪ್ರಮಾಣ ಕೋಟಿ ಮುಟ್ಟುತ್ತಿದೆ.
Advertisement
ಹೌದು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ತನ್ನ ವಿವಿಧ ಸೇವೆಗಳನ್ನು ನೀಡಲು ಹಣ ನಿಗದಿ ಮಾಡಿದೆ. ಇದಕ್ಕಾಗಿ ಬ್ಯಾಂಕ್ ಆಫ್ ಬರೋಡಾದಲ್ಲಿ ಪ್ರಾಧಿಕಾರದ ಬ್ಯಾಂಕ್ ಖಾತೆ (Bank Account) ಇದೆ. ಜನರು ಅಲ್ಲಿ ಹಣ ಕಟ್ಟಿ ಚಲನ್ ಪಡೆದು ಅದನ್ನು ಪ್ರಾಧಿಕಾರದ ಸಂಬಂಧಪಟ್ಟ ಶಾಖೆಗೆ ನೀಡಿದರೆ ಅವರಿಗೆ ಆ ಸೇವೆ ನೀಡಲಾಗುತ್ತದೆ. ಇದನ್ನೂ ಓದಿ: ಹಳಿಯಲ್ಲಿದ್ದ ಕಸ ತೆರವುಗೊಳಿಸುತ್ತಿದ್ದ ವೇಳೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ – ನಾಲ್ವರು ಗುತ್ತಿಗೆ ಕಾರ್ಮಿಕರ ದುರ್ಮರಣ
Advertisement
ಕಳೆದ ವರ್ಷ ಹೀಗೆ ಚಲನ್ ಕಟ್ಟಿ ಸೇವೆ ಪಡೆದ ಒಟ್ಟು 93 ಜನರ ಹಣ ಪ್ರಾಧಿಕಾರಕ್ಕೆ ಬಂದಿಲ್ಲ. ಇದರ ಮೊತ್ತ 1 ಕೋಟಿ ರು. ಇದೆ. ಹೀಗಾಗಿ ಪ್ರಾಧಿಕಾರದ ಹಣಕಾಸು ಶಾಖೆ ಅವರು ಬ್ಯಾಂಕ್ ಬರೋಡಾದ ವ್ಯವಸ್ಥಾಪಕರಿಗೆ ಪತ್ರ ಬರೆದು 93 ಜನರು ಕಟ್ಟಿರುವ ಹಣ ನಮಗೆ ಡೆಪಾಸಿಟ್ ಮಾಡಿ ಎಂದು ಕೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರು ಹೊರವಲಯದ ಹೆಮ್ಮಿಗೆಪುರದಲ್ಲಿ ಸ್ಕೈಡೆಕ್ ನಿರ್ಮಾಣಕ್ಕೆ ಜಾಗ ಅಂತಿಮ
Advertisement
Advertisement
ಈ ಪತ್ರಕ್ಕೆ ಬ್ಯಾಂಕ್ ಬರೋಡಾ ವ್ಯವಸ್ಥಾಪಕರು ಉತ್ತರ ನೀಡಿ ನೀವು ಕೇಳಿರುವ 93 ಜನರ ಹಣ ಬ್ಯಾಂಕ್‌ಗೆ ಸಂದಾಯವೇ ಆಗಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ. ಅಲ್ಲಿಗೆ ಬ್ಯಾಂಕ್ ಚಲನ್ ಹಾಗೂ ಬ್ಯಾಂಕ್ ಸ್ಹೀಲ್ ಎರಡು ನಕಲಿ ಮಾಡಿಕೊಂಡು ಹಣ ವಂಚಿಸಿರುವುದು ಗೊತ್ತಾಗಿದೆ. ಬ್ಯಾಂಕ್‌ನ ಕೆಲ ಸಿಬ್ಬಂದಿ ಹಾಗೂ ಮೂಡಾ ಕೆಲ ನೌಕರರು ಸೇರಿ ಗ್ರಾಹಕರಿಂದ ಹಣ ಪಡೆದು ಅವರಿಗೆ ನಕಲಿ ಸ್ಹೀಲ್ ಹಾಕಿರುವ ಚಲನ್ ಕೊಟ್ಟು ನಿರ್ದಿಷ್ಟ ಸೇವೆಯನ್ನು ಗ್ರಾಹಕನಿಗೆ ನೀಡದೇ ಮೂಡಾ ಸೇರಬೇಕಾದ ಹಣವನ್ನು ತಮ್ಮ ಜೇಬಿಗೆ ಇಳಿಸಿದ್ದಾರೆ. ಇದನ್ನೂ ಓದಿ: ಸಿಗರೇಟ್‌ನಿಂದ ಸುಟ್ಟು ಚಿತ್ರಹಿಂಸೆ; ಅಪ್ರಾಪ್ತೆ ಕೊಂದು, ಶೌಚಾಲದಲ್ಲಿ ಶವ ಇಟ್ಟು ಗಂಡ-ಹೆಂಡ್ತಿ ಎಸ್ಕೇಪ್