ಬೆಂಗಳೂರು: ಭಾರತೀಯ ಚಲನ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನು ಬರೆಯಲು ಸಿದ್ಧವಾಗಿರುವ ರಾಕಿಂಗ್ ಸ್ಟಾರ್ ಅಭಿನಯದ ‘ಕೆಜಿಎಫ್’ ಸಿನಿಮಾ ಈಗ ಭಾರತೀಯ ಅತ್ಯಂತ ನಿರೀಕ್ಷಿತ ಚಲನಚಿತ್ರಗಳಲ್ಲಿ ನಂಬರ್ ಓನ್ ಸ್ಥಾನ ಪಡೆದಿದೆ.
ಖ್ಯಾತ ಸಿನಿಮಾ ಡೇಟಾಬೇಸ್ ವೆಬ್‍ಸೈಟ್ ಇಂಟರ್ ನೆಟ್ ಮೂವಿ ಡೇಟಾ ಬೇಸ್(ಐಎಂಡಿಬಿ) ಟಾಪ್ 10 ಬಹು ನಿರೀಕ್ಷಿತ ಸಿನಿಮಾಗಳ ಪೈಕಿ ಬಾಲಿವುಡ್ ಬಾದ್‍ಶಾ ಶಾರೂಖ್ ಖಾನ್ ಅಭಿನಯದ ‘ಝೀರೋ’ ಸಿನಿಮಾ 2ನೇ ಸ್ಥಾನದಲ್ಲಿದ್ದರೆ, ಕೆಜಿಎಫ್ ಮೊದಲ ಸ್ಥಾನದಲ್ಲಿದೆ. ಶೇ.57 ಜನ ಕೆಜಿಎಫ್ ಪರ ಒಲವು ವ್ಯಕ್ತಪಡಿಸಿದ್ದರೆ, ಶೇ.18.4 ರಷ್ಟು ಜನ ಝೀರೋ ಪರ ಒಲವು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಐಎಂಡಿಬಿಯಲ್ಲಿ ಮೊದಲ ಸ್ಥಾನ ಪಡೆದ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಕೆಜಿಎಫ್ ಪಾತ್ರವಾಗಿದೆ.
Advertisement
Advertisement
ಈಗಾಗಲೇ ಕೆಜಿಎಫ್ ಸಿನಿಮಾ ಆಡಿಯೋ ರೈಟ್ಸ್ ಲಹರಿ ಸಂಸ್ಥೆ ಖರೀದಿ ಮಾಡಿದ್ದು, ಹಿಂದಿ ಭಾಷೆ ಬಿಟ್ಟು ಉಳಿದ 4 ಭಾಷೆಗಳ ಹಕ್ಕುಗಳನ್ನು ಪಡೆದುಕೊಂಡಿದೆ. ಈ ಹಿಂದೆ ಬಾಹುಬಲಿ ಸಿನಿಮಾ ಆಡಿಯೋವನ್ನು 3 ಕೋಟಿ ರೂ.ಗೆ ಖರೀದಿ ಮಾಡಿದ್ದ ಲಹರಿ ಸಂಸ್ಥೆ ಕೆಜಿಎಫ್ ಚಿತ್ರದ ಆಡಿಯೋವನ್ನು 3.60 ಕೋಟಿ ರೂ.ಗೆ ಖರೀದಿ ಮಾಡಿದೆ. ಇದರೊಂದಿಗೆ ದಕ್ಷಿಣ ಭಾರತದ ಸಿನಿ ಇತಿಹಾಸದಲ್ಲಿ ಕೆಜಿಎಫ್ ಹೊಸ ದಾಖಲೆ ಬರೆದಂತಾಗಿದೆ.
Advertisement
ಈ ಹಿಂದೆ ಐಎಂಡಿಬಿಯ ಬಹು ನಿರೀಕ್ಷಿತ ಸಿನಿಮಾಗಳ ಪೈಕಿ ರಜಿನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ 2.0 ಮೊದಲ ಸ್ಥಾನ ಪಡೆದಿದ್ದರೆ, ಕೆಜಿಎಫ್ ಎರಡನೇ ಸ್ಥಾನ ಪಡೆದುಕೊಂಡಿತ್ತು.
Advertisement
ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಕೆಜಿಎಫ್ ಒಟ್ಟು ಐದು ಭಾಷೆಗಳಲ್ಲಿ ನಿರ್ಮಾಣಗೊಂಡಿವೆ. ಪಂಚಭಾಷೆಯಲ್ಲಿ ಕೆಜಿಎಫ್ ತೆರೆಗೆ ಬರುತ್ತಿದ್ದು, ಈಗಾಗಲೇ ಚಿತ್ರದ ಟ್ರೇಲರ್ ಮೂಲಕ ದೇಶಾದ್ಯಂತ ತನ್ನ ಹವಾ ಸೃಷ್ಟಿ ಮಾಡಿದೆ. ಚಿತ್ರೀಕರಣದ ಆರಂಭದಿಂದ ಒಂದಿಲ್ಲೊಂದು ವಿಷಯಕ್ಕೆ ಕೆಜಿಎಫ್ ಸದ್ದು ಮಾಡುತ್ತಾ ಬರುತ್ತಿದೆ. ಡಿಸೆಂಬರ್ 21ರಂದು ಚಿತ್ರ ತೆರೆಕಾಣಲಿದೆ. ಟ್ರೇಲರ್ ಹವಾ ಮೂಲಕವೇ ಸ್ಯಾಂಡಲ್‍ವುಡ್‍ಗೆ ಸೀಮಿತವಾಗಿದ್ದ ಕೆಜಿಎಫ್ ಬಾಲಿವುಡ್ ಅನ್ನೂ ಮೀರಿ ವಿಶ್ವ ಮಟ್ಟದಲ್ಲಿಯೂ ಹೆಸರು ಮಾಡಲಿದೆ ಎಂಬ ಮಾತುಗಳೂ ವ್ಯಾಪಕವಾಗಿಯೇ ಕೇಳಿ ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv