ಹುಬ್ಬಳ್ಳಿ: ಸದಾ ಒಂದಲ್ಲಾ ಒಂದು ಸುದ್ದಿಯಲ್ಲಿರುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಎಡವಟ್ಟು ಬಯಲಾಗಿದೆ. ಅವಧಿ ಮುಗಿದಿರುವ ಔಷಧಿಯನ್ನು ಕಿಮ್ಸ್ ನ ಚಿಕ್ಕ ಮಕ್ಕಳ ವಾರ್ಡ್ ನಲ್ಲಿ ಇರುವ ನೂರಾರು ಚಿಕ್ಕ ಮಕ್ಕಳಿಗೆ ವೈದ್ಯರೊಬ್ಬರು ನೀಡಿದ್ದಾರೆ.
ಇಂದು ಬೆಳಗ್ಗಿನ ಜಾವ ಚಿಕ್ಕ ಮಕ್ಕಳ ವಿಭಾಗಕ್ಕೆ ಬಂದ ವೈದ್ಯರೊಬ್ಬರು ವಿಟಮಿನ್ ಡಿ ಔಷಧಿಯನ್ನು ನೀಡಿ ದಿನಕ್ಕೆ ಎರಡು ಹೊತ್ತು ಮಗುವಿಗೆ ನೀಡುವಂತೆ ಸೂಚಿಸಿದ್ದಾರೆ. ಆದ್ರೆ ಅದೃಷ್ಟವಶಾತ್ ಆ ಪೋಷಕ ಮಗುವಿಗೆ ಔಷಧಿ ನೀಡುವ ಮೊದಲು ಅದನ್ನು ಗಮನಿಸಿದಾಗ ಡೇಟ್ ಬಾರ್ ಆಗಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಬದುಕಿದ್ದ ಯುವಕನನ್ನು ಮೃತಪಟ್ಟಿದ್ದಾನೆಂದು ಶವಾಗಾರದಲ್ಲಿಟ್ರು- ಹುಬ್ಬಳ್ಳಿ ಕಿಮ್ಸ್ ವೈದ್ಯರ ಎಡವಟ್ಟಿಗೆ ತೀವ್ರ ಆಕ್ರೋಶ
Advertisement
ಕೂಡಲೇ ಡೇಟ್ ಬಾರ್ ಆಗರುವ ಔಷಧಿಯನ್ನು ಮಕ್ಕಳಿಗೆ ಯಾರು ನೀಡದಂತೆ ಎಲ್ಲ ಪೋಷಕರಿಗೆ ತಿಳಿಸಿದ್ದಾರೆ. ಒಟ್ಟಿನಲ್ಲಿ ಪೋಷಕರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ಒಂದು ತಪ್ಪಿದೆ. ವೈದ್ಯರ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಕಿಮ್ಸ್ ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.